ನನ್ನ ಕೊನೆ ಉಸಿರಿರೋವರೆಗೂ ಸಿದ್ದರಾಮಯ್ಯ, ನಮ್ಮ ಸಂಬಂಧ ಹೀಗೆ ಇರುತ್ತೆ -ಜಮೀರ್

ನನ್ನ ಕೊನೆ ಉಸಿರಿರೋವರೆಗೂ ಸಿದ್ದರಾಮಯ್ಯ, ನಮ್ಮ ಸಂಬಂಧ ಹೀಗೆ ಇರುತ್ತೆ -ಜಮೀರ್

ಬೆಂಗಳೂರು: ಜಿಂದಾಲ್​ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಇಂದು ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಪಸ್​ ಆಗಿದ್ದು, ಜಿಂದಾಲ್​ ಕೇಂದ್ರದಿಂದ ಸಿದ್ದರಾಮಯ್ಯ ಅವರು ಡಿಸ್ಚಾರ್ಜ್​​ ಆದ ವೇಳೆ ಶಾಸಕ ಜಮೀರ್ ಅವರು ಕರೆದುಕೊಂಡು ಹೋಗಲು ಆಗಮಿಸಿದ್ದರು.

blank

ಈ ವೇಳೆ ನ್ಯೂಸ್​​ಫಸ್ಟ್​​​​ನೊಂದಿಗೆ ಮಾತನಾಡಿದ ಜಮೀರ್ ಅವರು, ಇವತ್ತು ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಹೋಗಲು ಬಂದೆ. ಅವರು ಇವತ್ತು ಡಿಸ್ಚಾರ್ಜ್ ಆಗ್ತೀನಿ ಅಂತ ಹೇಳಿದ್ರು, ಅದಕ್ಕೆ ನಾನೇ ಕರೆದುಕೊಂಡು ಹೋಗೋಣಾ ಅಂತ ಬಂದೆ. ಇವತ್ತು ಸಂಪೂರ್ಣ ಸಿದ್ದರಾಮಯ್ಯ ಜೊತೆಗೆ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

blank

ಇದೇ ವೇಳೆ ಬೇರೆ ಯಾವ ನಾಯಕರು ಸಿದ್ದರಾಮಯ್ಯ ಜೊತೆಗೆ ಇರಲ್ಲ ನೀವೇ ಇರ್ತಿರಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್ ಅವರು, ಅವರದ್ದು ನಂದು ಸಂಬಂಧ ಆ ರೀತಿ ಇದೆ. ನನ್ನ ಕೊನೆ ಉಸಿರು ಇರುವವರೆಗೂ ಈ ಸಂಬಂಧ ಹೀಗೆ ಇರುತ್ತೆ. ನಾನು ಯಾವತ್ತಿನವರೆಗೂ ಬದುಕಿರುತ್ತೇನೋ ಅಲ್ಲಿಯವರೆಗೆ ಸಿದ್ದರಾಮಯ್ಯ ಜೊತೆಗೆ ಇರುತ್ತೇನೆ. ಅಲ್ಲಿಯವರೆಗೂ ಇದೇ ಗುರು-ಶಿಷ್ಯರ ಸಂಬಂಧ ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.

blank

ಸಿದ್ದರಾಮಯ್ಯ ಮಾಸ್ ಲೀಡರ್…
ಸಿದ್ದರಾಮಯ್ಯ ಅವರು ರಾಜ್ಯದ ಮಾಸ್​ ಲೀಡರ್​. ಜನರು ಸಿದ್ದರಾಮಯ್ಯ ಅವರು ಕೊಟ್ಟಿರುವ ಕಾರ್ಯಕ್ರಮಗಳನ್ನು ಈಗ ನೆನಪಿಸಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಈಗ ಅವರು 10 ದಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ.. ಈಗ ಅವರು 74 ವರ್ಷದವರಂತೆ ಕಾಣುತ್ತಿಲ್ಲ, 64 ವರ್ಷದವರಂತೆ ಕಾಣುತ್ತಿದ್ದಾರೆ. ನನಗೆ ಅವರನ್ನು ನೋಡಿ ಅಚ್ಚರಿ ಆಯ್ತು.. ಅವರ ವಯಸ್ಸು 15 ವರ್ಷ ಹಿಂದಕ್ಕೆ ಹೋಗಿದೆ. ರಾಹುಲ್ ಗಾಂಧಿ ಅವರು ಕೂಡ ಸಿದ್ದರಾಮಯ್ಯ ಅವರ ವಯಸ್ಸು 64 ಅಂದುಕೊಂಡಿದ್ದರಂತೆ ಎಂದು ತಿಳಿಸಿದರು.

blank

blank

blank

Source: newsfirstlive.com Source link