ಬೆಂಕಿ ಮಳೆಯಾಯ್ತು.. ಕಪ್ಪೆ ಮಳೆಯಾಯ್ತು.. ಈಗ? ಅಷ್ಟಕ್ಕೂ ನಿಮಗೆ ಚಾಕ್ಲೆಟ್ ಫ್ಲೆವರ್ ಇಷ್ಟಾನಾ?

ಬೆಂಕಿ ಮಳೆಯಾಯ್ತು.. ಕಪ್ಪೆ ಮಳೆಯಾಯ್ತು.. ಈಗ? ಅಷ್ಟಕ್ಕೂ ನಿಮಗೆ ಚಾಕ್ಲೆಟ್ ಫ್ಲೆವರ್ ಇಷ್ಟಾನಾ?

ಮಳೆ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ..? ಮಳೆ ಬರ್ತಿದೆ ಅಂದ್ರೆ ಸಾಕು, ಓಡಿ ಹೋಗಿ ಹೊರ್ಗಡೆ ನಿಂತು ಮಳೆಯಲ್ಲಿ ನೆನೆಯೋದೇ ಒಂದ್​ ರೀತಿ ಮಜಾ. ಆದ್ರೀಗ, ಈ ಊರಲ್ಲಿ ನಾರ್ಮಲ್​ ಮಳೆ ಬರ್ತಾಯಿಲ್ಲ ಸಾರ್​,  ಬದಲಾಗಿ ಚಾಕ್ಲೆಟ್​ ಮಳೆ ಬರ್ತಾಯಿದೆ.

blank

ಕಪ್ಪೆ ಮಳೆ, ಚೇಳಿನ ಮಳೆಯಾಯ್ತು, ಈಗ ಚಾಕ್ಲೇಟ್​ ಮಳೆ

ಹೌದೂ, ಸ್ವಿಟ್ಸರ್​ಲ್ಯಾಂಡ್​ನ ಔಲ್ಟನ್​ನ ಒಂದು ಫ್ಯಾಕ್ಟರಿಯಲ್ಲಿ ಕೋಕೋ ಪೌಡರ್​ನ ಕೂಲ್​ ಮಾಡ್ಬೇಕಾದ್ರೆ ಅದು ಬ್ಲಾಸ್ಟ್​ ಆಗಿದೆ. ಬ್ಲಾಸ್​ ಆದ ಸಂದರ್ಭದಲ್ಲಿ, ಇಡೀ ಕೋಕೋ ಪೌಡರ್​ ಫ್ಯಾಕ್ಟರಿಯಿಂದ ಬರ್ಸ್ಟ್​ ಆಗಿ, ಇಡೀ ಸಿಟಿ ತುಂಬಾ ಕೋಕೋ ಪೌಡರ್​ನ ಮಳೆ ಸುರಿದಿದೆ. ಹೀಗಾಗಿ, ಒಂದ್​ ಕ್ಷಣ ಎಲ್ಲರೂ ಧಂಗಾಗಿ ಹೋಗಿದ್ದು, ಏನಿದು ಪ್ರಕೃತಿ ವಿಕೋಪವಾ, ಚಾಕ್ಲೆಟ್​ ಮಳೆ ಬರ್ತಿದ್ಯಲ್ಲಾ..? ಏನಪ್ಪ ಇದು ಅಂತ ಕಂಗಾಲಾಗಿದ್ದಾರೆ. ನಂತರ, ಫ್ಯಾಕ್ಟರಿಯಲ್ಲಿ ಹೀಗೆ ಬರ್ಸ್ಟ್​ ಆಗಿದೆ ಅಂತ ತಿಳಿದ ಮೇಲೆ ಜನ ನಿಟ್ಟುಸಿರನ್ನ ಬಿಟ್ಟಿದ್ದಾರೆ. ಇನ್ನು ಚಾಕ್ಲೆಟ್ ಫ್ಲೆವರ್ ಇಷ್ಟಾ ಪಡೋರಿ..ಮನ್ಸಲ್ಲೇ ಅದು ಇದು ಎಲ್ಲಾ ಕಲ್ಪಿಸಿಕೊಂಡು ಬೆಚ್ಚಗೆ ಮಲಗಿದ್ದಾರೆ.

blank

 

 

 

Source: newsfirstlive.com Source link