ಕಾಬೂಲ್‌ನಿಂದ ಕಟ್ಟಕಡೆಯ ಅಮೆರಿಕನ್ ಸೈನಿಕನೂ ವಾಪಸ್ -20 ವರ್ಷದ ಹೋರಾಟ ಇಂದು ಅಂತ್ಯ

ಕಾಬೂಲ್‌ನಿಂದ ಕಟ್ಟಕಡೆಯ ಅಮೆರಿಕನ್ ಸೈನಿಕನೂ ವಾಪಸ್ -20 ವರ್ಷದ ಹೋರಾಟ ಇಂದು ಅಂತ್ಯ

ಅಮೆರಿಕ ಸೇನೆ ಕಾಬೂಲ್​ ವಿಮಾನ ನಿಲ್ದಾಣದಿಂದ ಅಮೆರಿಕನ್ ಸೇನೆ ತನ್ನ ದೇಶಕ್ಕೆ ವಾಪಸ್ಸಾಗಿದೆ. ಈ ನಡುವೆ ಅಫ್ಘಾನ್ನಲ್ಲಿ 20 ವರ್ಷದ ಹಿಂದೆ ಹೇಗಿತ್ತೋ ಈಗ ಅದೇ ಕಾನೂನು, ಅದೇ ಹಿಂಸಾಚಾರ, ಅದೇ ಮೌಢ್ಯಾಚಾರ, ಅದೇ ಮದ್ದು ಗುಂಡುಗಳ ಸದ್ದು ರಾರಾಜಿಸುತ್ತಿದೆ.

blank

20 ವರ್ಷಗಳ ಹಿಂದೆ ಅಂದ್ರೆ, 2001 ರಲ್ಲಿ ಅಮೆರಿಕ ಸೇನೆ ಅಫ್ಘಾನ್​ಗೆ ನುಗ್ಗಿತ್ತು. ತಾಲಿಬಾನ್ಉಗ್ರರ ವಿರುದ್ಧ ಹೋರಾಟ ಆರಂಭಿಸಿತ್ತು. ಅದೆಷ್ಟೊ ಉಗ್ರರ ಶಿಬಿರ ನಾಶ ಮಾಡಿತ್ತು. ಇದರ ಫಲವಾಗಿ ಅಫ್ಘಾನ್ನಲ್ಲಿ ತಾಲಿಬಾನ್ಉಗ್ರರ ಸರ್ಕಾರ ಪತನವಾಗಿ ಪ್ರಜಾಪ್ರಭುತ್ವ ಸರ್ಕಾರ ಅಸ್ಥಿತ್ವಕ್ಕೆ ಬಂದಿತ್ತು. ಹೀಗಾಗಿ ಅಫ್ಘಾನ್​ನ ಜನ ನೆಮ್ಮದಿಯಿಂದ ಜೀವನ ಮಾಡುತ್ತಿದ್ರು. ಮಹಿಳೆಯರು ಉದ್ಯೋಗ ಮಾಡುತ್ತಿದ್ರು. ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿದ್ರು. ಗಂಡಸರು ಯಾವುದೇ ಭಯವಿಲ್ಲದೇ ಓಡಾಡುತ್ತಿದ್ರು. ಆದ್ರೆ ಇದೀಗ ಮತ್ತೆ ತಾಲಿಬಾನ್ಉಗ್ರರು ಅಫ್ಘಾನ್​ನ್ನ ವಶಪಡಿಸಿಕೊಂಡಿದ್ದಾರೆ. ಆದ್ರೀಗ ಅಲ್ಲಿ ಆಗ್ತಿರೋದೇನು? ಅದನ್ನ ಎಳೆಎಳೆಯಾಗಿ ಬಿಚ್ಚಿಡ್ತೀವಿ.

blank

ಕಾಬೂಲ್‌ ವಿಮಾನ ನಿಲ್ದಾಣದಿಂದ ವಾಪಸ್ಸಾದ ಅಮೆರಿಕ ಸೇನೆ 
ತೆರವು ಕಾರ್ಯಾಚರಣೆ ಅಂತ್ಯವಾಗಿಸಿದ ಅಮೆರಿಕ
ಅಮೆರಿಕಾಗೆ ಆಗಸ್ಟ್ 31ರ ಗಡುವು ನೀಡಿತ್ತು ತಾಲಿಬಾನ್

