ಅಮೆರಿಕ ಸೈನಿಕರು ಅಪ್ಘಾನಿಸ್ತಾನದಿಂದ ವಾಪಸ್: ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು

ಅಮೆರಿಕ ಸೈನಿಕರು ಅಪ್ಘಾನಿಸ್ತಾನದಿಂದ ವಾಪಸ್: ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು

ಅಫ್ಘಾನಿಸ್ತಾನವನ್ನ ಇದೀಗ ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಸಂಪೂರ್ಣ ಸೇನೆಯನ್ನ ವಾಪಸ್ ಕರೆಸಿಕೊಂಡಿದೆ. ಈ ಖುಷಿಯನ್ನ ತಾಲಿಬಾನಿಗಳು ಗಾಳಿಯಲ್ಲಿ ಗುಂಡುಹಾರಿಸುವ ಮೂಲಕ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಕಾಬೂಲ್‌ನಿಂದ ಕಟ್ಟಕಡೆಯ ಅಮೆರಿಕನ್ ಸೈನಿಕನೂ ವಾಪಸ್ -20 ವರ್ಷದ ಹೋರಾಟ ಇಂದು ಅಂತ್ಯ

ಕಳೆದ 20 ವರ್ಷಗಳ ಹಿಂದೆ ಅಲ್​ಖೈದಾ ಉಗ್ರರು ಅಮೆರಿಕದ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಇದಕ್ಕೆ ಪ್ರತೀಕಾರವಾಗಿ ಅಫ್ಘಾನಿಸ್ತಾನಕ್ಕೆ ಲಗ್ಗೆಯಿಟ್ಟಿದ್ದ ಅಮೆರಿಕ ಸೇನೆ ತಾಲಿಬಾನಿಗಳಿಂದ ಅಫ್ಘಾನಿಸ್ತಾನಕ್ಕೆ ಮುಕ್ತಿ ನೀಡಿತ್ತು. ಅಮೆರಿಕ ಸೇನ ಅಫ್ಘಾನಿಸ್ತಾನದಲ್ಲಿ ನೆಲೆಯೂರುತ್ತಿದ್ದಂತೆ ಅಲ್ಲಿ ಪ್ರಜಾಪ್ರಭುತ್ವ ಸರ್ಕಾರ ತಲೆ ಎತ್ತಿತ್ತು. ಆಫ್ಘನ್ ಜನರು ತಾಲಿಬಾನಿಗಳಿಂದ ಮುಕ್ತಿ ಪಡೆದು ನಿಟ್ಟುಸಿರುಬಿಟ್ಟಿದ್ದರು.

ಇದನ್ನೂ ಓದಿ: ಅಮೆರಿಕಾ ಎಡವಟ್ಟು; ಪಾಕಿಸ್ತಾನದ ಕೈ ಸೇರಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು.. ಅಪಾಯದಲ್ಲಿ ಇಡೀ ಜಗತ್ತು

ನಂತರ ಅಮೆರಿಕ ಸೇನೆ ಅಫ್ಘನ್ ಸೇನೆಗೂ ಸಹ ಟ್ರೈನಿಂಗ್ ಕೊಟ್ಟು ಅವರಿಗೆ ಶಸ್ತ್ರಾಸ್ತ್ರಗಳನ್ನ ನೀಡಿತ್ತು. ಆದ್ರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇತ್ತೀಚೆಗೆ ಅಮೆರಿಕ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಂಡರು. ಇದಕ್ಕಾಗಿ ಕಾದಂತಿದ್ದ ತಾಲಿಬಾನಿಗಳು ಅಫ್ಘಾನಿಸ್ತಾನವನ್ನ ವಶಕ್ಕೆ ಪಡೆದುಕೊಂಡಿದ್ದರು. ಕಾಬೂಲ್​ನಲ್ಲಿ ಉಳಿದುಕೊಂಡಿದ್ದ ಅಮೆರಿಕ ಸೈನಿಕರು ತಮ್ಮ ದೇಶದ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವ ಸಲುವಾಗಿ ಕಾಬೂಲ್ ಏರ್​ಪೋರ್ಟ್​ನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಅಮೆರಿಕ ಸೇನೆಯ ಉಳಿದ ಸೈನಿಕರೂ ಸಹ ಅಮೆರಿಕಾಗೆ ವಾಪಸ್ ಆಗಿದ್ದಾರೆ.

blank

ಅಮೆರಿಕ ಸೇನೆ ತನ್ನ ದೇಶಕ್ಕೆ ವಾಪಸ್ ಆದ ಬೆನ್ನಲ್ಲೇ ತಾಲಿಬಾನಿಗಳು ಸಂಭ್ರಮಪಟ್ಟಿದ್ದಾರೆ, ಬಂದೂಕುಗಳಿಂದ ಗಾಳಿಯಲ್ಲಿ ಗುಂಡು ಹಾರಿಸಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಮುಂದಿನ ಆಫ್ಘನ್ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Source: newsfirstlive.com Source link