ಮ್ಯಾನೇಜ್​ಮೆಂಟ್ ಕಾರ್ಯವೈಖರಿ ಬಗ್ಗೆ ಪ್ರಶ್ನೆ-ಪ್ರಮುಖ ಆಟಗಾರರನ್ನ ಪ್ರವಾಸಕ್ಕೆ ಕರೆದೊಯ್ಯಿತಾ BCCI?

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿ ಮುಕ್ತಾಯದ ಅಂತ್ಯಕ್ಕೆ ಬಂದು ತಲುಪಿದೆ. ಆದ್ರೆ, ಈ ಸರಣಿ ಕೆಲವರಿಗೆ ಕೇವಲ ಫಾರಿನ್ ಟೂರ್ ಆಯ್ತಾ ಎಂಬ ಪ್ರಶ್ನೆಗೆ, ನಾಂದಿಯಾಡಿದೆ. ಅಷ್ಟೇ ಅಲ್ಲ..! ಮ್ಯಾನೇಜ್​ಮೆಂಟ್ ಕಾರ್ಯವೈಖರಿ ಬಗ್ಗೆನೂ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ತೆರಳಿ ಬರೋಬ್ಬರಿ, 4 ತಿಂಗಳೇ ಕಳೆದಿವೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೂ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು, ಇನ್ನ 14 ದಿನಗಳಲ್ಲಿ ಪ್ರವಾಸವೇ ಅಂತ್ಯಗೊಳ್ಳಲಿದೆ. ಆದ್ರೆ, ಈ ಸುದೀರ್ಘ ಪ್ರವಾಸದಲ್ಲಿ ಮ್ಯಾನೇಜ್​ಮೆಂಟ್​ನ ಕಾರ್ಯವೈಖರಿ ಮಾತ್ರ ಪ್ರಶ್ನಿಸುವಂತೆ ಮಾಡಿದೆ. ಇದಕ್ಕೆ ಕಾರಣ ಆಟಗಾರರ ವಿಚಾರದಲ್ಲಿ ಮ್ಯಾನೇಜ್​ಮೆಂಟ್ ನಡೆ..

ಮ್ಯಾನೇಜ್​ಮೆಂಟ್ ಕಾರ್ಯವೈಖರಿ ಬಗ್ಗೆ ಪ್ರಶ್ನೆ-ಪ್ರಮುಖ ಆಟಗಾರರನ್ನ ಪ್ರವಾಸಕ್ಕೆ ಕರೆದೊಯ್ಯಿತಾ BCCI?

ಕೆಲ ಆಟಗಾರರಿಗೆ ಫಾರಿನ್ ಟ್ರಿಪ್​​ಗೆ ಕರೆದೊಯ್ಯಿತಾ..?
ಇಂಥದ್ದೊಂದು ಪ್ರಶ್ನೆ ಹುಟ್ಟಿಗೆ ಕಾರಣವೇ ಮ್ಯಾನೇಜ್​ಮೆಂಟ್ ಬೆಣ್ಣೆ, ಸುಣ್ಣದ ಕಥೆ. ಹೌದು..! ನಾಲ್ಕೂವರೆ ತಿಂಗಳ ಪ್ರವಾಸದಲ್ಲಿ 21 ಪ್ರಮುಖ ಆಟಗಾರರು, ಇಬ್ಬರು ಸ್ಟ್ಯಾಂಡ್​​ಬೈ ಸೇರಿ, ಒಟ್ಟು 23 ಮಂದಿ ಇಂಗ್ಲೆಂಡ್​ನಲ್ಲಿ ಬೀಡು ಬಿಟ್ಟಿದ್ದಾರೆ. ಆದ್ರೆ, ಈ ಪೈಕಿ ಆಡಿರೋದು ಮಾತ್ರ, 12 ಮಂದಿ ಮಾತ್ರವೇ ಆಗಿದ್ದಾರೆ. ಇನ್ನುಳಿದ 9 ಮಂದಿ ಪ್ರಮುಖ ಆಟಗಾರರು, ಕಳೆದ ಮೂರು ಪಂದ್ಯಗಳಿಂದ ಬೆಂಚ್​​ ಬಿಸಿಯನ್ನೇ ಮಾಡ್ತಿದ್ದಾರೆ. ಕೇವಲ ಇಂಗ್ಲೆಂಡ್​ ಪ್ರವಾಸಕ್ಕಾಗಿ ಕರೆದೊಯ್ಯಿತಾ? ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.

