ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ನ್ಯಾ.ಬಿ.ವಿ. ನಾಗರತ್ನ ಪ್ರಮಾಣವಚನ.. ಹುಟ್ಟೂರು ಮಂಡ್ಯದಲ್ಲಿ ಸಡಗರ

ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ನ್ಯಾ.ಬಿ.ವಿ. ನಾಗರತ್ನ ಪ್ರಮಾಣವಚನ.. ಹುಟ್ಟೂರು ಮಂಡ್ಯದಲ್ಲಿ ಸಡಗರ

ಮಂಡ್ಯ: ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ನ್ಯಾ.ಬಿ.ವಿ.ನಾಗರತ್ನ ನೇಮಕಗೊಂಡಿದ್ದು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿನ್ನೆಲೆ ಹುಟ್ಟೂರು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಇಂಗಲಗುಪ್ಪೆ ಗ್ರಾಮದ ಜನರ ಮೊಗದಲ್ಲಿ ಸಂತಸ ಮೂಡಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ಗೆ ನ್ಯಾಯಮೂರ್ತಿಗಳ ಪದೋನ್ನತಿ: ಭಾಷಣದ ವೇಳೆ ಗದ್ಗದಿತರಾದ ನ್ಯಾ. ಬಿ.ವಿ ನಾಗರತ್ನ

ನ್ಯಾ.ನಾಗರತ್ನ ತಂದೆ ದಿ.ಇ.ಎಸ್.ವೆಂಕಟರಾಮಯ್ಯ ಕೂಡ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 1979 ರಿಂದ 1989 ರ ವರೆಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದ ಇ.ಎಸ್.ವೆಂಕಟರಾಮಯ್ಯ.. ಜೂನ್ 19, 1989 ರಿಂದ 6 ತಿಂಗಳ ಅವಧಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು.. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದರೂ ನ್ಯಾ.ನಾಗರತ್ನ ಹುಟ್ಟೂರಿನ ಅಭಿಮಾನ ಬಿಟ್ಟಿಲ್ಲ.. ಆಗಾಗ್ಗೆ ಹುಟ್ಟೂರಿಗೆ ಭೇಟಿ ನೀಡುತ್ತಿರುತ್ತಾರೆ.

ಇದನ್ನೂ ಓದಿ: 2027ಕ್ಕೆ ಕರ್ನಾಟಕದ ನ್ಯಾ.ಬಿ.ವಿ ನಾಗರತ್ನ ಭಾರತದ ಮೊದಲ ಚೀಫ್ ಜಸ್ಟೀಸ್?

ನಾಗರತ್ನರ ಕಿರು ಪರಿಚಯ ಹೀಗಿದೆ..

30 ಅಕ್ಟೋಬರ್ 1962ರಲ್ಲಿ ನಿವೃತ್ತ ನ್ಯಾಯಮೂರ್ತಿ ದಿ.ಇ.ಎಸ್.ವೆಂಕಟರಾಮಯ್ಯ ಅವರ ಏಕೈಕ ಪುತ್ರಿಯಾಗಿ ಜನಿಸಿದ ಅವರು ಬೆಂಗಳೂರಿನ ಸೋಫಿಯಾ ಶಾಲೆಯಲ್ಲಿ‌ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿ, ಪಿಯುಸಿ, ಪದವಿ ಹಾಗೂ ಕಾನೂನು ಪದವಿಯನ್ನು ದೆಹಲಿಯಲ್ಲಿ ಪೂರೈಸಿದರು.1987ರಲ್ಲಿ ಕರ್ನಾಟಕದ ಬಾರ್ ಕೌನ್ಸಿಲ್ ಗೆ ಸೇರಿ ವಕೀಲ ವೃತ್ತಿ ಆರಂಭಿಸಿ, 2008ರಲ್ಲಿ ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಇದಕ್ಕೂ ಮೊದಲು ಬೆಂಗಳೂರಿನ ಸಾಂವಿಧಾನಿಕ ಮತ್ತು ವಾಣಿಜ್ಯ ಕಾನೂನು ಅಧ್ಯಯನ ಮಾಡಿದರು. ಅವರನ್ನು 17 ಫೆಬ್ರವರಿ 2010ರಂದು ಹೈಕೋರ್ಟ್ ಕಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ನ್ಯಾ ನಾಗರತ್ನ ಅವರ ತಂದೆ ಇ.ಎಸ್.ವೆಂಕಟರಾಮಯ್ಯ ಅವರು ದೇಶದ 19ನೇ ಮುಖ್ಯ ನ್ಯಾಯಾಧೀಶರಾಗಿದ್ದರು.

Source: newsfirstlive.com Source link