ಅಮೆರಿಕಾ ಎಡವಟ್ಟು; ಪಾಕಿಸ್ತಾನದ ಕೈ ಸೇರಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು.. ಅಪಾಯದಲ್ಲಿ ಇಡೀ ಜಗತ್ತು

ಅಮೆರಿಕಾ ಎಡವಟ್ಟು; ಪಾಕಿಸ್ತಾನದ ಕೈ ಸೇರಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು.. ಅಪಾಯದಲ್ಲಿ ಇಡೀ ಜಗತ್ತು

ಅಮೆರಿಕ ಸೇನೆ ಅಫ್ಘಾನ್​​ ನೆಲ ತೊರೆಯಲು ಇನ್ನೊಂದು ದಿನವಷ್ಟೇ ಬಾಕಿ. ತವರಿಗೆ ಮರಳುವ ತವಕದಲ್ಲಿ ದೊಡ್ಡಣ್ಣ ಸಣ್ಣತನ ಪ್ರದರ್ಶನ ಮಾಡಿದ್ದಾನೆ. ಪರಿಣಾಮ ಬರೋಬ್ಬರಿ 7 ರಿಂದ ಎಂಟು ಲಕ್ಷ ಕೋಟಿ ರುಪಾಯಿ ಮೌಲ್ಯದ ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇದೀಗ ತಾಲಿಬಾನ್​ಗಳ ಕೈ ಸೇರಿದೆ. ಅಮೆರಿಕದ ಎಡವಟ್ಟಿನಿಂದ ಪಾಕ್​ ಉಗ್ರರ ಕೈಗೂ ಇದೀಗ ಅತ್ಯಾಧುನಿಕ ವೆಪನ್ಸ್​​ಗಳು ಸಿಕ್ಕಿವೆ.

ತಾಲಿಬಾನ್​ಗಳ ನೆತ್ತರಿನ ದಾಹ ಕಡ್ಮೆಯಾಗಿಲ್ಲ, ಉಗ್ರರು ರಕ್ತದೋಕುಳಿ ಆಡೋದನ್ನ ನಿಲ್ಸಿಲ್ಲ. ಗನ್​ಗಳ ಘರ್ಜನೆಗೆ ಬಾಂಬ್​ಗಳ ಸದ್ದಿಗೆ ಅಫ್ಘಾನ್ ಜನರು ಬೆಚ್ಚಿ ಬಿದ್ದಿದ್ದಾರೆ. ಒಂದು ಕಾಲದಲ್ಲಿ ಭೂ ಲೋಕದ ಸ್ವರ್ಗ ಎನಿಸಿಕೊಂಡಿದ್ದ ಅಫ್ಘಾನ್ ಇಂದು ಉಗ್ರರ ಸ್ವರ್ಗ ಆಗಿ ಕನ್​ವರ್ಟ್​ ಆಗಿದೆ. ಯಾರದ್ದು ದುರಾಸೆಗೆ ಅಫ್ಗಾನಿನ ಅಮಾಯಕ ಜನರು ಬೀದಿ ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಅಫ್ಘಾನ್​​ನ ಒಂದೊಂದೇ ದೃಶ್ಯಗಳು ಅಲ್ಲಿಯ ಕರಾಳತೆಯ ಕಥೆಯನ್ನ ಬಿಚ್ಚಿಡ್ತಿದೆ.

