CCTVಯಲ್ಲಿ ಸೆರೆಯಾಯ್ತು ಭೀಕರ ಆ್ಯಕ್ಸಿಡೆಂಟ್ ದೃಶ್ಯ; ಡಿಕ್ಕಿಯೊಡೆದ ಸ್ಪೀಡ್​​ಗೆ ಹಿಂದಕ್ಕೆ ಹಾರಿ ಬಿದ್ದ ಕಾರ್

CCTVಯಲ್ಲಿ ಸೆರೆಯಾಯ್ತು ಭೀಕರ ಆ್ಯಕ್ಸಿಡೆಂಟ್ ದೃಶ್ಯ; ಡಿಕ್ಕಿಯೊಡೆದ ಸ್ಪೀಡ್​​ಗೆ ಹಿಂದಕ್ಕೆ ಹಾರಿ ಬಿದ್ದ ಕಾರ್

ಬೆಂಗಳೂರು: ನಗರದಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಅಪಘಾತದಲ್ಲಿ ತಮಿಳುನಾಡಿನ ಶಾಸಕ ವೈ ಪ್ರಕಾಶ್ ಅವರ ಪುತ್ರ ಹಾಗೂ ಭಾವಿ ಸೊಸೆ ಸಹ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ 1:30 ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದ್ದು ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೇಗವಾಗಿ ಬಂದ ಐಶಾರಾಮಿ ಆರ್ ಆಡಿ ಕ್ಯು-3 ಮೊದಲಿಗೆ ಫೂಟ್​ಪಾತ್​​ನಲ್ಲಿ ನಿರ್ಮಿಸಲಾಗಿದ್ದ ಕಂಬಗಳಿಗೆ ಹೊಡೆದು ನಂತರ ಮುಂದಿದ್ದ ಗೇಟ್​​ಗೆ ಬಲವಾಗಿ ಗುದ್ದಿದೆ. ಡಿಕ್ಕಿಯೊಡೆದ ವೇಗಕ್ಕೆ ಕಾರ್ ಕೆಲವು ಅಡಿಗಳಷ್ಟು ಹಿಂದಕ್ಕೆ ಹಾರಿ ಬಿದ್ದಿದೆ. ಕಾರ್ ಹಾರಿ ಬಿದ್ದ ವೇಗಕ್ಕೆ ಕಾರ್​ನ ಟೈರ್ ಕಿತ್ತು ಕಾರ್​ನ ಮೇಲೆ ಹಾರಿ ಹಿಂದಕ್ಕೆ ಉರುಳಿಬಿದ್ದಿದೆ. ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವ ದೃಶ್ಯ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ.

Source: newsfirstlive.com Source link