ವಿದ್ಯುತ್ ಬಿಲ್ ಕೇಳಿದಕ್ಕೆ ಕಲೆಕ್ಟರ್‌ಗೆ ಹಿಗ್ಗಾಮುಗ್ಗಾ ಥಳಿಸಿದ ತಂದೆ ಮಗ

ಕೋಲಾರ: ಬಾಕಿ ವಿದ್ಯುತ್ ಬಿಲ್ ಕೇಳಿದ ಬಿಲ್ ಕಲೆಕ್ಟರ್‌ಗೆ ತಂದೆ ಮಗ ಹಿಗ್ಗಾಮುಗ್ಗಾ ಥಳಿಸಿದ್ದು, ಗಾಯಾಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಹಳ್ಳಿಯಲ್ಲಿ ಮನೆ ಮನೆಗೆ ತೆರಳಿ ವಿದ್ಯುತ್ ಬಿಲ್ ನೀಡುತ್ತಿದ್ದ ವೇಳೆ ಬಿಲ್ ಕಲೆಕ್ಟರ್ ಮೇಲೆ ಮನಸೋ ಇಚ್ಛೆ ಥಳಿಸಲಾಗಿದೆ. ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ವ್ಯಾಪ್ತಿಯ ಕೊತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಡೆದಾಟದ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದೆ.

ವಿದ್ಯುತ್ ಬಿಲ್ ಕಲೆಕ್ಟರ್ ನಾಗೇಶ್ ಮೇಲೆ ಹಲ್ಲೆ ನಡಿಸಿದ್ದಾರೆ. ಗ್ರಾಮದ ಉತ್ತಣ್ಣ ಹಾಗೂ ಅವರ ಮಗ ಶ್ರೀನಾಥ್ ಹಲ್ಲೆ ಮಾಡಿದ್ದಾರೆ. ಉತ್ತಣ್ಣ 13,000 ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಇತ್ತೀಚೇಗೆ ಮುತ್ತಣ್ಣ ಮನೆಗೆ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿತ್ತು. ಇದನ್ನ ಪ್ರಶ್ನಿಸಿದ್ದಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಕೊಪ್ಪಳ ಅಬಕಾರಿ ಡಿಸಿ ಹಣ ಕೊಟ್ಟಿರೋದು ಶುದ್ದ ಸುಳ್ಳು: ಕೆ. ಗೋಪಾಲಯ್ಯ

ಈ ವೇಳೆ ಬಿಲ್ ಕಲೆಕ್ವರ್ ನಾಗೇಶ್, ಶ್ರೀನಾಥ್ ಮಧ್ಯೆ ಹೊಡೆದಾಟ ನಡೆದಿದ್ದು, ಮಧ್ಯ ಪ್ರವೇಶ ಮಾಡಿದ ಉತ್ತಣ್ಣ ಸಹ ಹಲ್ಲೆ ಮಾಡಿದ್ದಾರೆ. ಹೊಡೆದಾಟ ದಿಂದ ನಾಗೇಶ್ ಗೆ ಸಣ್ಣ ಪುಟ್ಟ ಗಾಯಗಳಾಗಿ ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Source: publictv.in Source link