ಇವೆಲ್ಲದರ ನಡುವೆ ಮತ್ತೊಂದು ಆಘಾತಕಾರಿ ವಿಷ್ಯ ಏನಂದ್ರೆ, ಈ ತಾಲಿಬಾನ್​ ರಕ್ಕಸರ ಕೈಗೆ ಅಮೆರಿಕದ ಅತ್ಯಾಧುನಿಕ ಗನ್​ಗಳು ಸಿಕ್ಕಿವೆ. ಬರೋಬ್ಬರಿ 7 ರಿಂದ 8 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳು ತಾಲಿಬಾನ್​ಗಳ ವಶದಲ್ಲಿದೆ. 20 ವರ್ಷಗಳ ಕಾಲ ಅಫ್ಘಾನ್​ ನೆಲದಲ್ಲಿ ರಕ್ಷಣಾ ತಡೆಗೋಡೆಯಂತಿದ್ದ ಅಮೆರಿಕ ಸೇನೆ, ತನ್ನ ತವರಿಗೆ ಮರಳುವ ತವಕದಲ್ಲಿ ಎಸಗಿರುವ ಪ್ರವಾದ ಇದೀಗ ಜಾಗತಿಕ ಆತಂಕಕ್ಕೆ ಕಾರಣವಾಗಿದೆ. 2 ದಶಕಗಳ ಅಫ್ಘಾನ್​ ನೆಲದಲ್ಲಿ ಬೀಡು ಬಿಟ್ಟಿದ್ದ ಅಮೆರಿಕ 7 ರಿಂದ 8 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನ ದಾಸ್ತಾನು ಮಾಡಿತ್ತು. ಆದ್ರೆ ದೊಡ್ಡಣನ ಸೇನೆ ಅಮೆರಿಕ ತೊರೆಯುತ್ತಿದ್ದಂತೆ ಅತ್ಯಾಧುನಿಕ ವೆಪನ್ಸ್​ಗಳೆಲ್ಲಾ ತಾಲಿಬಾನ್​ ತೆಕ್ಕೆಗೆ ಜಾರಿಕೊಂಡಿದೆ.

ಅಮೆರಿಕ ಅಫ್ಘಾನ್ ಸೇನೆಗೆ ಉಡುಗೊರೆಯಾಗಿ ಕೊಟ್ಟಿದ್ದ 22 ಸಾವಿರ ಹಮ್​ವೇ ವಾಹನಗಳು, 42, ಸಾವಿರ ಟ್ರಕ್​ಗಳು, 64,363 ಮೆಷಿನ್​ ಗನ್​ಗಳು, 8 ಸಾವಿರ ಟ್ರಕ್​ಗಳು, 1 ಲಕ್ಷದ 62 ಸಾವಿರ 43 ರೇಡಿಯೋಸ್​ಗಳು, ಮೂರುವರೆಲಕ್ಷ ಅತ್ಯಾಧುನಿಕ ರೈಫಲ್​ಸ್​​ಗಳು, 1 ಲಕ್ಷದ 26 ಸಾವಿರ ಪಿಸ್ತೂಲ್​ಗಳು ಜೊತೆಗೆ ಸೇನಾ ಸಲಕರಣೆಗಳು, ಅತ್ಯಾಧುನಿಕ ಬಂದೂಕುಗಳು, ರಾಕೆಟ್ ಮತ್ತು ಗ್ರೆನೇಡ್​ ಲಾಂಚರ್​​ಗಳು, ಎಲ್ಲವು ತಾಲಿಬಾನ್​ ಬತ್ತಳಿಕೆಯಲ್ಲಿವೆ. ಬುಲೆಟ್ ಪ್ರೂಫ್ ಜಾಕೆಟ್, ನೈಟ್ ವಿಷನ್ ಕನ್ನಡಕಗಳು ಕೂಡ ತಾಲಿಬಾನ್​ಗಳ ವಶದಲ್ಲಿವೆ.

MD-530 ಹೆಲಿಕಾಫ್ಟರ್​ಗಳು ತಾಲಿಬಾನ್​ ತೆಕ್ಕೆಗೆ

ಅಮೆರಿಕದ ನಿರ್ಮಿತ MD-530 ಹೆಲಿಕಾಫ್ಟರ್​ಗಳು.. ಎಂತಹ ಕಠಿಣ ಪರಿಸ್ತಿಥಿಯಲ್ಲೂ ಶತ್ರುವಿನ ಸಂಹಾರಕ್ಕೆ ಸನ್ನದ್ದವಾಗಿ ನಿಲ್ಲುವ ತಾಕತ್ತಿರುವ ಹೆಲಿಕಾಫ್ಟರ್​ಗಳು. ಅಮೆರಿಕದ MD-530 ಹೆಸರಿನ ಹೆಲಿಕಾಫ್ಟರ್​ಗಳು ಇದೀಗ ತಾಲಿಬಾನ್​ ರಕ್ಕಸರ ಕೈ ಸೇರ್ಕೊಂಡಿದೆ. ಒಂದಲ್ಲ, ಎರಡಲ್ಲ.. ಇಂತಹ ಬರೋಬ್ಬರಿ 43 ಅಮೆರಿಕದ ಹೆಲಿಕಾಫ್ಟರ್​ಗಳನ್ನ ತಾಲಿಬಾನ್​ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.

