ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶವಿದೆ, ಆದ್ರೆ ಕೋ ಎಜುಕೇಶನ್​ ಇರೋದಿಲ್ಲ- ತಾಲಿಬಾನ್

ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶವಿದೆ, ಆದ್ರೆ ಕೋ ಎಜುಕೇಶನ್​ ಇರೋದಿಲ್ಲ- ತಾಲಿಬಾನ್

ಅಫ್ಘಾನಿಸ್ತಾನದ ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶ ನೀಡುತ್ತೇವೆ, ಆದರೆ ಕೋ ಎಜುಕೇಶನ್​​ಗೆ ಅವಕಾಶ ನೀಡೋದಿಲ್ಲ ಎಂದು ತಾಲಿಬಾನ್​ ನಾಯಕ ಹೇಳಿಕೆ ನೀಡಿದ್ದಾರೆ.

1990ರಲ್ಲಿ ಅಧಿಕಾರವೊಂದಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ ಶಿಕ್ಷಣದಿಂದ ಬ್ಯಾನ್​ ಮಾಡಿದ್ದ ತಾಲಿಬಾನ್​, ಈ ಬಾರಿ ತಮ್ಮ ಆಡಳಿತದಲ್ಲಿ ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶ ನೀಡುತ್ತೇವೆ ಎಂದು ಹೇಳಿದೆ. ಶರಿಯಾ ನಿಯಮಗಳ ಅನ್ವಯ ಮಹಿಳೆಯರು ಶಿಕ್ಷಣ ಪಡೆಯಬಹುದು ಅಂತಾ ತಾಲಿಬಾನ್​ ನಾಯಕ ಅಬ್ದುಲ್ ಬಾಕಿ ಹಕ್ಕಾನಿ ಹೇಳಿದ್ದಾರೆ.

ಇದನ್ನೂ ಓದಿ: ಉಗ್ರರ ಉಪಟಳಕ್ಕೆ ಬ್ರೇಕ್‌ ಹಾಕಲು ಎಲ್ಲಾ ದೇಶಗಳು ಒಂದಾಗಬೇಕು; ಕೇಂದ್ರ ಸಚಿವ ರಾಜನಾಥ್​​ ಸಿಂಗ್​​

ತಾಲಿಬಾನ್​ ನಾಯಕರು ಇಸ್ಲಾಮಿಕ್​, ರಾಷ್ಟ್ರೀಯ ಮತ್ತು ಐತಿಹಾಸಿಕ ಮೌಲ್ಯಗಳಿಗೆ ಅನುಗುಣವಾಗಿ ಇಸ್ಲಾಮಿಕ್​ ಪಠ್ಯವನ್ನು ರಚಿಸಲು ಬಯಸುತ್ತದೆ. ಆ ಮೂಲಕ ಇತರೇ ದೇಶಗಳೊಂದಿಗೆ ಅಭಿವೃದ್ಧಿಯ ವಿಚಾರದಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಅಬ್ದುಲ್ ಬಾಕಿ ಹಕ್ಕಾನಿ ತಿಳಿಸಿದ್ದಾರೆ.

Source: newsfirstlive.com Source link