ಪುಟಾಣಿ ಕೃಷ್ಣನನ್ನು ಎತ್ತಿಕೊಂಡ ರಾಧಿಕಾ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಐರಾ, ಯಥರ್ವ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಕೃಷ್ಣನ ಅಲಂಕಾರ ಮಾಡಿ ತಂದೆ-ತಾಯಂದಿರು ಸಂಭ್ರಮಿಸುತ್ತಿದ್ದಾರೆ. ಈ ಬಾರಿ ಮಕ್ಕಳ ಹಳೆಯ ಫೋಟೋಗಳನ್ನು ಹಂಕಿಕೊಂಡು ಕಳೆದ ವರ್ಷದ ನೆನೆಪುಗಳನ್ನು ಮೆಲಕು ಹಾಕಿದ್ದಾರೆ. ಇದನ್ನೂ ಓದಿ:  ಕೃಷ್ಣಾಷ್ಟಮಿಗೆ ಶ್ವೇತಾ ಶ್ರೀವಾತ್ಸವ್ ಫೋಟೋಶೂಟ್

ಈ ವರ್ಷದ ಜನ್ಮಾಷ್ಟಮಿ ಪೂಜೆ ಹಾಗೂ ಕಳೆದ ವರ್ಷದ ಕೃಷ್ಣ ಮತ್ತು ರಾಧೆಯೊಂದಿಗೆ ಮತ್ತು ನನ್ನ ಮೊದಲ ಲಿಟಲ್ ಕೃಷ್ಣನ ಫ್ಲಾಶ್‍ಬ್ಯಾಕ್ ಅನ್ನು ಸಹ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡು ಕಳೆದ ವರ್ಷ ತಮ್ಮ ಮಕ್ಕಳಿಗೆ ರಾಧೆ, ಕೃಷ್ಣನ ವೇಷ ಹಾಕಿ ಮಕ್ಕಳಿಗೆ ಅಲಂಕಾರ ಮಾಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್ ಶೇರ್ ಮಾಡಿಕೊಂಡಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೃಷ್ಣನ ವೇಷ ತೊಟ್ಟಿರುವ ಐರಾಳನ್ನು ರಾಧಿಕಾ ಮತ್ತು ಅವರು ತಂದೆ ಎತ್ತಕೊಂಡಿರುವುದು ಮತ್ತು ಐರಾಳಿಗೆ ಕೃಷ್ಣನ ಅಲಂಕಾರವನ್ನು ಮಾಡುತ್ತಿರುವ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ.

 

ಐರಾ, ಯಥರ್ವ್‍ನ ಈ ಮುದ್ದಾದ ಫೋಟೋವನ್ನು ನೋಡಿ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ಇವರು ಎಂದಿಗೂ ಬೆಸ್ಟ್, ಕೃಷ್ಣ, ರಾಧೆ ತುಂಬಾ ಮುದ್ದಾಗಿದ್ದಾರೆ ಎಂದು ಕಮೆಂಟ್‍ಗಳ ಸುರಿಮಳೆ ಗೈದಿದ್ದಾರೆ.

blank

ದೇಶಾದ್ಯಂತ ಇಂದು ಜನರು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಡಗರದಿಂದ ಆಚರಿಸುತ್ತಿದ್ದಾರೆ. ಈ ನಡುವೆ ಸ್ಯಾಂಡಲ್‍ವುಡ್ ತಾರೆಯರು ಅವರ ಮಕ್ಕಳಿಗೆ ಕೃಷ್ಣನ ವೇಷ ತೊಟ್ಟು ಸಂಬ್ರಮಿಸುತ್ತಿದ್ದಾರೆ.

Source: publictv.in Source link