ಮಥುರಾದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧಿಸಿದ ಯೋಗಿ ಆದಿತ್ಯನಾಥ್​

ಮಥುರಾದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧಿಸಿದ ಯೋಗಿ ಆದಿತ್ಯನಾಥ್​

ಮಥುರಾ: ಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಅಂತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.

ಮಾಂಸ ಹಾಗೂ ಮದ್ಯ ನಿಷೇಧಕ್ಕೆ ಬೇಕಾಗಿರೋ ಯೋಜನೆಗಳನ್ನ ರೂಪಿಸಲು ಹಾಗೂ ಅಂಥ ಚಟುವಟಿಕೆಗಳಲ್ಲಿ ತೊಡಗಿರುವ ಜನರನ್ನು ಗುರುತಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಅಧಿಕಾರಿಗಳಿಗೆ ನಿರ್ದೇಶಿದ್ದಾರೆ. ಮಥುರಾದಲ್ಲಿ, ಕೃಷ್ಣೋತ್ಸವ 2021 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮದ್ಯ ಮತ್ತು ಮಾಂಸ ವ್ಯಾಪಾರದಲ್ಲಿ ತೊಡಗಿರುವವರು ಮಥುರಾದಲ್ಲಿ ಹಸುವಿನ ಹಾಲನ್ನ ಮಾರಾಟ ಮಾಡಬಹುದು ಅಂತ ಸಲಹೆ ನೀಡಿದ್ರು. ಇನ್ನೂ ಈ ವೇಳೆ ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ಸೋಂಕನ್ನು ಮಟ್ಟ ಹಾಕಲು ಶಕ್ತಿ ನೀಡು ಎಂದು ಶ್ರೀ ಕೃಷ್ಣನಲ್ಲಿ ಆದಿತ್ಯನಾಥ್ ಪ್ರಾರ್ಥಿಸಿದರು.

ಬ್ರಿಡ್ಜ್​ ಭೂಮಿ ಬಗ್ಗೆ ಯೋಗಿ ಆದಿತ್ಯನಾಥ್​ ಹೇಳಿದ್ದೇನು? 

ಯಮುನಾ ನದಿಯ ತಟದಲ್ಲಿ ಬ್ರಿಡ್ಜ್ ಭೂಮಿಯನ್ನು ಅಭಿವೃದ್ಧಿಪಡಿಸಲು, ಈಗಾಗ್ಲೇ ಎಲ್ಲಾ ರೀತಿಯಿಂದಲೂ ಪ್ರಯತ್ನಗಳನ್ನು ಮಾಡಲಾಗ್ತಿದೆ. ಅಲ್ಲದೇ, ಅದಕ್ಕಾಗಿ ಯಾವುದೇ ಹಣದ ಕೊರತೆ ಇರೋದಿಲ್ಲ. ನಾವು ಈ ಪ್ರದೇಶದ ಅಭಿವೃದ್ಧಿಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಮಿಶ್ರಣವನ್ನು ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಈ ಮೂಲಕ, ದೇಶಕ್ಕೆ ಹೊಸ ತಿರುವುಗಳನ್ನ ನೀಡುತ್ತಿರೋ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಯೋಗಿ ಆದಿತ್ಯನಾಥ್​  ಅಭಿನಂದಿಸಿದರು.

Source: newsfirstlive.com Source link