ಗದಗ; ಕೊರೊನಾ ಮೂರನೇ ಅಲೆ ಭೀತಿಯ ನಡುವೆ ತುಂಬಿ ತುಳುಕುತ್ತಿವೆ ಆಸ್ಪತ್ರೆಗಳು

ಗದಗ; ಕೊರೊನಾ ಮೂರನೇ ಅಲೆ ಭೀತಿಯ ನಡುವೆ ತುಂಬಿ ತುಳುಕುತ್ತಿವೆ ಆಸ್ಪತ್ರೆಗಳು

ಕೊರೊನಾ ಮೂರನೆಯ ಅಲೆ ಕೆಲವು ರಾಜ್ಯಗಳಲ್ಲಿ ಈಗಾಗಲೇ ತಾಂಡವಾಡ್ತಿದೆ. ಕೆಲವು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಆದ್ರೆ ಗದಗ ಜಿಲ್ಲೆ ಮಾತ್ರ ಸೇಫ್ ಅಂತ ಸರ್ಕಾರ ಭಾವಿಸಿದೆ. ಆದ್ರೆ ಈ ನಡುವೆ ಕಳೆದ ಒಂದು ವಾರದಿಂದ ಮಕ್ಕಳ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಅದರಲ್ಲೂ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆಗೆ ದಾಖಲಾಗಲು ದುಂಬಾಲು ಬಿದ್ದಿದ್ದಾರೆ.

ಗದಗ ಜಿಲ್ಲೆಯಲ್ಲಿ ಕೊರೊನಾ ಮೂರನೆಯ ಅಲೆ ಆತಂಕ..!

ಹೌದು, ಗದಗ ನಗರದ ಕೆ.ಸಿ ರಾಣೆ ರಸ್ತೆಯ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಅದರಲ್ಲೂ ಇಂದು ಮಕ್ಕಳಿಂದ ಪೀಡಿಯಾಟ್ರಿಕ್ ವಾರ್ಡ್ ತುಂಬಿ ತುಳುಕುತ್ತಿತ್ತು. ಆಸ್ಪತ್ರೆಯ ತುಂಬ ವಿವಿಧ ಲಕ್ಷಣಗಳಿಂದ ಬಳಲುತ್ತಿರೋ ಮಕ್ಕಳೇ ಕಾಣಸಿಗುತ್ತಿದ್ದರು. ಅದರಲ್ಲೂ ಅಗಸ್ಟ್ ತಿಂಗಳಲ್ಲೇ ಸುಮಾರು 400 ಮಕ್ಕಳು ಹೊರ ರೋಗಿಗಳಾಗಿ ಆಸ್ಪತ್ರೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳ್ತಿದ್ದಾರೆ. ಆ ಪೈಕಿ, 80 ಮಕ್ಕಳು ನೆಗಡಿ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇರೋ ಮಕ್ಕಳನ್ಮು ಅಡ್ಮಿಟ್ ಮಾಡಿಕೊಳ್ಳಾಗಿತ್ತು. 80 ಮಕ್ಕಳ ಕೋವಿಡ್ ಟೆಸ್ಟ್ ಮಾಡಲಾಗಿ ಅದೃಷ್ಟವಶಾತ್ 80 ಮಕ್ಕಳ ವರದಿ ನೆಗೆಟಿವ್ ಬಂದಿದೆ.

