ಕೊರೊನಾದ ಹೊಸ ರೂಪಾಂತರಿ ತಂದಿಟ್ಟ ಆತಂಕ; C.1.2 ಎಷ್ಟು ಘಾತಕ ಗೊತ್ತಾ?

ಕೊರೊನಾದ ಹೊಸ ರೂಪಾಂತರಿ ತಂದಿಟ್ಟ ಆತಂಕ; C.1.2 ಎಷ್ಟು ಘಾತಕ ಗೊತ್ತಾ?

ಕೊರೊನಾ ವೈರಸ್​ನ ಹೊಸ ವೇರಿಯಂಟ್ C.1.2 ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಈ ವೇರಿಯಂಟ್ ಹಿಂದಿನೆಲ್ಲ ವೇರಿಯಂಟ್​​ಗಳಿಗಿಂತಲೂ ಡೇಂಜರಸ್ ವೈರಸ್ ಎಂದು ಹೇಳಲಾಗಿದೆ. ಬೇರೆ ವೇರಿಯಂಟ್​ಗಳಿಗೆ ಹೋಲಿಸಿದರೆ ಮನುಷ್ಯರಿಗೆ ಇದರಿಂದ ಸೋಂಕು ಹರಡುವ ಸಾಧ್ಯತೆ ಡಬ್ಬಲ್ ಇದೆಯಂತೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಏರುತ್ತಿದೆ ಸಾವಿನ ಸಂಖ್ಯೆ.. ಕೊರೊನಾ ಹೊಡೆತಕ್ಕೆ ನಲುಗಿದ ದೊಡ್ಡಣ್ಣ

ಹೊಸ ವೇರಿಯಂಟ್​ ಕುರಿತು ದಕ್ಷಿಣ ಆಫ್ರಿಕಾ ನ್ಯಾಷನಲ್ ಇನ್​ಸ್ಟಿಟ್ಯೂಟ್ ಫಾರ್ ಕಮ್ಯುನಿಕೆಬಲ್ ಡಿಸೀಸಸ್ ಸಂಶೋಧನೆ ನಡೆಸಿದ್ದು ಈ ಮ್ಯೂಟೇಷನ್ ಹಿಂದಿನ ರೂಪಾಂತರಿಗಿಂತ 1.7 ನಿಂದ 1.8 ಪಟ್ಟು ವೇಗವಾಗಿ ಹರಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಸೆ.6 ರಿಂದ 6, 7 ಮತ್ತು 8ನೇ ತರಗತಿ ಶಾಲೆ ಆರಂಭ -ಸಚಿವ ಆರ್.ಅಶೋಕ್​

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್ ಇಂಗ್ಲೆಂಡ್, ಚೀನಾ ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ಕೊಂಗೊ, ಮಾರಿಷಿಯಸ್ ನ್ಯೂಜಿಲೆಂಡ್, ಪೋರ್ಚುಗಲ್ ಹಾಗೂ ಸ್ವಿಟ್ಜರ್ಲೆಂಡ್​ನಲ್ಲೂ ಪತ್ತೆಯಾಗಿದೆಯಂತೆ. C.1.2 ಜೀನೋಮ್​ಗಳು ಅತಿವೇಗವಾಗಿ ಮತ್ತು ಸುದೀರ್ಘವಾಗಿ ಹೆಚ್ಚಳವಾಗುತ್ತಿದ್ದು ಮೇ ತಿಂಗಳು 0.2 ಪರ್ಸೆಂಟ್ ಇದ್ದ ಸೀಕ್ಷೆನ್ಸ್ ಜೂನ್​ನಲ್ಲಿ 1.6 ಪರ್ಸೆಂಟ್​ಗೆ ಹಾಗೂ ಜುಲೈ ತಿಂಗಳಲ್ಲಿ 2 ಪರ್ಸೆಂಟ್​ಗೆ ಏರಿಕೆಯಾಗಿದೆಯಂತೆ.

Source: newsfirstlive.com Source link