ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿಸಿಕೊಂಡ ಖಾಸಗಿ ಫೈನಾನ್ಸ್

ಯಾದಗಿರಿ: ನಗರದಲ್ಲಿ ಬಡ್ಡಿ ವ್ಯವಹಾರ ಮೀತಿ ಮೀರಿದ್ದು, ಖಾಸಗಿ ಫೈನಾನ್ಸ್​ಗಳಿಂದ ಸಾಲಗಾರರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಖಾಸಗಿ ಫೈನಾನ್ಸ್ ವೊಂದು ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿರಿಸಿದೆ.

ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಶಿವಶಂಕರ್ ಫೈನಾನ್ಸ್ ನಿಂದ ಸಾಲಗಾರರ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ. ಶಿವಶಂಕರ್ ಫೈನಾನ್ಸ್‌ನಲ್ಲಿ ಮಹ್ಮದ್ ಮೂರು ಲಕ್ಷ ಸಾಲ ಪಡೆದಿದ್ದರು. ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿ ಕಟ್ಟಿದ್ದರು. ಹೀಗಿದ್ದರೂ ಫೈನಾನ್ಸ್‌ನಿಂದ ಹೆಚ್ಚಿನ ಬಡ್ಡಿ ನೀಡಲು ಒತ್ತಾಯ ಮಾಡಿತ್ತು. ಇದಕ್ಕೆ ಮಹ್ಮದ್ ಒಪ್ಪಿರಲಿಲ್ಲ. ಇದನ್ನೂ ಓದಿ:ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ ಯತ್ನ- ಯುವಕನಿಂದ ರಕ್ಷಣೆ

yadagiri finance

ಹೀಗಾಗಿ ಆತನ ಹೆಂಡತಿ ರಿಜ್ವಾನರನ್ನು ಆಫೀಸ್​ಗೆ ಕರೆದುಕೊಂಡು ಹೋಗಿ ಒತ್ತೆಯಾಳಾಗಿಸಿಕೊಂಡ ಫೈನಾನ್ಸ್ ಮಾಲೀಕರು, ಮೂತ್ರ ವಿಸರ್ಜನೆಗೂ ಬಿಡದೇ  ಚಿತ್ರ ಹಿಂಸೆ ನೀಡಿದ್ದಾರೆ. ಫೈನಾನ್ಸ್ ನಡೆಸುವ ಶಿವಶಂಕರ್, ಚಂದ್ರಕಲಾ, ಶಿವಮ್ಮ, ಪಾರ್ವತಿ ಎಂಬವರಿಂದ ಈ ಕೃತ್ಯ ನಡೆದಿದೆ. ಇನ್ನೂ ಫೈನಾನ್ಸ್‌ನವರ ಕಿರುಕುಳವನ್ನು ರಿಜ್ವಾನ್‍ರವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾರೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್

Source: publictv.in Source link