ಅಫ್ಘಾನ್​ನಲ್ಲಿ ಅಮೆರಿಕ ಸೇನೆ ಹಂತ ಹಂತವಾಗಿ ವಾಪಸ್ಆಗಿತ್ತು. ಕೊನೆಯದಾಗಿ ಕಾಬೂಲ್ ವಿಮಾನ ನಿಲ್ದಾಣವನ್ನು ಮಾತ್ರ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ಆಗಸ್ಟ್31 ರಂದು ಕಾಬೂಲ್​ ವಿಮಾನ ನಿಲ್ದಾಣದಿಂದಲೇ ತೆರೆಯುವುದಾಗಿ ತಿಳಿಸಿದ್ರು. ಆದ್ರೆ, ಅನಂತರದ ದಿನಗಳಲ್ಲಿ ವಿಸ್ತರಿಸುವ ಮಾತನ್ನು ಆಡಿದ್ರು. ಆದ್ರೆ, ಆಗಸ್ಟ್31 ಕೊನೆಯ ದಿನವಾಗುತ್ತೆ. ಅಷ್ಟರೊಳಗೆ ಕಾಬೂಲ್ ವಿಮಾನ ನಿಲ್ದಾಣ ಬಿಟ್ಟು ಅಮೆರಿಕ ಸೇನೆ ಹೊರಡಬೇಕು. ಇಲ್ಲದಿದ್ರೆ ಪರಿಸ್ಥಿತಿ ಸರಿಯಿರುವುದಿಲ್ಲ ಅಂತ ತಾಲಿಬಾನ್ ಮುಖಂಡನೊಬ್ಬ ಅಮೆರಿಕಗೆ ಎಚ್ಚರಿಕೆ ನೀಡಿದ್ದ. ಈ ಎಚ್ಚರಿಕೆಯ ಬೆನ್ನಲ್ಲಿಯೇ ಅಮೆರಿಕ ತರಾತುರಿಯಲ್ಲಿಯೇ ಏರ್​​​ಲಿಫ್ಟ್​​​ ಮಾಡಿದೆ. ತನ್ನ ದೇಶದ ಪ್ರಜೆಗಳನ್ನು ಹಾಗೂ 20 ವರ್ಷಗಳ ಕಾಲ ಅಫ್ಘಾನ್​ನಲ್ಲಿ ಅಮೆರಿಕ ಸೇನೆಗೆ ಸಹಾಯ ಮಾಡಿದವರು ವಿಮಾನದಲ್ಲಿ ಹೊತ್ತು ಸಾಗಿದೆ. ಅದೇ ರೀತಿ ಬ್ರಿಟನ್, ಭಾರತ, ಜಪಾನ್, ಫ್ರಾನ್ಸ್​ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳು ತಮ್ಮ ದೇಶದ ಪ್ರಜೆಗಳನ್ನು ಏರ್​​​ಲಿಫ್ಟ್​​ ಮಾಡಿದ್ದಾರೆ.