UH-60 ಬ್ಲಾಕ್ ಹ್ಯಾಕ್ ಹೆಲಿಕಾಫ್ಟರ್​ಗಳು ರಕ್ಕಸರ ಕೈಯಲ್ಲಿ

UH-60 ಬ್ಲಾಕ್ ಹ್ಯಾಕ್ ಹೆಲಿಕಾಪ್ಟರ್. ಅಮೆರಿಕ ಸೇನೆಯು ತನ್ನ ಸೈನಿಕರನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ತ್ವರಿತವಾಗಿ ಸಾಗಾಟ ಮಾಡಲು ಬಳಸುತ್ತಿತ್ತು. ಈ ಮೂಲಕ ಯಾವುದೇ ಮೆಗಾ ​ ಆಪರೇಷನ್​ ಮಾಡ್ಬೇಕಾದ್ರು, ವಿಶ್ವದ ದೊಡ್ಡಣ ಇದೇ UH-60 ಬ್ಲಾಕ್ ಹ್ಯಾಕ್ ಹೆಲಿಕಾಪ್ಟರ್​ಗಳ ಮೂಲಕ ತನ್ನ ಸೈನಿಕರನ್ನ ಮಿಂಚಿನ ವೇಗದಲ್ಲಿ ನಿರ್ದಿಷ್ಟ ಸ್ಥಳ ತಲುಪುವಂತೆ ಮಾಡ್ತಿದ್ದ. ಇಂತಹ 33, UH-60 ಬ್ಲಾಕ್ ಹ್ಯಾಕ್ ಹೆಲಿಕಾಪ್ಟರ್​ಗಳನ್ನ ಅಮೆರಿಕ ಅಫ್ಘಾನ್​ ನೆಲ ತೊರೆಯುವ ವೇಳೆ ಅಫ್ಘಾನ್ ಸೇನೆಗೆ ಉಡುಗೊರೆಯ ರೂಪದಲ್ಲಿ ನೀಡಿತ್ತು. ಆದ್ರೆ ಇದೀಗ ಈ ಎಲ್ಲಾ 33 ಅತ್ಯಾಧುನಿಕ ಹೆಲಿಕಾಫ್ಟರ್​ಗಳು ತಾಲಿಬಾನ್​ಗಳು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ.

 

ಇಲ್ಲಿ ನಾವು ಮತ್ತೊಂದು ಅಂಶ ಗಮನಿಸ್ಬೇಕು.. ಇಂತಹ ಹೆಲಿಹಾಫ್ಟರ್​​ಗನ್ನ ಹಾರಾಟ ಮಾಡುವಷ್ಟು ನೈಪುಣ್ಯತೆ ತಾಲಿಬಾನ್​ಗಳಿಗೆ ಇಲ್ಲದ ಕಾರಣ, ಅವುಗಳನ್ನ ಪಾಕ್ ಉಗ್ರರಿಗೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ತಾಲಿಬಾನ್ ಬಳಿ ಇರುವ ಅಪಾರ ಪ್ರಮಾಣದ ಆಧುನಿಕ ವೆಪನ್ಸ್​ಗಳು ಪಾಕಿಸ್ತಾನದಲ್ಲೇ ಬಳಕೆಯಾಗುತ್ತಿವೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿವೆ. ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳು ಈ ಶಸ್ತ್ರಾಸ್ತ್ರ ಬಳಕೆ ಮಾಡಲಿವೆ. ಸದ್ಯ ಕಾಬೂಲ್​​ ನಲ್ಲಿ ತಾಲಿಬಾನ್​ಗಳ ಕೈಯಲ್ಲಿರುವ ಈ ಮಾಡೆರ್ನ್​ ವೆಪನ್ಸ್​ಗಳೆಲ್ಲಾ ಮುಂದೆ ಕರಾಚಿ ತಲುಪಿ, ಅಲ್ಲಿಂದ ಕಾಶ್ಮೀರದ ಉಗ್ರರ ಕೈಯಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಲಘು ದಾಳಿ ಮಾಡುವ ವಿಮಾನಗಳು ಕೂಡ ತಾಲಿಬಾನ್​ಗಳ ವಶದಲ್ಲಿ