blank

ಆದ್ರೆ ಕೋವಿಡ್ ರೋಗದ ಲಕ್ಷಣಗಳೇ ಮಕ್ಕಳಿಗೆ ಬಾದಿಸಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮಕ್ಕಳಿಗೆ ಕೋವಿಡ್​ ಬಂದಿದೆಯಾ ಅಥವಾ ಬೇರೆ ಕಾಯಿಲೆ ಬಂದಿದೆಯಾ ಎನ್ನುವ ಆತಂಕ ಮನೆ ಮಾಡಿದೆ. ಇದರಿಂದ H1N1 ತಪಾಸಣೆಗೆ ಕಳಿಸಲಾಗಿದೆ. ಇನ್ನು ಇಷ್ಟು ದಿನ ತಿಂಗಳಿಗೆ 10 ರಿಂದ 15 ಮಕ್ಕಳು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುತ್ತಿದ್ದರು. ಆದ್ರೆ ಈ ಅಗಸ್ಟ್ ತಿಂಗಳಲ್ಲಿ ಮಕ್ಕಳು ಆಸ್ಪತ್ರೆಗೆ ಬರುವ ಸಂಖ್ಯೆ ಹೆಚ್ಚಳವಾಗಿದೆ. ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಡಾ: ಶಿವನಗೌಡ ಜೋಳದರಾಶಿ ಅವರನ್ನು ಕೇಳಿದ್ರೆ, ಹೌದು ಈ ತಿಂಗಳಲ್ಲಿ ಹೆಚ್ಚಿನ ಮಕ್ಕಳು ಆಸ್ಪತ್ರೆ ಬರ್ತಾಯಿದ್ದು, ಅವರು ಕೋವಿಡ್ ಲಕ್ಷಣ ಹೊಂದಿದ್ದಾರೆ ಅಂತಿದ್ದಾರೆ.

blank

ಒಂದೇ ತಿಂಗಳಲ್ಲಿ 80 ಮಕ್ಕಳು ದಾಖಲು..

ಇನ್ನು ಇತ್ತೀಚೆಗೆ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮತ್ತು ಹವಾಮಾನ ವೈಪರಿತ್ಯ ಎದುರಾಗಿತ್ತು. ಪರಿಣಾಮ ಸಾಮಾನ್ಯವಾಗಿ ಹೆಚ್ಚಿನ ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ, ಬರುವುದು ಸಹಜ. ಆದ್ರೆ ಈ ತಿಂಗಳಲ್ಲಿ ಹೆಚ್ಚಿನ ಮಕ್ಕಳು ಆಸ್ಪತ್ರೆಗೆ ದಾಖಲಾಗ್ತಿದ್ದಾರೆ ಅಂತ ವೈದ್ಯರು ಹೇಳ್ತಿದ್ದಾರೆ. ಈ ಹಿಂದೆ ಆಗಸ್ಟ್​​ ತಿಂಗಳಲ್ಲಿ 10 ರಿಂದ 15 ಮಕ್ಕಳು ಅನಾರೋಗ್ಯ, ಇತರೇ ಸಮಸ್ಯೆಗಳಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಈವಾಗ ಏಕಾಏಕಿ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ.

ಕೊರೊನಾ ಮೂರನೇಯ ಅಲೆ ಮಕ್ಕಳನ್ನೆ ಟಾರ್ಗೆಟ್ ಮಾಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಮಕ್ಕಳಿಗೆ ಚಿಕಿತ್ಸೆ ನೀಡಲು ಗದಗ ಆರೋಗ್ಯ ಇಲಾಖೆ ಹಾಗೂ ಜಿಮ್ಸ್ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದ್ರೂ ಕೂಡಾ ಅಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಕ್ಕಳು ಕೋವಿಡ್ ಲಕ್ಷಣದಿಂದ ಆಸ್ಪತ್ರೆ ಬರ್ತಾಯಿರೋದು ವೈದ್ಯರಲ್ಲಿಯೂ ಆತಂಕವನ್ನು ಹೆಚ್ಚಳ ಮಾಡಿದೆ.

ಒಟ್ಟಿನಲ್ಲಿ ಕೊರೊನಾ ಮೂರನೇಯ ಅಲೆ ಆತಂಕ ಜಿಲ್ಲೆಯ ಜನರಲ್ಲ್ಲಿಲಿ ಎದುರಾಗಿದೆ. ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದರೂ, ರಿಪೋರ್ಟ್ ಮಾತ್ರ ನೆಗೆಟಿವ್ ಬಂದಿವೆ. ಹಾಗಾಗಿಯೇ ವೈದ್ಯರು ಮಕ್ಕಳ‌ ಕುರಿತು ‌ಎಚ್ವರಿಕೆ ವಹಿಸಿ, ಹಾಗೂ ಕೋವಿಡ್​​ ನಿಯಮಗಳನ್ನು ಪಾಲನೆ‌ ಮಾಡೋದು ಒಳಿತು.

Source: newsfirstlive.com Source link