ಆಗಸ್ಟ್15 ರಿಂದ ಕಾಬೂಲ್​​ ವಿಮಾನ ನಿಲ್ದಾಣದಿಂದ ಏರ್​​​ಲಿಫ್ಟ್​​​ ಆರಂಭವಾಗಿತ್ತು. ಇದೀಗ 15 ದಿನಗಳ ಕಾಲ ಸುಮಾರು 1 ಲಕ್ಷದಷ್ಟು ಮಂದಿಯನ್ನು ಅಮೆರಿಕ ಸೇನೆ ಏರ್​​ಲಿಫ್ಟ್​​ ಮಾಡಿದೆ. ಮಂಗಳವಾರ ಕಾಬೂಲ್ ವಿಮಾನ ನಿಲ್ದಾಣವನ್ನು ಬಿಟ್ಟು ಅಮೆರಿಕ ಸೇನೆ ವಾಪಸ್ಸಾಗಿದೆ. ಅಂದ್ರೆ, ಕಾಬೂಲ್ ವಿಮಾನ ನಿಲ್ದಾಣ ಕೂಡ ಇದೀಗ ತಾಲಿಬಾನ್ಉಗ್ರರ ಕೈಸೇರಿದಂತಾಗಿದೆ. ಈ ಮೂಲಕ ಅಮೆರಿಕದ 20 ವರ್ಷದ ಹೊರಾಟ ಮಂಗಳವಾರವೇ ಅಂತ್ಯವಾಗಿದೆ. ಈ ನಡುವೆ ಕಾಬೂಲ್ ವಿಮಾನ ನಿಲ್ದಾಣದ ಸಮೀಪ ಐಸಿಸ್-ಕೆ ಉಗ್ರರು ರಾಕೆಟ್ ದಾಳಿ ನಡೆಸಿದ್ದಾರೆ.

blank

ಅಮೆರಿಕ ಸೇನೆ ಗುರಿಯಾಗಿಸಿಕೊಂಡು ರಾಕೆಟ್‌ ದಾಳಿಗೆ ಯತ್ನ
ರಾಕೆಟ್ ದಾಳಿ ವಿಫಲಗೊಳಿಸಿದ ಅಮೆರಿಕ ಸೇನೆ

ಮಂಗಳವಾರ ಅಮೆರಿಕ ಸೇನೆಗೆ ಕಾಬೂಲ್ ವಿಮಾನ ನಿಲ್ದಾಣ ಕೊನೆಯ ದಿನವಾಗಿದೆ. ಈ ನಡುವೆ ಸೋಮವಾರ ಕೂಡ ಐಸಿಸ್-ಕೆ ಉಗ್ರರು ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು 5 ರಾಕೆಟ್ ದಾಳಿ ನಡೆಸಿದ್ದಾರೆ. ಆದ್ರೆ, ಆ ರಾಕೆಟ್​​ಗಳನ್ನ ಆ್ಯಂಟಿ ಮಿಸೈಲ್ ಸಿಸ್ಟಂ ಸಿ-ಱಮ್ ಬಳಸಿ ವಿಫಲ ಗೊಳಿಸಲಾಗಿದೆ. ಹೀಗಾಗಿ ರಾಕೆಟ್ ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಬಿದ್ದಿದೆ. ಈ ಮುನ್ನ ಅಮೆರಿಕ ಸೈನಿಕರನ್ನೇ ಟಾರ್ಗೆಟ್ ಮಾಡಿ ಐಸಿಸ್-ಕೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ರು. ಆ ದಾಳಿಯಲ್ಲಿ ಅಮೆರಿಕ ಸೇನೆಯ 13 ಯೋಧರು ಮತ್ತು 170ಕ್ಕೂ ಅಧಿಕ ಜನ ಸಾವನ್ನಪ್ಪಿದ್ರು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ಸೇನೆ ಡ್ರೋಣ್ ದಾಳಿ ನಡೆಸಿ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಐಸಿಸ್​-ಕೆ ಮುಖಂಡನನ್ನು ಹತ್ಯೆ ಮಾಡಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ಐಸಿಸ್-ಕೆ ಮತ್ತೆ ಕಾಬೂಲ್​ನಲ್ಲಿ ರಾಕೆಟ್ ದಾಳಿ ನಡೆಸಿದೆ. ಇಂತಹ ಅರಾಜಕತೆಯ ನಡುವೆಯೇ ಅಮೆರಿಕ ಸೇನೆ ವಾಪಸ್ಸಾಗಿದೆ. ಈ ನಡುವೆ ಅಫ್ಘಾನ್ನಲ್ಲಿ ಏನಾಗುತ್ತಿದೆ ಗೊತ್ತಾ? ಪ್ರತಿಯೊಂದು ಘಟನೆಯೂ ಬೆಚ್ಚಿ ಬೀಳಿಸುವಂತಿವೆ.

