ಕೇರಳದ 32 ಮಂದಿಗೆ ಸೋಂಕು, ಕೋಲಾರದ ನರ್ಸಿಂಗ್ ಕಾಲೇಜು ವಿರುದ್ಧ ಕಠಿಣ ಕ್ರಮ: ಸುಧಾಕರ್

ಚಿಕ್ಕಬಳ್ಳಾಪುರ: ಕೋಲಾರದ ನರ್ಸಿಂಗ್ ಕಾಲೇಜು ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆಯನ್ನು ನೀಡಿದ್ದಾರೆ.

ಕೋಲಾರ ಜಿಲ್ಲೆ ಕೆಜಿಎಫ್‍ನ ನರ್ಸಿಂಗ್ ಕಾಲೇಜಿನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿರೋದಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಗರಂ ಆಗಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ತಾಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಜಿಎಫ್‍ನ ನರ್ಸಿಂಗ್ ಕಾಲೇಜಿನಲ್ಲಿ ಒಂದೇ ದಿನ ಕೇರಳ ಮೂಲದ 32 ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ನಾನು ನಾಳೆ ಆ ಕಾಲೇಜಿಗೆ ಭೇಟಿ ಮಾಡುತ್ತಿದ್ದೇನೆ. ಆ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.ಇದನ್ನೂ ಓದಿ:ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದರೆ ಚುನಾವಣೆ ಬಹಿಷ್ಕಾರ: ಶ್ರೀರಾಮ ಸೇನೆ

ಕೇರಳದಿಂದ ಬರುವವರೆಗೆ ಆರ್ಟಿಪಿಸಿಆರ್ ನೆಗಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಆದರೆ ಆ ಕಾಲೇಜಿನವರು ಆರ್ಟಿಪಿಸಿಆರ್ ನೆಗಟಿವ್ ರಿಪೋರ್ಟ್ ಇಲ್ಲದೆ ಹೇಗೆ ಕೇರಳದಿಂದ ವಿದ್ಯಾರ್ಥಿಗಳು ಬಂದ್ರು? ನೆಗೆಟಿವ್ ವರದಿ ಪರಿಶೀಲಿಸಿ ಕಾಲೇಜಿಗೆ ಕರೆದುಕೊಳ್ಳಬೇಕಾಗಿತ್ತು. ಅದು ಕಾಲೇಜಿನವರ ಜವಾಬ್ದಾರಿ ಕೇರಳದಲ್ಲಿ ಪ್ರತಿನಿತ್ಯ 30,000ಕ್ಕೂ ಹೆಚ್ಚು ಕೇಸ್ ಆಗ್ತಿವೆ. ರಾಜ್ಯದಲ್ಲಿ 50,000 ಇದ್ದಂತಹ ಕೇಸ್‍ಗಳ ಸಂಖ್ಯೆಯನ್ನು ನಾವು 700-800ಕ್ಕೆ ತಂದಿದ್ದೀವಿ. ಹೀಗೆ ತರೋದು ಎಷ್ಟು ಕಷ್ಟ ಎಂದು ಗೊತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಎಷ್ಟು ಗಟ್ಟಿಯಾಗಿ ಕೆಲಸ ಮಾಡ್ತಿದೆ. ನಮಗೆ ಸಹಕಾರ ಎಲ್ಲ ಕಡೆಯಿಂದ ಸಿಗಬೇಕು. ಹಬ್ಬಗಳು, ಕಾರ್ಯಕ್ರಮಗಳನ್ನು ನಾವು ಮಾಡಬೇಕು ಎಂದು ಇದ್ದೀವಿ. ಆದರೆ ಕೆಲ ತಿಂಗಳುಗಳ ಕಾಲ ಎರಡು ಡೋಸ್ ಪಡೆಯುವವರಿಗೆ ಮುನ್ನೆಚ್ಚರಿಕೆಯಲ್ಲಿ ಇರೋದು ಅವಶ್ಯ. ನಾನು ಈಗಾಗಲೇ ಸಾರ್ವಜನಿಕ ಗಣೇಶೋತ್ಸವ ಆಚರಣೆ ಸಂಬಂಧ ಆರೋಗ್ಯ ಇಲಾಖೆ ತಾಂತ್ರಿಕ ಸಲಹಾ ಸಮಿತಿಯಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಸಿಎಂಗೆ ಮುಕ್ತವಾಗಿ ತಿಳಿಸಿದ್ದೇನೆ. ಈ ವಿಚಾರದಲ್ಲಿ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ನಂದಿಬೆಟ್ಟದಿಂದ ಮರಳುತ್ತಿದ್ದಾಗ ಯುವಕ, ಯುವತಿಯನ್ನು ಅಡ್ಡಗಟ್ಟಿ ಸುಲಿಗೆ

ಕೇರಳದಿಂದ ಬರುವವರಿಗೆ ಮಾರ್ಗಸೂಚಿಗಳ ಪರಿಷ್ಕರಣೆ ಮಾಡಿ ಹೊಸ ಮಾರ್ಗ ಸೂಚಿಯನ್ನು ಇಂದು ಹೊರಡಿಸಲಾಗುವುದು. ಈಗಿರುವ ಮಾರ್ಗಸೂಚಿಗಳಲ್ಲಿ ಕೆಲ ಗೊಂದಲಗಳಿವೆ. ಈಗಾಗಲೇ ವಿಮಾನ ಹಾಗೂ ರೈಲುಗಳ ಮೂಲಕ ಆಗಮಿಸುವವರೆಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಿದ್ದೇವೆ. ಆದ್ರೆ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರದ ಕೆಲ ಭಾಗಗಳಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವ್ಯಾಪಾರ ವಹಿವಾಟಿಗೆ ಕೇರಳದಿಂದ ಜನರು ಬರುತ್ತಾರೆ. ಅವರಿಗಾಗಿಯೇ ವಿಶೇಷ ಪ್ರತ್ಯೇಕ ಮಾರ್ಗಸೂಚಿ ಅವಶ್ಯಕತೆ ಇದೆ ಎಂದರು.ಇದನ್ನೂ ಓದಿ:ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ: ಗೋವಿಂದ ಕಾರಜೋಳ

blank

Source: publictv.in Source link