ಯುವತಿಗೆ ಮದುವೆ ನಿಶ್ಚಯ- ಕತ್ತು ಕೊಯ್ದ ಪಾಗಲ್ ಪ್ರೇಮಿ

ಉಡುಪಿ: ಯುವತಿಗೆ ಚಾಕು ಇರಿದು, ಯುವಕ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ. ಇಬ್ಬರೂ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿಯ ಸಂತೆಕಟ್ಟೆ ಸಮೀಪ ಉದ್ಯೋಗಿಯಾಗಿರುವ ಯುವತಿ ಮತ್ತು ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ವಾರದ ಹಿಂದೆ ನಿಶ್ಚಿತಾರ್ಥ ಆಗಿತ್ತು. ಇದರಿಂದ ಗೆಳೆಯ ಕುಪಿತಗೊಂಡಿದ್ದ. ಇಬ್ಬರಿಗೂ ಜಗಳ ಆಗಿದೆ. ಬ್ಯಾಂಕಿನಿಂದ ಆಕೆ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭ ಯುವಕ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಅಡ್ಡಗಟ್ಟಿ ನಿಂತಿದ್ದಾನೆ. ಯುವತಿಯ ಜೊತೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ವಿದ್ಯುತ್ ಬಿಲ್ ಕೇಳಿದಕ್ಕೆ ಕಲೆಕ್ಟರ್‌ಗೆ ಹಿಗ್ಗಾಮುಗ್ಗಾ ಥಳಿಸಿದ ತಂದೆ ಮಗ

ಜಗಳ ಮುಂದುವರೆದಿದ್ದು, ಯುವಕ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ದ್ವಿಚಕ್ರವಾಹನ ದಿಂದ ಯುವತಿ ಕೆಳಗೆ ಬಿದ್ದಿದ್ದಾಳೆ. ಪಾಗಲ್ ಪ್ರೇಮಿಯೂ ನಂತರ ಅದೇ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ. ಸ್ಥಳೀಯರು ಘಟನೆಯನ್ನು ತಪ್ಪಿಸಲು ಯತ್ನಿಸಿದ್ದು, ಅಷ್ಟರಲ್ಲೇ ಇಬ್ಬರೂ ಕುಸಿದು ಬಿದ್ದಿದ್ದಾರೆ. ಉಡುಪಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಸ್‍ಪಿ ಕುಮಾರ್ ಚಂದ್ರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ಕಲೆಹಾಕಿದ್ದಾರೆ.

Source: publictv.in Source link