ಆಕಾಶದಲ್ಲಿ ಸಾಗಿ ಶತ್ರುವಿನ ಹೆಡೆಮುರಿ ಕಟ್ಟುವ ಅಮೆರಿಕದ ವಿಮಾನಗಳು ಕೂಡ ಇದೀಗ ತಾಲಿಬಾನ್​ಗಳ ಬಲೆಯಲ್ಲಿದೆ. ಈ ವಿಮಾನಗಳು ದೊಡ್ಡ ಮಟ್ಟದಲ್ಲಿ ದಾಳಿ ಮಾಡುವುದಿಲ್ಲ.. ನಿರ್ದಿಷ್ಟ ಪಡೆಗಳನ್ನು, ವ್ಯಕ್ತಿಗಳನ್ನ ಗುರಿ ಮಾಡಿ ಅಟ್ಯಾಕ್ ಮಾಡುತ್ತೆ. ಉಗ್ರರ ನೆಲೆಗಳನ್ನ, ಉಗ್ರ ಕಮಾಂಡರ್​ಗಳಿಗೆ ಸಮಾಧಿ ತೋಡಲು ಇಂತಹ ವಿಮಾನಗಳನ್ನ ಅಮೆರಿಕ ಬಳಸುತ್ತಿತ್ತು. A-29 ಹೆಸರಿನ ಅಮೆರಿಕದ 23 ವಿಮಾನಗಳು ಇದೀಗ ತಾಲಿಬಾನ್​ಗಳ ಹಿಡಿತಲ್ಲಿದೆ. ಇದನ್ನು ಬಳಸಿಕೊಂಡು ತಾಲಿಬಾನ್​ಗಳ ತಮ್ಮ ಶತ್ರು ಪಾಲಯದಲ್ಲಿ ಗುರುತಿಸಿಕೊಂಡಿರುವ ನಾಯಕರ ಬೇಟೆಯಾಡುವ ಸಾಧ್ಯತೆ ಇದೆ.

ಉಗ್ರರ ಕಪಿಮುಷ್ಠಿಯಲ್ಲಿ ಅಮೆರಿಕದ MI-17 ಹೆಲಿಕಾಪ್ಟರ್​ಗಳು

ಅದು ಎಂತಹ ಕಠಿಣ ಸಂದರ್ಭವೇ ಇರಲಿ, ದುರ್ಗಮ ಸ್ಥಳವೇ ಇರಲಿ, ಶತ್ರುವನ್ನ ಅವರ ಅಡಗುತಾಣಕ್ಕೆ ನುಗ್ಗಿ ಹೊಡೆಯುವ ತಾಕತ್ತು ಈ MI-17 ಹೆಲಿಕಾಫ್ಟರ್​ಗಳಿಗಿವೆ. ದೊಡ್ಡಣ್ಣನ ಸೇನೆಯು ಅಮೆರಿಕದಲ್ಲಿದ್ದ ಸಂದರ್ಭದಲ್ಲಿ MI-17 ಹೆಲಿಕಾಪ್ಟರ್​ಗಳನ್ನ ಅಫ್ಘಾನ್ ನೆಲದಲ್ಲಿ ದಾಸ್ತಾನು ಮಾಡಿತ್ತು. ಬರೋಬ್ಬರಿ 32, MI-17 ಹೆಲಿಕಾಪ್ಟರ್​ಗಳನ್ನ ಅಮೆರಿಕ ಪಡೆ ಅಫ್ಘಾನ್​ ಸೇನೆಗೆ ಕೊಟ್ಟು ತನ್ನ ತವರಿಗೆ ಮರಳಿತ್ತು. ದುರಾದೃಷ್ಟವಶಾತ್ ಇವೆಲ್ಲವು ಇದೀಗ ತಾಲಿಬಾನ್​​ಗಳ ಕಪಿಮುಷ್ಠಿಯಲ್ಲಿದೆ. ಇದೇ MI-17 ಹೆಲಿಕಾಫ್ಟರ್​ಗಳನ್ನ ಪಾಕಿಸ್ತಾನದ ಉಗ್ರರಿಗೆ ಕೊಡುವ ಸಾಧ್ಯತೆ ಇದೆ. ಒಂದು ವೇಳೆ ಇಂತಹ ಅತ್ಯಾಧುನಿಕ ಹೆಲಿಕಾಫ್ಟರ್​ಗಳು ಪಾಕ್ ಉಗ್ರರ ಕೈಗೆ ಸಿಕ್ಕರೆ, ನೆರೆ ರಾಷ್ಟ್ರಗಳಿಗೂ ತೊಂದರೆ ಎದುರಿಸ್ಬೇಕಾದ ಸಾಧ್ಯತೆ ಅಧಿಕವಾಗಿದೆ.

