ಗೆಲುವಿಗಾಗಿ ಹಾತೊರೆಯುತ್ತಿರುವ ಕಿಂಗ್ ಖಾನ್.. ಸೌಥ್ ಡೈರೆಕ್ಟರ್​ಗೆ ಮಣೆ ಹಾಕುತ್ತಿದ್ದಾರೆ ಶಾರುಖ್​!

ಗೆಲುವಿಗಾಗಿ ಹಾತೊರೆಯುತ್ತಿರುವ ಕಿಂಗ್ ಖಾನ್.. ಸೌಥ್ ಡೈರೆಕ್ಟರ್​ಗೆ ಮಣೆ ಹಾಕುತ್ತಿದ್ದಾರೆ ಶಾರುಖ್​!

ಬಾಲಿವುಡ್​​​​ನ ಬಾದ್​ಶಾ ಕಿಂಗ್ ಖಾನ್ ಶಾರುಖ್ ಖಾನ್ ಒಂದು ಗೆಲುವಿಗಾಗಿ ಎದುರು ನೋಡ್ತಿದ್ದಾರೆ.. ನಿಂತ್ರು ಕುಂತ್ರು ಹಮ್​ ಕೋ ಏಕ್ ವಿಕ್ಟರಿ ಚಾಯಿಯೇ ಅಂತ ಕನವರಿಸುತ್ತಿದ್ದಾರೆ. ಟೈಮ್​​​ನಲ್ಲಿ ಶಾರುಖ್ ಯಾವ ಡೈರೆಕ್ಟರ್ ಹಿಂದೆ ಬಿದ್ದಿದ್ದಾರೆ ಗೊತ್ತಾ..? ಜಸ್ಟ್ ವಾಚ್ ಇಟ್..

ನಮ್ಮ ಕೆಜಿಎಫ್​​​ನ ರಾಕಿ ಭಾಯ್ ಎದುರು ಶಾರುಖ್ ಖಾನ್ ಸೋತ್ತಿದ್ದೆ ಸೋತ್ತಿದ್ದು ಸೋಲಿನ ಪಾತಳದಿಂದ ಗೆಲುವಿನ ಶಿಖರವನ್ನ ಏರಲು ಆಗ್ತಾಲೇ ಇಲ್ಲ. ಒಂದ್ ಟೈಮ್​​ನಲ್ಲಿ ಶಾರುಖ್​​​​​ ಮುಟ್ಟಿದ್ದೆಲ್ಲವು ಚಿನ್ನ. ಆದ್ರೆ ಈಗ ಕಿಂಗ್ ಖಾನ್​ಗೆ ಹೆಜ್ಜೆ ಹೆಜ್ಜೆಗೂ ಸೋತು ಸೋತು ಸುಣ್ಣ.. ಈ ಕಾರಣಕ್ಕೆ ಶಾರುಖ್ ಹೊಸ ಪ್ಲಾನ್ ಮಾಡಿದ್ದಾರೆ. ನಾರ್ಥ್ ಡೈರೆಕ್ಟರ್ ಸಹವಾಸವೇ ಬೇಡ ಸೌಥ್ ಡೈರೆಕ್ಟರ್ಸ್ ಸಂಘ ಮಾಡೋಣ. ಅವರ್ ಮಾಡೋ ಕಥೆಯಲ್ಲಿ ಹೀರೋ ಆಗೋಣ ಅಂತ ಡಿಸೈಡ್ ಮಾಡಿದ್ದಾರೆ.. ಹಾಗಾದ್ರೆ ಶಾರುಖ್ ಯಾವ ಸೌಥ್ ಸ್ಟಾರ್ ಡೈರೆಕ್ಟರ್ ಗಾಳ ಹಾಕಿದ್ದಾರೆ ಗೊತ್ತಾ?

blank

ಅಟ್ಲೀ ಜೊತೆ ಕಿಂಗ್ ಖಾನ್ ಹೊಸ ಸಿನಿಮಾ..?
ಸಾಲು ಸಾಲು ಸಿನಿಮಾಗಳ ಸೋಲನ್ನ ಕಂಡಿರೋ ಶಾರುಖ್ ಪಠಾಣ್ ಅನ್ನೋ ಸಿನಿಮಾವನ್ನ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಶಾರುಖ್ ಜೋಡಿಯಾಗಿದ್ದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಪಠಾಣ್ ಸಿನಿಮಾದ ಜೊತೆಗೆ ಫಸ್ಟ್ ಟೈಮ್ ಆಮಿರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡ ಸಿನಿಮಾದಲ್ಲಿ ಅತಿಥಿ ಪಾತ್ರವೊಂದನ್ನ ಶಾರುಖ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಮಾಚಾರಗಳ ನಡುವೆ ಖಾನ್ ತಮಿಳಿನ ‘ರಾಜ ರಾಣಿ’ ಖ್ಯಾತಿಯ ಅಟ್ಲೀ ಕುಮಾರ್ ಜೊತೆ ಸಿನಿಮಾ ಮಾಡಲಿದ್ದಾರೆ ಅನ್ನೋ ಸಮಾಚಾರ ಸೌಥ್ ನಿಂದ ನಾರ್ಥ್​ ತನಕ ಹಬ್ಬುತ್ತಿದೆ.

blank

ಅಟ್ಲೀ ಕುಮಾರ್.. ನಯನತಾರ ಕಂಬ್ಯಾಕ್ ಮಾಡುವಂತೆ ಮಾಡಿದ ರಾಜ ರಾಣಿ ಸಿನಿಮಾ ಕೊಟ್ಟ ತಮಿಳು ಪ್ರತಿಭೆ. ದಳಪತಿ ವಿಜಯ್ ಜೊತೆ ತೇರಿ, ಮೆರ್ಸೆಲ್, ಬಿಗಿಲ್ ಸಿನಿಮಾಗಳನ್ನ ಮಾಡಿದ ನಿರ್ದೇಶಕ ಈಗ ಶಾರುಖ್ ಖಾನ್​ಗೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ನವೆಂಬರ್ ತಿಂಗಳಿನಿಂದ ಶಾರುಖ್ – ಅಟ್ಲೀ ಕುಮಾರ್ ಸಿನಿಮಾ ಕಾಂಬೋ ಶುರುವಾಗಲಿದೆ ಅನ್ನೋ ಮಾಹಿತಿ ಹರಿದಾಡುತ್ತಿದೆ.

ಶಾರುಖ್ ಖಾನ್ – ಅಟ್ಲೀ ಕುಮಾರ್ ಅವರ ಮುಂದಿನ ಸಿನಿಮಾದ ಹೀರೋಯಿನ್ ಆಗಿ ಸೌಥ್ ಲೇಡಿ ಸೂಪರ್ ಸ್ಟಾರ್ ನಯನತಾರ ಕಂಗೊಳಿಸಲಿದ್ದಾರೆ ಅನ್ನೋ ಮಾತುಗಳು ಚಾಲ್ತಿಗೆ ಬಂದಿವೆ.. ಒಟ್ಟಿನಲ್ಲಿ ಬಾಲಿವುಡ್ ಬಾದ್​ಶಾ ಒಂದೊಳ್ಳೆ ಸಕ್ಸಸ್​ಗಾಗಿ ಸರ್ಕಸ್ ಅಂತು ಮಾಡ್ತಿರೋದು ಸತ್ಯ.

Source: newsfirstlive.com Source link