ಟಿ20 ವಿಶ್ವಕಪ್​ನತ್ತಲೇ ಶ್ರೇಯಸ್ ಅಯ್ಯರ್ ಚಿತ್ತ.. ಶ್ರೇಯಸ್​ ಅಯ್ಯರ್​ ಕನಸು ಆಗುತ್ತಾ ನನಸು..?

ಟಿ20 ವಿಶ್ವಕಪ್​ನತ್ತಲೇ ಶ್ರೇಯಸ್ ಅಯ್ಯರ್ ಚಿತ್ತ.. ಶ್ರೇಯಸ್​ ಅಯ್ಯರ್​ ಕನಸು ಆಗುತ್ತಾ ನನಸು..?

ಒಂದು ಇಂಜುರಿ 4 ತಿಂಗಳ ವಿಶ್ರಾಂತಿಗೆ ದೂಡಿತ್ತು. ಆ ಒಂದು ಇಂಜುರಿಯೇ, ತಂಡದಲ್ಲಿ ಆತನ ಸ್ಥಾನವನ್ನೂ ಅಂತತ್ರಕ್ಕೆ ಸಿಲುಕಿಸುವ ಪರಿಸ್ಥಿತಿಗೆ ತಂದಿಟ್ಟಿದೆ. ಆದ್ರೆ, ಇದನ್ನೇ ಛಲವಾಗಿ ತೆಗೆದುಕೊಂಡಿರು ಈತ, ನಾನು ಸಾಧಿಸಿಯೇ ತೀರುವೆ ಎಂಬ ಸಂಕಲ್ಪ ಮಾಡಿದ್ದಾನೆ. ಆತನ ಇಚ್ಛಾಶಕ್ತಿ ನೆರವೇರುತ್ತಾ ಇಲ್ವಾ..?

ಶ್ರೇಯಸ್ ಅಯ್ಯರ್.. ಮಧ್ಯಮ ಕ್ರಮಾಂಕದ ಯಶಸ್ವಿ ಬ್ಯಾಟ್ಸ್​ಮನ್.. ಟೀಮ್ ಇಂಡಿಯಾ ಕಾಡ್ತಿದ್ದ 4ನೇ ಕ್ರಮಾಂಕದ ಕೊರತೆ ನೀಗಿಸಿದ ಆಪದ್ಬಾಂಧವ.. ಆದ್ರೀಗ ಇದೇ ಆಪದ್ಬಾಂಧವನ ಸ್ಥಾನವೇ ಅಂತತ್ರಕ್ಕೆ ಸಿಲುಕಿದೆ. ವಿಶ್ವಕಪ್​ನಲ್ಲಿ ಸ್ಥಾನ ಸಿಗೋದು ಅನುಮಾನ ಎಂಬ ಪರಿಸ್ತಿತಿಗೆ ತಲುಪಿದ್ದಾರೆ. ಇದೆಲ್ಲದಕ್ಕೂ ಕಾರಣ.. ಒಂದು ಇಂಜುರಿ..

ಹೌದು..! ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಇಂಜುರಿಗೆ ತುತ್ತಾದ ಶ್ರೇಯಸ್​, ಬರೋಬ್ಬರಿ 4 ತಿಂಗಳು ಕ್ರಿಕೆಟ್​ನಿಂದಲೂ ದೂರ ಉಳಿಯಬೇಕಾಯ್ತು. ಇದು ತಂಡದಿಂದ ಮಾತ್ರವಲ್ಲದೆ, ಟಿ20 ವಿಶ್ವಕಪ್​ ಕನಸನ್ನೂ ಭಗ್ನಗೊಳಿಸುವಂತ ಪರಿಸ್ಥಿತಿ ತಂದೊಡ್ಡಿದೆ.

