ಗಾಡಿಗೆ ಪೆಟ್ರೋಲ್​ ಹಾಕಿಸಿಕೊಂಡವನು ಕಾಸು ಕೊಡಿ ಅಂದ್ರೆ ಡ್ಯಾಗರ್​ ತೋರಿಸಿದ

ಗಾಡಿಗೆ ಪೆಟ್ರೋಲ್​ ಹಾಕಿಸಿಕೊಂಡವನು ಕಾಸು ಕೊಡಿ ಅಂದ್ರೆ ಡ್ಯಾಗರ್​ ತೋರಿಸಿದ

ಬೆಂಗಳೂರು: ಪೆಟ್ರೊಲ್ ಹಾಕಿದ ಹಣ ಕೇಳಿದ್ದಕ್ಕೆ ಯುವಕನೋರ್ವ ಡ್ಯಾಗರ್ ತೋರಿಸಿ ಧಮ್ಕಿ ಹಾಕಿದ ಘಟನೆ, ನಗರದ ನಾಯಂಡಹಳ್ಳಿಯ ಇಂಡಿಯನ್​ ಬಂಕ್​ನಲ್ಲಿ ನಡೆದಿದೆ.

ಕಳೆದ 25ರ ತಡರಾತ್ರಿ 1 ಗಂಟೆ ಸುಮಾರಿಗೆ, ಆಕ್ಟೀವಾದಲ್ಲಿ ಬಂದು 200ರೂಪಾಯಿಗೆ ಜೀವನ್​ ಹಾಗೂ ವರ್ಷಿತ್​, ಪೆಟ್ರೊಲ್ ಹಾಕಿಸಿದ್ದಾರೆ. ಪೆಟ್ರೋಲ್​ ಹಾಕಿದ ನಂತರ ಪುನೀತ್​ ಎಂಬಾತ ₹200ಗಳನ್ನ ಕೇಳಿದ್ದಾರೆ. ಇದಕ್ಕೆ, ಗಾಡಿಯಲ್ಲಿದ್ದ ಇಬ್ಬರೂ, ಡ್ಯಾಗರ್ ತೋರಿಸಿ‌ ಬಂಕ್​ ಸಿಬ್ಬಂದಿಗೆ ಧಮ್ಕಿ ಹಾಕಿದ್ದಲ್ಲದೇ ಬಂಕ್ ಸುತ್ತ ಅಟ್ಟಾಡಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಪೆಟ್ರೊಲ್ ಬಂಕ್ ಸಿಬ್ಬಂದಿಯಿಂದ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಚಂದ್ರಾಲೇಔಟ್ ಪೊಲೀಸರಿಂದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗ್ತಾಯಿದೆ.

Source: newsfirstlive.com Source link