ಸಚಿವ ಶ್ರೀರಾಮುಲು ಹೆಸರಲ್ಲಿ ವಂಚನೆಯ ಯತ್ನ? ಆಪ್ತನ ಬಂಧನ

ಬೆಂಗಳೂರು: ಸಚಿವ ಶ್ರೀರಾಮುಲು ಆಪ್ತ ಧರ್ಮತೇಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಧರ್ಮತೇಜ್ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

ಧರ್ಮತೇಜ್ ಬಾಗಲೂರು ಮೂಲದ ರಿಯಲ್ ಎಸ್ಟೇಟ್ ಉದ್ಯೋಗಿ ಎಂದು ತಿಳಿದು ಬಂದಿದೆ. ಹಣಕಾಸಿನ ವ್ಯವಹಾರದ ಬಗ್ಗೆ ಸಾಕ್ಷಿ ಸಮೇತ ಪ್ರದೀಪ್ ಎಂಬವರು ದೂರು ನೀಡಿದ್ದರು. ದೂರಿನನ್ವಯ ಎಫ್‍ಐಆರ್ ದಾಖಲು ಮಾಡಿಕೊಂಡಿದ್ದ ಪೊಲೀಸರು ಧರ್ಮತೇಜ್ ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಗುಂಡು, ತುಂಡಿನ ಪಾರ್ಟಿ ಮಾಡಿದ್ದ ಶ್ರೀರಾಮುಲು ಆಪ್ತ ಅಮಾನತು

ಸಚಿವ ಶ್ರೀರಾಮುಲು ಹೆಸರು ಬಳಕೆ ಮಾಡಿಕೊಂಡು ವಂಚನೆಗೆ ಯತ್ನಿಸಿರುವ ಆರೋಪಗಳು ಕೇಳಿ ಬಂದಿವೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಧರ್ಮತೇಜ ವಿರುದ್ಧ ಐಪಿಸಿ 420, 406, 506 ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಪ್ತ ರಾಜಣ್ಣ ಅರೆಸ್ಟ್ – ವಿಜಯೇಂದ್ರ ವಿರುದ್ಧ ಶೀರಾಮುಲು ಕೆಂಡಾಮಂಡಲ

Source: publictv.in Source link