ಬೆಂಗಳೂರಲ್ಲಿ ಭೀಕರ ಅಪಘಾತ: ತಮಿಳುನಾಡು MLA ಪುತ್ರ, ಸೊಸೆಯೂ ಸಾವು

ಬೆಂಗಳೂರಲ್ಲಿ ಭೀಕರ ಅಪಘಾತ: ತಮಿಳುನಾಡು MLA ಪುತ್ರ, ಸೊಸೆಯೂ ಸಾವು

ಬೆಂಗಳೂರು: ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಕಳೆದ ರಾತ್ರಿ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಆಡಿ ಕಾರ್ ಕಂಬಕ್ಕೆ ಡಿಕ್ಕಿಯೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಇನ್ನು ಅಪಘಾತದಲ್ಲಿ ತಮಿಳುನಾಡು ಶಾಸಕ ವೈ ಪ್ರಕಾಶ್ ಅವರ ಪುತ್ರ ಕರುಣಾ ಸಾಗರ್ ಎಂಬುವವರೂ ಸಹ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಬೆಂಗಳೂರಲ್ಲಿ ಭೀಕರ ಆ್ಯಕ್ಸಿಡೆಂಟ್.. 7 ಮಂದಿ ಸಾವು

ಕರುಣಾ ಸಾಗರ್ ಅವರ ತಂದೆ ಥಳಿ ಕ್ಷೇತ್ರದ ಶಾಸಕರಾಗಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಬ್ಲೂ ಮೆಟಲ್ಸ್ ಎಂಬ ಎಂ ಸ್ಯಾಂಡ್ ಕಂಪನಿಯಲ್ಲಿ ಶಾಸಕ ಪ್ರಕಾಶ್ ಪಾಲುದಾರಿಕೆ ಹೊಂದಿದ್ದಾರೆ. ಇನ್ನು ಘಟನೆಯಲ್ಲಿ ಕರುಣಾ ಸಾಗರ್ ಪತ್ನಿ ಇಶಿತಾ ಸಹ ಸಾವನ್ನಪ್ಪಿದ್ದಾರೆ.

Source: newsfirstlive.com Source link