ನಾಯಕತ್ವದ ಗಲಾಟೆ ಅಂತ್ಯದ ಬೆನ್ನಲ್ಲೇ ಬಿಜೆಪಿ ನಾಯಕರಿಂದ ಇದೀಗ ಹೊಸ ವರಸೆ

ನಾಯಕತ್ವದ ಗಲಾಟೆ ಅಂತ್ಯದ ಬೆನ್ನಲ್ಲೇ ಬಿಜೆಪಿ ನಾಯಕರಿಂದ ಇದೀಗ ಹೊಸ ವರಸೆ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಇತ್ತೀಚಿನವರೆಗೆ ನಾಯಕತ್ವದ ಗಲಾಟೆ ನಡೆಯುತ್ತಿತ್ತು.. ಇದೀಗ ಹೊಸ ವರಸೆ ಶುರುವಾಗಿದೆ ಎನ್ನಲಾಗಿದೆ. ಸಮುದಾಯದ ನಾಯಕರಾಗಿ, ಅದರ ಮೇಲೆ ಹಿಡಿತ ಸಾಧಿಸಲು ಬಿಜೆಪಿ ನಾಯಕರುಗಳು ಮುಂದಾಗಿದ್ದಾರಂತೆ.

ಜಾರಕಿಹೊಳಿ ಹಾಗೂ ಶ್ರೀ ರಾಮುಲು ಕುಟುಂಬದ ಮಧ್ಯೆ ಸಮುದಾಯದ ಮೇಲಿನ ಹಿಡಿತಕ್ಕೆ ಪೈಪೋಟಿ ಶುರುವಾಗಿದೆ ಎನ್ನಲಾಗಿದೆ. ಕಳೆದ ವಾರ ಹೈಕಮಾಂಡ್ ನಾಯಕರನ್ನು ಜಾರಕಿಹೊಳಿ ಅಂಡ್ ಟೀಂ ಭೇಟಿಯಾಗಿತ್ತು. ರಮೇಶ್ ಜಾರಕಿಹೊಳಿಯನ್ನು ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡುಕೊಳ್ಳುವಂತೆ ಹೈಕಮಾಂಡ್ ನಾಯಕರ ಮುಂದೆ ಜಾರಕಿಹೊಳಿ ಅಂಡ್ ಟೀಂ ಪರೋಕ್ಷ ಒತ್ತಡ ಹಾಕಿದೆಯಂತೆ. ಸದ್ಯ ಕ್ಯಾಬಿನೆಟ್‌ನಲ್ಲಿ ವಾಲ್ಮೀಕಿ‌ ಸಮುದಾಯದಿಂದ ಬಿ. ಶ್ರೀರಾಮುಲುಗೆ ಸ್ಥಾನಮಾನ ನೀಡಲಾಗಿದೆಯಂತೆ.

ಇದನ್ನೂ ಓದಿ: ‘ಸತ್ತರೆ ಉಚಿತ ಅಂತ್ಯಕ್ರಿಯೆ’ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ.. ಕ್ಷಮೆ ಕೇಳಿದ ಗೋವಿಂದ ಕಾರಜೋಳ

ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆ ಅವರಿಗೆ ಕ್ಯಾಬಿನೆಟ್‌ನಲ್ಲಿ ಸ್ಥಾನಮಾನ ಸಿಗಲಿಲ್ಲ ಎನ್ನಲಾಗಿದೆ. ಈಗ ರಮೇಶ್ ಜಾರಕಿಹೊಳಿಗಿಂತ ರಾಮುಲು ಮೇಲುಗೈ ಸಾಧಿಸುತ್ತಾರೆ ಎಂದು ಜಾರಕಿಹೊಳಿ ಸಹೋದರರು ತಂತ್ರ ಹೆಣೆಯುತ್ತಿದ್ದಾರಂತೆ.
ದೆಹಲಿ ಮಟ್ಟದಲ್ಲಿ ಸಮುದಾಯದ ಮೇಲೆ ಹಿಡಿತ ಸಾಧಿಸಲು ಜಾರಕಿಹೊಳಿ ಸಹೋದರರು ಮುಂದಾಗಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಬರುವ ವಾಲ್ಮೀಕಿ ಸಮುದಾಯವನ್ನೇ ಜಾರಕಿಹೊಳಿ ಹಾಗೂ ರಾಮುಲು ಕುಟುಂಬ ಪ್ರತಿನಿಧಿಸುತ್ತದೆ.

ರಾಮುಲುಗೆ ಕ್ಯಾಬಿನೆಟ್‌ನಲ್ಲಿ ಅವಕಾಶ ಕೊಟ್ಟು, ಜಾರಕಿಹೊಳಿ ಸಹೋದರರನ್ನು ದೂರವಿಟ್ರೆ, ಮುಂದಿನ ದಿನಗಳಲ್ಲಿ, ಜಾರಕಿಹೊಳಿ ಕುಟುಂಬಕ್ಕೆ ಹಿನ್ನಡೆಯಾಗಬಹುದು ಎನ್ನಲಾಗಿದೆ.. ಹೀಗಾಗಿ, ಶತಾಯಗತಾಯ ರಾಮುಲು ಸಮುದಾಯದ ನಾಯಕರಾಗಬಾರದೆಂದು ದೆಹಲಿ ಮಟ್ಟದಲ್ಲಿಯೇ ಜಾರಕಿಹೊಳಿ ಸಹೋದರರು ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದೆ.

Source: newsfirstlive.com Source link