ಪಾಪಿಗಳ ಹಿಡಿತದಲ್ಲಿ ಸಿ-130 ಹರ್ಕ್ಯುಲಸ್ ವಿಮಾನಗಳು

ಸಿ-130 ಹರ್ಕ್ಯುಲಸ್ ವಿಮಾನ..ಜಗತ್ತಿನಲ್ಲಿಯೇ ಈ ವಿಮಾನಗಳು ಇರುವುದು ಭಾರತ ಸೇರಿದಂತೆ ಕೇವಲ 17 ದೇಶಗಳಲ್ಲಿ ಮಾತ್ರ. ಜಗತ್ತಿನ ಸೂಪರ್ ಪವರ್ ಎಂದೆನಿಸಿಕೊಂಡಿರುವ ದೇಶಗಳಲ್ಲಿ ಬಿಟ್ಟರೆ, ಇಂತಹ ಪವರ್​​ಫುಲ್​ ವಿಮಾನಗಳನ್ನ ಖರೀದಿ ಮಾಡಲು ಇಂದಿಗೂ ಜಗತ್ತಿನ ಹಲವು ದೇಶಗಳಿಗೆ ಸಾಧ್ಯವಾಗಿಲ್ಲ. ಆದ್ರೆ ಜಗತ್ತಿನ ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾದ ಸಿ -130 ಹರ್ಕ್ಯುಲಸ್ ವಿಮಾನವನ್ನ ಅಮೆರಿಕ ತನ್ನ ಸೈನಿಕರ ಸಾಗಾಟಕ್ಕೆ ಬಳಸುತ್ತಿತ್ತು. ಈ ವಿಮಾನಗಳ ಮೂಲಕ ಸಾಗರದಲ್ಲೂ ಗಸ್ತು ತಿರುಗುತ್ತಿತ್ತು. ಆದ್ರೆ ಅಮೆರಿಕದ ಮೂರು ಸಿ-130 ಹರ್ಕ್ಯುಲಸ್ ವಿಮಾನಗಳು ಸುಲಭವಾಗಿ ತಾಲಿಬಾನ್​ಗಳ ಪಾಲಾಗಿವೆ. ಇವು ಸಹಜವಾಗಿಯೇ ಇತರೆ ದೇಶಗಳ ಆತಂಕಕ್ಕೂ ಕಾರಣವಾಗಿದೆ. ತಾಲಿಬಾನ್​ಗಳು ಈ ಪವರ್​​ಫುಲ್​ ವಿಮಾನಗಳನ್ನ ಇಟ್ಟುಕೊಂಡು ಅದ್ಯಾವಾ ಆಟ ಆಡ್ತಾರೋ ಅನ್ನೋ ಪ್ರಶ್ನೆ ಸದ್ಯಕ್ಕೆ ಎಲ್ಲರನ್ನ ಕಾಡ್ತಿದೆ.

