‘ಸ್ಥಳಾಂತರ ಕಾರ್ಯಾಚರಣೆ ನಿಲ್ಲುವ ಮಾತೇ ಇಲ್ಲ’ -ಅಮೆರಿಕಾ

‘ಸ್ಥಳಾಂತರ ಕಾರ್ಯಾಚರಣೆ ನಿಲ್ಲುವ ಮಾತೇ ಇಲ್ಲ’ -ಅಮೆರಿಕಾ

ವಾಷಿಂಗ್ಟನ್​​: ಅಫ್ಘಾನಿಸ್ತಾನದಿಂದ ಸ್ಥಳಾಂತರ ಕಾರ್ಯ ಆಗಸ್ಟ್​ 31ರ ನಂತರ ಯಾವುದೇ ಕಾರಣಕ್ಕೂ ಮಾಡಬಾರದು ಎಂದು ತಾಲಿಬಾನ್​​ ಅಮೆರಿಕಾಗೆ ವಾರ್ನ್​​ ಮಾಡಿತ್ತು. ಕಾಬೂಲ್​ನಲ್ಲಿ ಉಗ್ರರ ದಾಳಿ ಮತ್ತು ಅಮೆರಿಕಾ ಸೇನೆಯ ಪ್ರತಿದಾಳಿಯಿಂದಾಗಿ ಜನರನ್ನು ಸ್ಥಳಾಂತರ ಮಾಡುವ ಕಾರ್ಯಚರಣೆಯನ್ನು ಬಂದ್​ ಮಾಡಲಾಗಿತ್ತು. ಆದರೀಗ ಈ ಬಗ್ಗೆ ಅಮೆರಿಕಾ ಪ್ರತಿಕ್ರಿಯೆ ನೀಡಿದೆ. 

ಈ ಸಂಬಂಧ ಮತ್ತೆ ಏರ್​ ಲಿಫ್ಟ್​ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು ಅಂತ ಶ್ವೇತ ಭವನದ ವಕ್ತಾರರು ಮಾಹಿತಿ ನೀಡಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್​ ಸ್ಥಗಿತವಾಗಿರುವ ಕಾರ್ಯಾಚರಣೆಯನ್ನು ಮುಂದುವರೆಸುವಂತೆ ಸೂಚನೆ ನೀಡಿದ್ದಾಗಿ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: ಅವಶ್ಯಕತೆ ಬಿದ್ದರೆ ಅವರದ್ದೇ ನೆಲಕ್ಕೆ ನುಗ್ಗಿ ಉಗ್ರವಾದಿಗಳನ್ನ ಮಟ್ಟ ಹಾಕುತ್ತೇವೆ- ರಾಜನಾಥ್ ಸಿಂಗ್ 

Source: newsfirstlive.com Source link