ಟಿವಿ ಆ್ಯಂಕರ್‌ ಹಿಂದೆ ಗನ್‌ ಹಿಡಿದು ನಿಂತ ಉಗ್ರರು
ತಾಲಿಬಾನ್‌ ಪರ ಮಾತನಾಡುವಂತೆ ಒತ್ತಡ
ಗನ್‌ ಪಾಯಿಂಟ್‌ನಲ್ಲಿ ತಾಲಿಬಾನ್‌ ಪರ ಪ್ರಚಾರ ಮಾಡಿದ ಆ್ಯಂಕರ್

blank

ಯಾವುದಾದ್ರೂ ಟಿವಿ ಆ್ಯಂಕರ್​​​ ಗಳನ್ನು ಅಕ್ಕ ಪಕ್ಕ, ಹಿಂಬದಿ ನಿಲ್ಲಿಸಿಕೊಂಡು ಸುದ್ದಿ ಓದುವುದನ್ನು ನೋಡಿದ್ದೀರಾ? ಸಾಧ್ಯವೇ ಇಲ್ಲ. ಆದ್ರೆ, ಇಲ್ಲೊಬ್ಬರು ಆ್ಯಂಕರ್​​ ಸುದ್ದಿ ಓದುತ್ತಿದ್ದಾರೆ ನೋಡಿ. ಅಬ್ಬಾ! ಎಷ್ಟೊಂದು ಭದ್ರತೆ ಅಂತ ಹುಬ್ಬೇರಿಸಬೇಡಿ. ವಿಷಯ ಬೇರೆಯೇ ಇದೆ. ಹೀಗೆ ಸುದ್ದಿ ಓದುತ್ತಿರೋ ಆ್ಯಂಕರ್​​ ಅಫ್ಘಾನ್ ಟಿವಿ ಚಾನಲ್​​​ನವರು. ತಾಲಿಬಾನ್ಉಗ್ರರು ಟಿವಿ ಚಾನಲ್ ಆಫೀಸ್​​ಗೆ ಬಂದವರು ಆ್ಯಂಕರ್ ಹಿಂಬದಿಗೆ ಹೋಗಿ ನಿಲ್ಲುತ್ತಾರೆ. ಹಾಗೇ ನಿಂತುಕೊಂಡ ಉಗ್ರರು, ಅಫ್ಘಾನ್ನಲ್ಲಿ ಏನೂ ಸಮಸ್ಯೆ ಇಲ್ಲ. ತಾಲಿಬಾನಿಗಳಿಂದ ಯಾರಿಗೂ ಸಮಸ್ಯೆ ಆಗುವುದಿಲ್ಲ. ಇಲ್ಲಿಯ ವ್ಯವಸ್ಥೆ ಉತ್ತಮವಾಗಿದೆ. ಯಾರೂ ಹೆದರಿಕೊಳ್ಳುವ ಅಗತ್ಯವಿಲ್ಲ. ತಾಲಿಬಾನಿಗಳಿಂದ ಉತ್ತಮ ಆಡಳಿತ ಕಾರ್ಯ ನಡೆಯಲಿದೆ ಅಂತ ಹೇಳು ಎನ್ನುತ್ತಾರೆ. ಗನ್ ಪಾಯಿಂಟ್​ನಲ್ಲಿಯೇ ಇದ್ದ ಆ್ಯಂಕರ್ ತಾಲಿಬಾನಿಗಳನ್ನು ಹಾಡಿ ಹೊಗಳುತ್ತಾರೆ.. ಇಷ್ಟೇ ಅಲ್ಲ, ತಾನಿಬಾನಿಗಳು ಟಿವಿ, ರೆಡಿಯೋಗಳಲ್ಲಿ ಮತ್ತೇನು ಮಾಡಿದ್ದಾರೆ ಗೊತ್ತಾ?

blank

ರೇಡಿಯೋ, ಟಿವಿಗಳಲ್ಲಿ ಮಹಿಳೆಯರ ಧ್ವನಿ ಬ್ಯಾನ್
ಮಹಿಳಾ ಕೆಲಸಗಾರರನ್ನು ಮನೆಗೆ ಕಳುಹಿಸುತ್ತಿರುವ ವಾಹಿನಿಗಳು

