ಟಾಲಿವುಡ್ ‘ಮಹಾನಟಿ’ ಕೀರ್ತಿ ಸುರೇಶ್​​ಗೆ ಕಾಡ್ತಿರೋ ಆ ಚಿತ್ರ ಯಾವುದು?

ಟಾಲಿವುಡ್ ‘ಮಹಾನಟಿ’ ಕೀರ್ತಿ ಸುರೇಶ್​​ಗೆ ಕಾಡ್ತಿರೋ ಆ ಚಿತ್ರ ಯಾವುದು?

ಕೀರ್ತಿ ಸುರೇಶ್​​.. ತನ್ನ ಬೆಳದಿಂಗಳ ನಗುವಿನಿಂದ ಅದ್ಭುತ ಅಂದದ ಅಭಿನಯದಿಂದ ಪ್ರೇಕ್ಷಕ ಮನೆಮನದಲ್ಲಿ ಜಾಗ ಪಡೆದಿರೋ ಟಾಲಿವುಡ್​ನ ಮಹಾನಟಿ. ಈಗ ಕೀರ್ತಿಗೆ ಬಾಲಿವುಡ್​​ನ ಆ ಸಿನಿಮಾ ಕಾಡುತ್ತಿದೆ ಅಂತೆ. ಮಾಡಿದ್ರೆ ಆ ಪಾತ್ರ ನಾನು ಮಾಡಬೇಕು, ಅಭಿಮಾನಿಗಳು ಆ ಪಾತ್ರದಲ್ಲಿ ನನ್ನನ ನೋಡಬೇಕು ಅನ್ನೋ ಆಸೆಯ ಕನಸನ್ನ ಕಾಣ್ತಿದ್ದಾರಂತೆ.

blank

ಬೆಳದಿಂಗಳ ಚೆಲುವು , ಈ ನಟಿಯನ್ನ ನೋಡೋದೇ ಒಂದು ಒಲವು, ಅದ್ಯಾವುದೇ ಪಾತ್ರವಾಗಿರಲಿ ಕೀರ್ತಿ ಸುರೇಶ್ ಇದ್ರೆ ಕಂಡಿತ ಸಿಗುತ್ತೆ ಗೆಲುವು. ಟಾಲಿವುಡ್ ಸಿನಿ ಲೋಕದ ಮಹಾನಟಿ ಕೀರ್ತಿ ಸುರೇಶ್ ಈಗ ಫೀಮೇಲ್ ಓರಿಯೆಂಟೆಡ್ ಸಿನಿಮಾಗಳಲ್ಲಿ ಮಿಂಚಿ ತನ್ನ ಸಾಮರ್ಥ್ಯವನ್ನ ಸಾಬೀತು ಮಾಡಿ ತೋರಿಸಿದ್ದಾರೆ. ಕೀರ್ತಿ ಸುರೇಶ್ ಹಿಂದೆ ಸಾಕಷ್ಟು ಸಿನಿಮಾಗಳ ಆಫರ್ಸ್​ಗಳು ಬರುತ್ತಿದ್ದರೂ ಕೀರ್ತಿ ಮಾತ್ರ ಕೀರ್ತಿ ತರೋ ಪಾತ್ರಗಳನ್ನ ಮಾತ್ರ ಆಯ್ಕೆ ಮಾಡ್ಕೊಂಡು ಅಭಿಮಾನಿ ಅಂಗಳದಲ್ಲಿ ಬೆಳದಿಂಗಳಾಗಿದ್ದಾರೆ.