358,530 ವಿವಿಧ ರೀತಿಯ ರೈಫಲ್‌ಗಳು ಉಗ್ರರ ಕೈಗೆ
64,000 ಮೆಷಿನ್ ಗನ್‌ಗಳು ತಾಲಿಬಾನ್​ಗಳ ಪಾಲು

2003 ಮತ್ತು 2016ರ ವೇಳೆ ತಾಲಿಬಾನ್​ಗಳ ವಿರುದ್ಧದ ಸಮರದಲ್ಲಿ ಅಮೆರಿಕದ ಜೊತೆಗೆ ಅಫ್ಘಾನ್​ ಸೇನೆಯು ಕೈ ಜೋಡಿಸಿತ್ತು. ಅಫ್ಘಾನ್​ ಸೇನೆಯ ಬಳಿ ದಶಕಗಳ ಹಿಂದಿನ ಶಸ್ತ್ರಾಸ್ತ್ರಗಳು ಇದ್ದ ಕಾರಣ ಅಮೆರಿಕವು, 3,58,530 ವಿವಿಧ ರೀತಿಯ ರೈಫಲ್‌ಗಳು, 64,000 ಮೆಷಿನ್ ಗನ್‌ಗಳು, 25,327 ಗ್ರೆನೇಡ್ ಲಾಂಚರ್‌ಗಳು ಮತ್ತು 22,174 ಹಮ್‌ವೀಸ್ ಸೇರಿದಂತೆ ಶಸ್ತ್ರ ಸಜ್ಜಿತ ಯುದ್ಧ ವಾಹನಗಳನ್ನ ಅಫ್ಘಾನ್​ ಸೇನೆಗೆ ಕೊಟ್ಟಿತ್ತು. ಆದ್ರೆ ವಾರದ ಹಿಂದೆ ಅಫ್ಘಾನ್​ ಸೇನೆಯೇ ತಾಲಿಬಾನ್​ ಎದುರು ಮಂಡಿವೂರಿದ ಕಾರಣ, ತಾಳಿಬಾನ್​ಗಳು ಸೇನೆಯ ಬಳಿ ಇದ್ದ ಎಲ್ಲಾ ವೆಪನ್ಸ್​​ಗಳನ್ನ ತಮ್ಮ ವಶಕ್ಕೆ ತೆಗೆದುಕೊಂಡಿದ್ರು. ಇದೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನ ಮುಂದಿಟ್ಟುಕೊಂಡು ಈ ತಾಲಿಬಾನ್​ ಡಿಫ್ರೆಂಟ್​ ಡಿಫ್ರೆಂಟ್​ ಫೋಸ್​ ಕೊಟ್ಟು ವಿಡಿಯೋ ಕೂಡ ಹರಿ ಬಿಡ್ತಾ ಇದ್ದಾರೆ. ಈ ಮೂಲಕ ತಮ್ಮಲ್ಲಿರುವ ಎಲ್ಲಾ ಅತ್ಯಾಧುನಿಕ ವೆಪನ್ಸ್​​ಗಳನ್ ಜಗತ್ತೆನೆದುರು ಪ್ರದಕ್ಷಿಣಿಗೆ ಇಟ್ಟಿದ್ದಾರೆ.

2017 ಹಾಗೂ 2021 ರ ನಡುವೆ ಅಮೆರಿಕವು ಅಫ್ಘಾನ್ ಸೇನೆಗೆ 3,598 M4 ರೈಫಲ್‌ಗಳು ಮತ್ತು 3,012 ಹಮ್‌ವೀಗಳನ್ನ, 20 ಸಾವಿರ M16 ರೈಫಲ್‌ಗಳನ್ನು ಕೊಡುಗೆಯಾಗಿ ನೀಡಿತ್ತು.ಆದ್ರೆ ಇದೀಗ ಎಲ್ಲವು ತಾಲಿಬಾನ್​ಗಳ ವಶವಾಗಿದೆ. ಇದ್ರ ಜೊತೆಗೆ ಕಡಿಮೆ ಎತ್ತರದ ಸ್ಥಳದಲ್ಲಿ ಏರ್​ಸ್ಟ್ಟ್ರೈಕ್ ಮಾಡಲು ಬಳಸುವ ವಿಮಾನಗಳು, ಲೇಸರ್ ಗೈಡೆಡ್ ಬಾಂಬ್ ಗಳು ಕೂಡ ಇದೀಗ ರಕ್ಕಸರ ಕಪಿಮುಷ್ಠಿಯಲ್ಲಿದೆ. ಯುದ್ಧ ಟ್ಯಾಂಕರ್​ಗಳನ್ನ ಕೂಡ ತಾಲಿಬಾನ್​ಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.