ವೈಫಲ್ಯದ ಹೊರತಾಗಿ ಬೆಂಚ್ ಕಾಯಿಸ್ತಿರೋದ್ಯಾಕೆ..?
ಟೆಸ್ಟ್ ಸರಣಿಯ ಮೂರು ಪಂದ್ಯಗಳು ಮುಗಿದಿದೆ. ಈ ಪಂದ್ಯಗಳಲ್ಲಿ ಅಜಿಂಕ್ಯಾ ರಹಾನೆ, ಇಶಾಂತ್ ಶರ್ಮಾ, ರಿಷಭ್ ಪಂತ್, ರವೀಂದ್ರ ಜಡೇಜಾರಂಥ ಆಟಗಾರರು, ಪದೇ ಪದೇ ವೈಫಲ್ಯ ಅನುಭವಿಸಿದರು. ಸ್ಟಾರ್​ಗಿರಿಗೆ ಮಣೆಹಾಕಲಾಯ್ತೇ ಹೊರೆತು, ಪಂದ್ಯದಲ್ಲಿ ಇಂಫ್ಯಾಕ್ಟ್​ ಮಾಡಬಲ್ಲ ಅಶ್ವಿನ್, ಕನ್ನಡಿಗ ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ಉಮೇಶ್​ ಯಾದವ್​ಗೆ ಬೆಂಚ್​ಗೆ ಸೀಮಿತಗೊಳಿಸಿದರು.

blank

ಇವರಲ್ಲದೇ ಅನುಭವಿ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ, ಅಕ್ಷರ್ ಪಟೇಲ್, ಅಭಿಮನ್ಯು ಈಶ್ವರನ್, ಪೃತ್ವಿ ಶಾ, ಸೂರ್ಯಕುಮಾರ್ ಯಾದವ್​ರಂಥ ಪ್ರತಿಭಾನ್ವಿತ ಆಟಗಾರರನ್ನ, ಪ್ರಯೋಗಿಸುವ ಅವಕಾಶವೂ ಇತ್ತು. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮ್ಯಾನೇಜ್​ಮೆಂಟ್, ಪಿಚ್ ಕಂಡೀಷನ್ಸ್​ ಅರಿಯದೇ ಅದೇ ತಂಡವನ್ನ ಕಣಕ್ಕಿಳಿಸಿತ್ತು. ಆದ್ರೆ ಲೀಡ್ಸ್​ ಸೋಲಿನ ಬಳಿಕ ವಿರಾಟ್, ಆಟಗಾರರನ್ನ ಸಮರ್ಥಿಸಿಕೊಳ್ಳುತ್ತಾ ನೀಡಿರೋ ಹೇಳಿಕೆ, ಬೆಂಚ್ ಕಾದಿದ್ದವರಿಗೆ ಅವಕಾಶ ನೀಡಲ್ವಾ ಎಂಬ ಸುಳಿವನ್ನಾ ನೀಡುವಂತೆಯೇ ಇದೆ. ಹೀಗಾಗಿಯೇ 12 ಆಟಗಾರರಿಗೆ ಬಿಟ್ರೆ, ಉಳಿದ 9 ಆಟಗಾರರನ್ನ, ಇಂಗ್ಲೆಂಡ್ ಪಿಕ್​ನಿಕ್​ಗೆ ಕಳುಹಿಸಿದ್ರಾ ಎಂದು ಪ್ರಶ್ನಿಸುವಂತೆ ಮಾಡಿದೆ.

Source: newsfirstlive.com Source link