blank

ಕೀರ್ತಿ ಸುರೇಶ್ ಅಕೌಂಟ್​​ನಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅಣ್ಣಾತ್ತೆ ಸಿನಿಮಾ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಮಹೇಶ್ ಬಾಬು ಸಿನಿಮಾಗಳು ಸೇರಿದಂತೆ ಅನೇಕ ಸಿನಿಮಾಗಳು ಇವೆ. ಆದ್ರೆ ಆಗೊಂದು ಈಗೊಂದು ಫೀಮೇಲ್ ಓರಿಯೆಟೆಂಡ್ ಸಿನಿಮಾಗಳು ಮಹಾನಟಿಯನ್ನ ಹುಡ್ಕೊಂಡು ಬರ್ತಿವೆ. ಅದ್ರಲೊಂದು ಬಾಲಿವುಡ್​ನ ಆ ಸಿನಿಮಾ..! ಬಾಲಿವುಡ್​​​​​ ಆ ಸಿನಿಮಾ ಅಂದ್ರೆ ಯಾವ ಸಿನಿಮಾ..? ಪರಮ್ ಪರಮ್ ಪರಮ ಸುಂದರಿ.. ‘‘ಮಿಮಿ’’.

blank

ಕೃತಿ ಸನೂನ್ ನಟನೆಯ ‘‘ಮಿಮಿ’’ ಸಿನಿಮಾ ಓಟಿಟಿ ಸಿನಿ ಲೋಕದಲ್ಲಿ ಹಿಟ್ ಆಗುತ್ತಿದೆ ಕೃತಿ ಪಾತ್ರ ಮತ್ತು ‘‘ಮಿಮಿ’’ ಕಥೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಬಾಡಿಗೆ ತಾಯಿ ತನದ ಸ್ಟೋರಿಯಲ್ಲಿ ಕೃತಿ ಸನೂನ್ ಅದ್ಭುತವಾಗಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಪಂಕಜ್ ತ್ರಿಪಾಠಿ ಪಾತ್ರಕ್ಕೂ ಬಾರಿ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಈ ಮಿಮಿ ಕಥೆ ತೆಲುಗು ಅಂಗಳದಲ್ಲಿ ರಿಮೇಕ್ ಆಗಲಿದೆ ‘‘ಮಿಮಿ’’ ಪಾತ್ರದಲ್ಲಿ ಮಹಾನಟಿ ಕಂಗೊಳಿಸಲಿದ್ದಾರೆ ಅನ್ನೋ ಮಾತುಗಳು ನಾರ್ಥ್ ನಿಂದ ಸೌಥ್ ತನಕ ಹಬ್ಬಿದೆ.

blank

ಈ ಸುದ್ದಿಯಲ್ಲಿ ಒಂದು ವಿಷಯ ನೋಟ್ ಮಾಡುವಂಥದ್ದು.. 2013ರಲ್ಲಿ ‘‘ಮಲ ಆಯಿ ವ್ಹಾಯಚಯ್’’ ಸಿನಿಮಾ ಮರಾಠಿಯಿಂದ ತೆಲುಗಿನ ‘‘ವೆಲ್​​ಕಮ್ ಒಬಾಮ’’ ಅನ್ನೋ ಹೆಸರಿನಲ್ಲಿ ರಿಮೇಕ್ ಆಗಿತ್ತು. ಆದ್ರೆ ಗೆದ್ದಿರಲಿಲ್ಲ, ಜನರ ಮನಸನ್ನ ಕದ್ದಿರಲಿಲ್ಲ. ಆದ್ರೆ ಈಗ ‘‘ಮಿಮಿ’’ ಸಿನಿಮಾವನ್ನ ಕೃತಿ ಸನೂನ್ ಮಾಡಿದ್ರಿಂದ ಸಿನಿಮಾ ಹಿಟ್ ಆಗಿದೆ, ಕೀರ್ತಿ ಸುರೇಶ್​ ಅವರಿಗೂ ಇಷ್ಟವಾಗಿ ತೆಲುಗಿನಲ್ಲಿ ಮತ್ತೊಮ್ಮೆ ಈ ಕಥೆಯನ್ನ ಕಟ್ಟಬೇಕು ಅನ್ನೋ ಮನಸಾಗಿದೆ. ಇನೇನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಸಮಾಚಾರ ಮಹಾನಟಿ ಬಳಗದಿಂದ ಬಂದ್ರೂ ಬರಬಹುದು.

blank

Source: newsfirstlive.com Source link