ಉಗ್ರರ ಕೈಸೇರಿದ 16 ಸಾವಿರಕ್ಕೂ ಹೆಚ್ಚು ನೈಟ್ ವಿಷನ್ ಕನ್ನಡಕಗಳು
1,013 ಹಮ್​ ವೀ ವಾಹನಗಳು ಈಗ ತಾಲಿಬಾನ್ ವಶದಲ್ಲಿ

ರಾತ್ರಿ ವೇಳೆಯು ಶತ್ರುವಿನ ರುಂಡವನ್ನ ಚೆಂಡಾಡಲು ಬಳಸುವ ನೈಟ್ ವಿಷನ್ ಕನ್ನಡಕಗಳು ಕೂಡ ಇದೀಗ ತಾಲಿಬಾನ್​ ವಶವಾಗಿದೆ. ಈ ನೈಟ್​ ವಿಷನ್ ಕನ್ನಡಗಳು ರಾತ್ರಿ ನಡೆಸುವ ಕಾರ್ಯಾಚರಣೆಗೂ ಸಹಕಾರಿ. ರಾತ್ರಿಯ ಕತ್ತಲಲ್ಲಿ ನಡೆಸುವ ಮೆಗಾ ಆಪರೇಷನ್​ಗಳಿಗೆ ಇದೇ ನೈಟ್​​ ವಿಷನ್​ ಕನ್ನಡಕಗಳನ್ನ ಬಳಸಲಾಗುತ್ತದೆ. ಇಂತಹ ಬರೊಬ್ಬರಿ 16 ಸಾವಿರಕ್ಕೂ ಅಧಿಕ ಕನ್ನಡಕಗಳು ಇದೀಗ ತಾಲಿಬಾನ್​ಗಳ ಪಾಲಾಗಿದೆ. ನೆಲಬಾಂಬ್ ಸ್ಫೋಟದಿಂದ ಕೂಡ ರಕ್ಷಣೆ ನೀಡುವ 1,013 ಮಿಲಿಟರಿ ವಾಹನಗಳು ಕೂಡ ಇದೀಗ ಉಗ್ರರ ಬಳಿ ಇದೆ. ಆರು ಲಕ್ಷಕ್ಕೂ ಹೆಚ್ಚು ಸಣ್ಣ ಶಸ್ತ್ರಾಸ್ತ್ರಗಳು , ಮಾಡೆಲ್ ಗ್ರೇನೇಡ್ ಲಾಂಚರ್ ಗಳು ತಾಲಿಬಾನ್​ಗಳ ಕೈ ಸೇರಿವೆ.