ತಾಲಿಬಾನ್​ ಉಗ್ರರಿಗೆ ಹಾಸ್ಯ ಮಾಡಿ ಜನರನ್ನು ನಗಿಸುವಂತಿಲ್ಲ. ಹೀಗಾಗಿಯೇ ಹಾಸ್ಯ ನಟನೊಬ್ಬನನ್ನು ಹತ್ಯೆ ಮಾಡಿದ್ರು. ಜೊತೆಗೆ ತಾಲಿಬಾನ್ ಆಡಳಿತದಲ್ಲಿ ಸಂಗೀತಕ್ಕೆ ನಿಷೇಧ.. ಹೀಗಾಗಿ ಖ್ಯಾತ ಸಂಗೀತಗಾರ ಫವಾದ್ ಅಂದರಬಿ ಹತ್ಯೆ ಮಾಡಿದ್ರು. ಈ ಎರಡು ಭೀಕರ ಘಟನೆ ಮಾಸುವ ಮುನ್ನವೆ ಮತ್ತೊಂದು ಆದೇಶ ಹೊರ ಬಿದ್ದಿದೆ. ಅದೇನಂದ್ರೆ, ಟಿವಿ, ರೆಡಿಯೋಗಳಲ್ಲಿ ಮಹಿಳೆಯರ ಧ್ವನಿ ಬ್ಯಾನ್. ಹೌದು, ಇಂತಹವೊಂದು ಆದೇಶ ತಾಲಿಬಾನ್ಉಗ್ರರಿಂದ ಹೊರ ಬಿದ್ದಿದೆ. ಹೀಗಾಗಿಯೇ ಟಿವಿ ಚಾನಲ್ಗಳು, ರೇಡಿಯೋ ಚಾನಲ್ಗಳು ಮಹಿಳಾ ಕೆಲಸಗಾರರನ್ನು ಮನೆಗೆ ಕಳುಹಿಸುತ್ತಿದ್ದಾರೆ. ಉದ್ಯೋಗ ಕಳೆದುಕೊಂಡ ಮಹಿಳೆಯರು ಅತಂತ್ರವಾಗಿ ಬಿಟ್ಟಿದ್ದಾರೆ. ಇದೆಲ್ಲದರ ನಡುವೆ ಅಮೆರಿಕವೊಂದು ದೊಡ್ಡ ಎಡವಟ್ಟು ಮಾಡಿಬಿಟ್ಟಿದೆ. ಆ ಎಡವಟ್ಟು ಕಣ್ಣಲ್ಲಿ ನೀರು ತರಿಸುವಂತಿದೆ.

ಅಮೆರಿಕದ ಡ್ರೋನ್‌ ದಾಳಿಯಲ್ಲಿ 4 ಕಂದಮ್ಮಗಳ ಸಾವು
ಮಕ್ಕಳು ಮಾಡಿದ ತಪ್ಪಾದ್ರೂ ಏನು?

