ಪ್ರೇಯಸಿಗೆ ಚಾಕುವಿನಿಂದ ಇರಿದು ಕತ್ತು ಕೊಯ್ದುಕೊಂಡ ಯುವಕ; ಚಿಕಿತ್ಸೆ ಫಲಿಸದೆ ಸಾವು

ಪ್ರೇಯಸಿಗೆ ಚಾಕುವಿನಿಂದ ಇರಿದು ಕತ್ತು ಕೊಯ್ದುಕೊಂಡ ಯುವಕ; ಚಿಕಿತ್ಸೆ ಫಲಿಸದೆ ಸಾವು

ಉಡುಪಿ: ಜಿಲ್ಲೆಯಲ್ಲಿ, ಪ್ರೇಯಸಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕತ್ತು ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಉಡುಪಿ: ಯುವತಿಗೆ ಚಾಕುವಿನಿಂದ ಇರಿದು ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಇಂದು ಬೆಳಿಗ್ಗೆ, ಸಂದೇಶ್​ ಕುಲಾಲ್​ ಮೃತಪಟ್ಟಿದ್ದಾನೆ. ನಿನ್ನೆ ‌ಸಂಜೆ ಪ್ರೇಯಸಿ ಸೌಮ್ಯಶ್ರೀಯ ಕತ್ತು ಸೀಳಿದ್ದ ಪ್ರಿಯಕರ ಸಂದೇಶ್, ತನ್ನ ಕತ್ತನ್ನು ಕೊಯ್ದುಕೊಂಡಿದ್ದ. ನಿನ್ನೆ ಸಂಜೆಯೇ ಚಿಕಿತ್ಸೆ ಫಲಕಾರಿಯಾಗದೆ ಸೌಮ್ಯ ಮೃತಪಟ್ಟಿದ್ರು. ಜಿಲ್ಲೆಯ ಅಂಬಾಗಿಲು ನಿವಾಸಿಯಾದ ಸೌಮ್ಯ ಶ್ರೀ ಉಡುಪಿಯ ಅಲೆವೂರು‌ ನಿವಾಸಿಯಾಗಿರೋ ಸಂದೇಶ್ ಕುಲಾಲ್​ನನ್ನ ಪ್ರೀತಿಸಿದ್ರು ಎನ್ನಲಾಗಿದೆ. ಆದ್ರೆ ಕಳೆದ ಮೂರು ದಿನದ ಹಿಂದಷ್ಟೇ ಸೌಮ್ಯಳ ನಿಶ್ಚಿತಾರ್ಥ ಬೇರೊಬ್ಬ ಯುವಕನೊಂದಿಗೆ ಆಗಿತ್ತಂತೆ.

ಇದನ್ನೂ ಓದಿ: ಪ್ರಿಯಕರ ಚಾಕುವಿನಿಂದ ಇರಿದ ಪ್ರಕರಣ; ಚಿಕಿತ್ಸೆ ಫಲಿಸದೆ ಯುವತಿ ಸಾವು

ಇದೇ ವಿಚಾರಕ್ಕೆ ಸಂತೆಕಟ್ಟೆ ಪ್ರದೇಶದ ಹೆದ್ದಾರಿ‌ ನಡುವೆ ಸಂದೇಶ್​ ವಾಗ್ವಾದಕ್ಕಿಳಿದು ಪ್ರೇಯಸಿ ಸೌಮ್ಯಳ ಸ್ಕೂಟಿ ತಡೆದು ಪ್ರಶ್ನಿಸಿ ಚಾಕುವಿನಿಂದ ಇರಿದು ತನ್ನ ಕತ್ತನ್ನೂ  ಸಂದೇಶ್ ಕೊಯ್ದುಕೊಂಡಿದ್ದ. ಆದ್ರೆ ಇಂದು ಬೆಳಿಗ್ಗೆ ಉಡುಪಿಯ ‌ಖಾಸಗಿ ಆಸ್ಪತ್ರೆಯಲ್ಲಿ ಸಂದೇಶ್ ಮೃತಪಟ್ಟಿದ್ದಾನೆ. ಸದ್ಯ ಮಣಿಪಾಲದ ಕೆಎಂಸಿಯ ಶವಾಗಾರದಲ್ಲಿ ಯುವಕ ಹಾಗೂ ಯುವತಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.

Source: newsfirstlive.com Source link