ಚಾ. ನಗರದಲ್ಲಿ ಹೊಸ ರೂಲ್ಸ್ ತಂದ DC.. ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ರೆ ನೋ ರೇಷನ್.. ನೋ ಪೆನ್ಷನ್..

ಚಾ. ನಗರದಲ್ಲಿ ಹೊಸ ರೂಲ್ಸ್ ತಂದ DC.. ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ರೆ ನೋ ರೇಷನ್.. ನೋ ಪೆನ್ಷನ್..

ಚಾಮರಾಜನಗರ: ಕೊರೊನಾ ವ್ಯಾಕ್ಸಿನೇಷನ್​ಗೆ ವೇಗ ನೀಡಲು ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಅಭಿಯಾನ ಆರಂಭಿಸಿದೆ. ವ್ಯಾಕ್ಸಿನೇಷನ್ ಪ್ರಮಾಣ ಪತ್ರ ತಂದರೆ ಮಾತ್ರ ಪಡಿತರ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ವ್ಯಾಕ್ಷಿನ್ ಪ್ರಮಾಣಪತ್ರ ಇದ್ದರೆ ಮಾತ್ರ ಮಾಶಾಸನ ಪಾವತಿ ಮಾಡುವಂತೆ ಎಲ್ಲ ಬ್ಯಾಂಕ್​ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಶೇ.100 ರಷ್ಟು ಮೊದಲ ಡೋಸ್ ವ್ಯಾಕ್ಸಿನೇಷನ್; ಪ್ರಧಾನಿ ಮೋದಿ ಶ್ಲಾಘನೆ

ಲಸಿಕೆ ಹಾಕಿಸಿಕೊಳ್ಳಲು ಕೆಲವು ಜನರು ಉದಾಸೀನ ತೋರಿದ ಹಿನ್ನೆಲೆ ಜನರಿಗೆ ಕೊರೊನಾ ಸೋಂಕಿನ ಬಗ್ಗೆ ಗಂಭೀರತೆ ಮೂಡಿಸಲು, ಜನರ ಆರೋಗ್ಯ ಸುರಕ್ಷತೆಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ 2 ಲಕ್ಷ 90 ಸಾವಿರ ಬಿಪಿಎಲ್, ಅಂತ್ಯೋದಯ ಪಡಿತರದಾರರು ಇದ್ದಾರೆ. ಹಾಗೂ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ 2 ಲಕ್ಷ 20 ಸಾವಿರ ಮಂದಿ ಮಾಶಾಸನ ಫಲಾನುಭವಿಗಳಿದ್ದಾರೆ.

Source: newsfirstlive.com Source link