blank

ಈ ಮುದ್ದು ಕಂದಮ್ಮಗಳನ್ನು ನೋಡಿ, ಅದೆಷ್ಟು ಮುದ್ದು ಮುದ್ದಾಗಿವೆ ಅಲ್ವ? ಅವರನ್ನು ನೋಡ್ತಾ ಇದ್ರೆ ಮನಸ್ಸಿಗೆ ಅದೇನೋ ಖುಷಿ, ಆನಂದ ಉಂಟಾಗುತ್ತೆ. ಅವರನ್ನ ನೋಡ್ತಾ ನಿಂತರೆ ತಮ್ಮ ಮನಸ್ಸಿನಲ್ಲಿರೋ ನೋವನೆಲ್ಲಾ ಮರೆತು ಅವರ ಪೋಷಕರು ಖುಷಿಗೊಳ್ಳುತ್ತಿದ್ರು. ಆದ್ರೆ, ಅಮೆರಿಕ ಮಾಡಿದ ಎಡವಟ್ಟಿನಿಂದ ಇಂದು ಈ ಮಕ್ಕಳ ಫೋಟೋ ನೋಡಿ ಕಣ್ಣೀರು ಹಾಕೋ ಪರಿಸ್ಥಿತಿ ನಿರ್ಮಾಣವಾಗಿದೆ. ಅದು, ಏನಾಗಿದೆ ಅಂದ್ರೆ, ಕಾಬೂಲ್ನಲ್ಲಿ ಐಸಿಸ್-ಕೆ ಉಗ್ರರು ಅಮೆರಿಕದವರನ್ನೇ ಟಾರ್ಗೆಟ್ ಮಾಡಿ ಬಾಂಬ್ ದಾಳಿ ನಡೆಸಿದ್ರು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ 48 ಗಂಟೆಯಲ್ಲಿಯೇ ಉಗ್ರರ ಮೇಲೆ ಡ್ರೋನ್ ದಾಳಿ ನಡೆಸಿತ್ತು. ಡ್ರೋನ್ ದಾಳಿಯಲ್ಲಿ ಕಾಬೂಲ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಸೇರಿದಂತೆ 10 ಮಂದಿಯನ್ನು ಹತ್ಯೆ ಮಾಡಿರುವುದಾಗಿ ಅಮೆರಿಕ ಹೇಳಿಕೊಂಡಿತ್ತು. ಆದ್ರೆ, ದುರಾದೃಷ್ಟವಶಾತ್ಅಮೆರಿಕದ ಡ್ರೋನ್ ದಾಳಿಯಲ್ಲಿ ನಾಲ್ಕು ಕಂದಮ್ಮಗಳು ಸಾವನ್ನಪ್ಪಿವೆ.

blank

ಒಟ್ಟಿನಲ್ಲಿ ಅಫ್ಘಾನಿಸ್ತಾನದಲ್ಲಿ ಎಲ್ಲ ಅಯೋಮಯವಾಗುವಂತಾಗಿಬಿಟ್ಟಿದೆ. ಸಾವು ಅದ್ಯಾವ ಘಳಿಗೆಯಲ್ಲಿ, ಅದ್ಯಾವ ಕಡೆಯಿಂದ ಬರುತ್ತೋ ತಿಳಿಯದಂಥ ಸ್ಥಿತಿಗೆ ಅಫ್ಘಾನಿಗಳು ಸಿಲುಕಿಬಿಟ್ಟಿದ್ದಾರೆ. ಈ ನಡುವೆ ಅಮೆರಿಕಾ ಯಡವಟ್ಟು ಉರಿವ ಬೆಂಕಿಗೆ ಪೆಟ್ರೋಲ್​ ಸುರಿದಿದ್ದು.. ಭವಿಷ್ಯದ ಅಫ್ಘಾನಿಸ್ತಾನದ ಧಗಧಗಿಸೋ ಚಿತ್ರಣಕ್ಕೆ ಮುನ್ನುಡಿ ಬರೆದುಬಿಟ್ಟಿದೆ.

ಒಂದು ಕಡೆ ತಾಲಿಬಾನ್ಉಗ್ರರ ಕ್ರೌರ್ಯ, ಮತ್ತೊಂದು ಕಡೆ ಐಸಿಸ್-ಕೆ ದಾಳಿ, ಇನ್ನೊಂದು ಕಡೆ ಅಮೆರಿಕ ಸೇನೆ ಅಫ್ಘಾನ್ ತೊರೆದಿರುವುದು. ಇದೆಲ್ಲವೂ ಅಫ್ಘಾನ್ ಪ್ರಜೆಗಳ ಮೇಲೆ ಪರಿಣಾಮ ಬೀರುತ್ತಿದೆ. ಮತ್ತೆ 20 ವರ್ಷದ ಹಿಂದಿನ ಸ್ಥಿತಿಗೆ ಆಫ್ಘಾನ್ ತೆರಳುತ್ತಿದೆ.

Source: newsfirstlive.com Source link