blank
ಟಿ20 ವಿಶ್ವಕಪ್​ನತ್ತಲೇ ಶ್ರೇಯಸ್ ಅಯ್ಯರ್ ಚಿತ್ತ..!
ಫಿಟ್​ನೆಸ್ ಕ್ಲಿಯರನ್ಸ್​ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿರುವ ಶ್ರೇಯಸ್​​​, ಸದ್ಯ 14ನೇ ಆವೃತ್ತಿಯ ದ್ವೀತಿಯಾರ್ಧದ ಐಪಿಎಲ್​ಗೆ ಸಜ್ಜಾಗುತ್ತಿದ್ದಾರೆ.. ಇದಕ್ಕಾಗಿ ಒಂದು ತಿಂಗಳ ಮುನ್ನವೇ ದುಬೈನಲ್ಲಿ ಬೀಡುಬಿಟ್ಟಿದ್ದಾರೆ. ಒಂದೆಡೆ ಐಪಿಎಲ್​ಗೆ ತಯಾರಿ ಆರಂಭಿಸಿತ್ತಲೇ, ಮತ್ತೊಂದೆಡೆ ಟಿ20 ವಿಶ್ವಕಪ್​ ಟೂರ್ನಿ ಟಾರ್ಗೆಟ್​ ಮಾಡ್ತಿದ್ದಾರೆ. ಅಷ್ಟೇ ಅಲ್ಲ..! ಇದಕ್ಕಾಗಿ ಸಿದ್ಧತೆ ನಡೆಸಿರೋ ಮುಂಬೈಕರ್​​​​, ವಿಶ್ವಕಪ್​​ ತಂಡದಲ್ಲಿ ಸ್ಥಾನ ಗಳಿಸುವ ಬಗ್ಗೆ ದೃಢ ಸಂಕಲ್ಪ ಮಾಡಿದ್ದಾರೆ. ಇನ್ಮುಂದೆ ತನಗೆ ವಿಶ್ರಾಂತಿಯ ದಿನಗಳಲ್ಲ ಎಂದಿದ್ದಾರೆ.

‘ಇವು ನನಗೆ ವಿಶ್ರಾಂತಿಯ ದಿನಗಳಲ್ಲ’
ಇಂಜುರಿ ಬಳಿಕ ಐಪಿಎಲ್​ ಆಡಲು ಬಂದಿರುವುದು ಉತ್ತಮ ಅವಕಾಶ. ಕಳೆದ ನಾಲ್ಕು ತಿಂಗಳುಗಳ ಘಟನೆಗಳು, ನನ್ನನ್ನ ಮಾನಸಿಕವಾಗಿ ಗಟ್ಟಿಯಾಗಿಸಿದೆ. ಚುರುಕಾಗಿ ಕೆಲಸ ಮಾಡಲು ಉತ್ತೇಜಿಸಿದೆ. ಈಗ ನನಗೆ ವಿಶ್ರಾಂತಿಯ ದಿನಗಳಿಲ್ಲ. ನಾನು ನಿಜವಾಗಿಯೂ ಮುಂದಿನ ಪಂದ್ಯಗಳಿಗಾಗಿ ಕಾಯುತ್ತಿದ್ದೇನೆ.- ಶ್ರೇಯಸ್ ಅಯ್ಯರ್, ಬ್ಯಾಟ್ಸ್​ಮನ್​

ಒಂದೆಡೆ ಶ್ರೇಯಸ್ ವಿಶ್ವಕಪ್​ನಲ್ಲಿ ಆಡಲು ಪಣತೊಟ್ಟಿದ್ರೆ, ಅತ್ತ ಅಯ್ಯರ್​​ ಅಲಭ್ಯತೆಯನ್ನ ಎನ್​ಕ್ಯಾಶ್​ ಮಾಡಿಕೊಂಡಿರುವ ಸೂರ್ಯ, ಅಲ್ಪ ಸಮಯದಲ್ಲೇ ನಂಬಿಕಸ್ಥ ಬ್ಯಾಟ್ಸ್​ಮನ್ ಆಗಿ ಬೆಳೆದು ನಿಂತಿದ್ದಾರೆ. ಇವೆಲ್ಲದರ ನಡುವೆ ಎರಡ್ಮೂರು ದಿನಗಳಲ್ಲಿ ವಿಶ್ವಕಪ್ ತಂಡವನ್ನ ಪ್ರಕಟಿಸಲು ಬಿಸಿಸಿಐ ಸಿದ್ಧತೆ ನಡೆಸ್ತಿದೆ. ಹೀಗಾಗಿ ಶ್ರೇಯಸ್​​ ಅಯ್ಯರ್ ಯಾವ ಮಾರ್ಗದಲ್ಲಿ ಟಿ20 ವಿಶ್ವಕಪ್ ತಂಡಕ್ಕೆ ಎಂಟ್ರಿ ಕೊಡ್ತಾರೆ..? ಅಕಸ್ಮಾತ್ ತಂಡದಲ್ಲಿ ಸ್ಥಾನ ಪಡೆದರೂ ಮೊದಲ ಆಯ್ಕೆಯ ಆಟಗಾರರಾಗ್ತಾರಾ ಎಂಬ ಕುತೂಹಲ ಗರಿಗೆದರಿದೆ. ಶ್ರೇಯಸ್​ ಅಯ್ಯರ್​ ಮಾತ್ರ, ಹಿಂದಿನ ಪ್ರದರ್ಶನವೇ ನನ್ನ ಕೈಹಿಡಿಯುತ್ತೆ. ತಂಡದ ಗೆಲುವಿಗಾಗಿ ಏನಾದರೂ ಮಾಡಲು ಸಿದ್ಧ ಅಂತಿದ್ದಾರೆ.

Source: newsfirstlive.com Source link