ಗವಾಸ್ಕರ್, ವೆಂಗ್​ಸರ್ಕರ್​, ರೋಹಿತ್​ ಶರ್ಮಾ ಕ್ರಿಕೆಟ್ ಕೋಚ್, ವಾಸು ಪರಂಜಪೆ ನಿಧನ

ಗವಾಸ್ಕರ್, ವೆಂಗ್​ಸರ್ಕರ್​, ರೋಹಿತ್​ ಶರ್ಮಾ ಕ್ರಿಕೆಟ್ ಕೋಚ್, ವಾಸು ಪರಂಜಪೆ ನಿಧನ

ಖ್ಯಾತ ಕೋಚ್ ವಾಸುದೇವ್ ಪರಂಜಪೆ ವಿಧಿವಶರಾಗಿದ್ದಾರೆ. 82 ವರ್ಷದ ವಾಸು ಪರಂಜಪೆ ನಿಧನಕ್ಕೆ ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ, ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಕೋಚ್‌, ಅಯ್ಕೆಗಾರ, ಸಲಹೆಗಾರ ಸೇರಿದಂತೆ ವಿವಿಧ ಹುದ್ದೆಗಳನ್ನ ನಿಭಾಯಿಸಿರುವ ವಾಸುದೇವ್ ಪರಂಜಪೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯಧ್ಯಕ್ಷ ಜೈ ಶಾ ವಿಷಾದ ವ್ಯಕ್ತಪಡಿಸಿದ್ದಾರೆ. 29 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ವಾಸುದೇವ್, 785 ರನ್​ ದಾಖಲಿಸಿದ್ದಾರೆ. ಕ್ರಿಕೆಟ್​ನಲ್ಲಿ ಯಶಸ್ಸು ಕಾಣದಿದ್ದರೂ, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ಸಂಜಯ್ ಮಾಂಜ್ರೆಕರ್ ರಂತಹ ದಿಗ್ಗಜ ಕ್ರಿಕೆಟಿಗರ ಭವಿಷ್ಯ ರೂಪಿಸುವಲ್ಲಿ ವಾಸು ಪರಂಜಪೆ ಮಹತ್ವದ ಪಾತ್ರವಹಿಸಿದ್ದಾರೆ.

Source: newsfirstlive.com Source link