ಹಾಲಿವುಡ್​ಗೆ ಹಾರಿದ ದೀಪಿಕಾ ಪಡುಕೋಣೆ; ಈ ಬಾರಿ ನಟನೆ ಜೊತೆಗೆ ನಿರ್ಮಾಣಕ್ಕೂ ಸೈ ಎಂದ ಡಿಪ್ಪಿ

ಹಾಲಿವುಡ್​ಗೆ ಹಾರಿದ ದೀಪಿಕಾ ಪಡುಕೋಣೆ; ಈ ಬಾರಿ ನಟನೆ ಜೊತೆಗೆ ನಿರ್ಮಾಣಕ್ಕೂ ಸೈ ಎಂದ ಡಿಪ್ಪಿ

ಬಾಲಿವುಡ್​ನ ಟಾಪ್​ ನಟಿಮಣಿಯರ ಪೈಕಿ ಬೆಂಗಳೂರು ಬ್ಯೂಟಿ ದೀಪಿಕಾ ಪಡುಕೋಣೆ ಕೂಡ ಒಬ್ರು. ಬಾಲಿವುಡ್​ನಲ್ಲಿ ಈಗಾಗಲೇ ಸಾಲು ಸಾಲು ಹಿಟ್​ ಸಿನಿಮಾಗಳನ್ನು ಕೊಟ್ಟ ಡಿಪ್ಪಿ 2017 ರಲ್ಲಿ ‘XXX ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್’ ಸಿನಿಮಾದ ಮೂಲಕ ಹಾಲಿವುಡ್​ಗೂ ಎಂಟ್ರಿ ಕೊಟ್ಟಿದ್ರು. ಇದೀಗ ಡಿಂಪಲ್​ ಬ್ಯೂಟಿ ದೀಪಿಕಾ ಎರಡನೇ ಬಾರಿಗೆ ಹಾಲಿವುಡ್​ ಸಿನಿಮಾದಲ್ಲಿ ನಟಿಸೋಕೆ ಸಜ್ಜಾಗಿದ್ದಾರೆ.

ಇದನ್ನೂ ಓದಿ: ದೂರಾಗ್ತಾರಾ ಸಮಂತಾ- ನಾಗಚೈತನ್ಯ ಜೋಡಿ? ಡಿವೋರ್ಸ್ ಬಗ್ಗೆ ಸಮಂತಾ ಹೇಳೋದೇನು?

ಹೌದು ನಟಿ ದೀಪಿಕಾ ಪಡುಕೋಣೆ STX ಫಿಲಂಸ್​ ಮತ್ತು ಟೆಂಪಲ್​ ಹಿಲ್​ ಬ್ಯಾನರ್​ ನಡಿಯಲ್ಲಿ ಮೂಡಿ ಬರುತ್ತಿರುವ ರೊಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ದೀಪಿಕಾ ಈ ಸಿನಿಮಾದಲ್ಲಿ ನಟಿಸುವುದರ ಜೊತೆಗೆ STX ಫಿಲಂಸ್​ ಮತ್ತು ಟೆಂಪಲ್​ ಹಿಲ್ ಬ್ಯಾನರ್​ ಜೊತೆ ಸೇರಿ ತಮ್ಮ ಕಾ ಪ್ರೊಡಕ್ಷನ್ಸ್​ ನಡಿಯಲ್ಲಿ ಮೊದಲ ಬಾರಿಗೆ ಹಾಲಿವುಡ್​ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಕ್ಕೋ..ಮನೆ ಮಂದಿಯೆಲ್ಲಾ ನೋಡ್ತಾವ್ರೆ.. ಅದೇನ್ ತಿಂತೌನೆ ಬಾವ?

“ಕಾ ಪ್ರೊಡಕ್ಷನ್ಸ್ ಅನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಉದೇಶದಿಂದ ಸ್ಥಾಪನೆ ಮಾಡಲಾಗಿದೆ. STX ಫಿಲಂಸ್​ ಮತ್ತು ಟೆಂಪಲ್‌ ಹಿಲ್‌ ಪ್ರೊಡಕ್ಷನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಲು ನನಗೆ ಸಂತೋಷವಾಗಿದೆ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

Source: newsfirstlive.com Source link