ಉಗ್ರರ ಉಪಟಳಕ್ಕೆ ಬ್ರೇಕ್‌ ಹಾಕಲು ಎಲ್ಲಾ ದೇಶಗಳು ಒಂದಾಗಬೇಕು; ಕೇಂದ್ರ ಸಚಿವ ರಾಜನಾಥ್​​ ಸಿಂಗ್​​

ಉಗ್ರರ ಉಪಟಳಕ್ಕೆ ಬ್ರೇಕ್‌ ಹಾಕಲು ಎಲ್ಲಾ ದೇಶಗಳು ಒಂದಾಗಬೇಕು; ಕೇಂದ್ರ ಸಚಿವ ರಾಜನಾಥ್​​ ಸಿಂಗ್​​

ನವದೆಹಲಿ: ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿತು. ಎರಡು ದಶಕಗಳ ಯುದ್ಧದ ನಂತರ ಅಮೆರಿಕ ತನ್ನ ಸೈನ್ಯವನ್ನು ಹಿಂಪಡೆಯುವ ಎರಡು ವಾರಗಳ ಮೊದಲು ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಎಲ್ಲಾ ಪ್ರಮುಖ ನಗರಗಳನ್ನು ಕೆಲವೇ ದಿನಗಳ ಅಂತರದಲ್ಲಿ ವಶಪಡಿಸಿಕೊಂಡರು. ಈ ಬೆನ್ನಲ್ಲೇ ಕಾಬೂಲ್​​ ಮೇಲೆ ದಾಳಿ ನಡೆದಿದ್ದು, ಈ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಟ್ವೀಟ್​​ ಮಾಡಿದ್ದಾರೆ.

ಕಾಬೂಲ್​ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ. ಎಲ್ಲಾ ದೇಶಗಳು ಈ ವೇಳೆ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಅರಿಯಬೇಕು. ಜೊತೆಗೆ ಈ ಪರಿಸ್ಥಿತಿಯನ್ನು ಬಳಸಿಕೊಂಡು ಗಡಿ ವಿವಾದವಾಗಲಿ ಅಥವಾ ಉಗ್ರ ಚಟುವಟಿಕೆಗಳು ಹೆಚ್ಚಾಗಲು ಇತರೆ ದೇಶಗಳು ಅನುವು ಮಾಡಿಕೊಡಬಾರದು ಅಂತ ನೆರೆ ರಾಷ್ಟ್ರಗಳಿಗೆ ರಕ್ಷಣಾ ಸಚಿವರು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಎಲ್ಲಾ ದೇಶಗಳು ಉಗ್ರರ ಉಪಟಳಕ್ಕೆ ಬ್ರೇಕ್‌ ಹಾಕಬೇಕು ಎಂದಿದ್ದಾರೆ.

ಇದನ್ನೂ ಓದಿ: ತಾಲಿಬಾನ್​​​​ ವಶಕ್ಕೆ ಪಡೆದ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ವಾಪಸ್​ ಆದ ಒಸಾಮಾ ಬಿನ್​ ಲಾಡೆನ್​ ಆಪ್ತ

Source: newsfirstlive.com Source link