ಧೋನಿ, ರೈನಾ ನಡುವೆ ಫೈಟ್..! CSK ನಾಯಕನನ್ನ ಸ್ವಿಮ್ಮಿಂಗ್​​ ಪೂಲ್​​ಗೆ ತಳ್ಳಿದ ರೈನಾ

ಧೋನಿ, ರೈನಾ ನಡುವೆ ಫೈಟ್..! CSK ನಾಯಕನನ್ನ ಸ್ವಿಮ್ಮಿಂಗ್​​ ಪೂಲ್​​ಗೆ ತಳ್ಳಿದ ರೈನಾ

2ನೇ ಹಂತದ ಐಪಿಎಲ್ ಟೂರ್ನಿಗಾಗಿ ಭರ್ಜರಿ ತಯಾರಿ ನಡೆಸ್ತಿರುವ ಚೆನ್ನೈ ಸೂಪರ್ ಕಿಂಗ್ಸ್, ತನ್ನ ಕ್ಯಾಂಪ್​​ನಲ್ಲಿ ಅಷ್ಟೇ ಮೋಜು ಮಸ್ತಿಯಲ್ಲಿ ತೊಡಗಿದೆ. ಇದರಲ್ಲಿ​ ನಾಯಕ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಹೊರತಾಗಿಲ್ಲ.! ಸದ್ಯ ಈ ಇಬ್ಬರು ಮಾಡಿರುವ ವಿಡಿಯೋವೊಂದನ್ನ ಸುರೇಶ್​ ರೈನಾ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ WWE ಸೂಪರ್ ಸ್ಟಾರ್​ ಜಾನ್ ಸಿನಾರ ಸಿಗ್ನೇಚರ್ ಮೂವ್​​​​ ಅನ್ನ​, ಮರುಸೃಷ್ಟಿಸಿದ್ದಾರೆ.

ಜಾನ್ ಸಿನಾ ಪಾತ್ರವನ್ನ ಸುರೇಶ್​ ರೈನಾ ನಿರ್ವಹಿಸಿದ್ದು, ಧೋನಿಯನ್ನ ಸಿಮ್ಮಿಂಗ್ ಫೂಲ್​ನಲ್ಲಿ ತಳ್ಳಿದ್ದಾರೆ. ಇದಕ್ಕೆ ರೈನಾ, ಅದರ ಹೆಸರು ಜಾನ್ ಸಿನಾ, ನನ್ನ ಹೆಸರು ಸುರೇಶ್​ ರೈನಾ ಎಂದು ಕ್ಯಾಪ್ಶನ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು, ಸಾಕಷ್ಟ ಲೈಕ್ಸ್​, ಶೇರ್ಸ್ ಪಡೆದುಕೊಂಡಿದೆ.

 

Source: newsfirstlive.com Source link