ತಾಲಿಬಾನ್​ಗಳಿಂದ ಪಾಕ್​ ಉಗ್ರರಿಗೆ ಶಸ್ತ್ರಾಸ್ತ್ರ ಮಾರಾಟ

ತಾಲಿಬಾನ್​ಗಳ ಬಳಿ ಪವರ್​ಫುಲ್ ಮಾಡರ್ನ್​​ ವೆಪನ್ಸ್​​ಗಳು ಇದ್ರೂ ಕೂಡ ಅವುಗಳನ್ನ ಬಳಕೆ ಮಾಡುವ ಸ್ಕಿಲ್​​​ ಹೊಂದಿರುವ ವ್ಯಕ್ತಿಗಳು ತಾಲಿಬಾನ್​​ಗಳ ಬಳಿ ಇಲ್ಲ. ಇದೇ ಕಾರಣಕ್ಕೆ ತಾಲಿಬಾನ್​ಗಳು ತಮ್ಮ ಬಳಿ ಇರುವ ಅತ್ಯಾಧುನಿಕ ಶಸ್ತಾಸ್ತ್ರಗಳನೆಲ್ಲಾ ಪಾಕ್​ ಉಗ್ರರಿಗೆ ಸಾಗಾಟ ಮಾಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿರುವ ಐಸಿಸ್​, ಅಲ್​ಖೈದಾ, ಜೈಷೆ ಮೊಹಮ್ಮದ್​​ನಂತಹ ಭಯೋತ್ಪಾದಕ ಸಂಘಟನೆಯ ಉಗ್ರರು ತಾಲಿಬಾನ್​​ಗಳಿಗಿಂತಲೂ ಹೆಚ್ಚು ಪರಿಣತಿ ಹೊಂದಿದವರು. ಒಂದು ವೇಳೆ ಇಂತಹ ಉಗ್ರರ ಕೈಗೆ ಈ ಅತ್ಯಾಧುನಿಕ ವೆಪನ್ಸ್​ಗಳು ಸಿಕ್ಕಿದ್ರೆ, ಅದನ್ನ ನೆರೆ ರಾಷ್ಟ್ರಗಳ ಮೇಲೆ ಪ್ರಯೋಗ ಮಾಡುವ ಸಾಧ್ಯತೆ ಇದೆ. ಇದು ಸಹಜವಾಗಿಯೇ ಇತರೆ ದೇಶಗಳ ಆತಂಕಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಅಮೆರಿಕ ಹಾಗೂ ತಾಲಿಬಾನ್​ಗಳ ನಡುವೆ ನಡೆದ ಒಪ್ಪಂದ್ದದ ಪ್ರಕಾರ, ಅಮೆರಿಕ ಸೇನೆ ಅಫ್ಘಾನ್​ ನೆಲವನ್ನ ತೊರೆಯಲು ಕೇವಲ ಒಂದು ದಿನವಷ್ಟೇ ಬಾಕಿ. ಆದ್ರೆ ಅದಾಗ್ಲೆ ಅತ್ಯಾಧುನಿಕ ಹೆಲಿಕಾಫ್ಟರ್​ಗಳು, ಯುದ್ಧ ವಿಮಾನಗಳು, ಟ್ಯಾಂಕರ್​ಗಳು, ಲೇಸರ್ ಗೈಡೆಡ್ ಬಾಂಬ್​ಗಳು ಎಲ್ಲವು ತಾಲಿಬಾನ್​​​ಗಳ ವಶದಲ್ಲಿದೆ. ಮುಂದೆ ಈ ಅತ್ಯಾಧುನಿಕ ಗನ್​ಗಳನ್ನ ಇಟ್ಟುಕೊಂಡು ತಾಲಿಬಾನ್​ಗನ್​ಗಳು ಅದ್ಯಾವ ನೌಟಂಕಿ ಆಟ ಆಡ್ತಾರೋ ಅನ್ನೋದ್ನನ ಕಾದು ನೋಡಬೇಕಾಗಿದೆ.

ಒಪ್ಪಂದದ ಪ್ರಕಾರ ಅಮೆರಿಕ ಅಫ್ಘಾನ್​ ನೆಲ ತೊರೆಯಲು ಗಂಟೆಗಳಷ್ಟೇ ಬಾಕಿ. ತಾಲಿಬಾನ್​ಗಳು ಅಮೆರಿಕ ಸೇನೆ ಅಫ್ಘಾನ್​ ತೊರೆಯುವುದನ್ನ ಕಾಯುತ್ತಿದ್ದಾರೆ. ದೊಡ್ಡಣ್ಣನ ಸೇನೆ ಅಮೆರಿಕದ ನೆಲದಿಂದ ಸಂಪೂರ್ಣವಾಗಿ ಖಾಲಿಯಾದ ನಂತರ, ತಾಲಿಬಾನ್​ಗಳ ತಮ್ಮ ಬಳಿ ಇರುವ ಅತ್ಯಾಧುನಿಕ ವೆಪನ್ಸ್​ಗಳನ್ನ ಮುಂದಿಟ್ಟುಕೊಂಡು, ಅಫ್ಘಾನ್​ನಲ್ಲಿ ಮತ್ತಷ್ಟು ರಕ್ತದೋಕುಳಿ ಹರಿಸುವ ಸಾಧ್ಯತೆ ಇದೆ. ಅಮೆರಿಕ ಮಾಡಿದ್ದ ಎಡವಟ್ಟಿನಿಂದ ಇಂದು ಇಡೀ ಜಗತ್ತೇ ಆತಂಕ್ಕೀಡಾಗುವಂತ್ತಾಗಿದ್ದು ಮಾತ್ರ ನಿಜಕ್ಕೂ ದೊಡ್ಡ ದುರಂತ.

Source: newsfirstlive.com Source link