ಟೋಕಿಯೋ ಪ್ಯಾರಾಲಿಂಪಿಕ್ಸ್​- 10 ಮೀಟರ್ ಏರ್ ಪಿಸ್ತೂಲ್​​ನಲ್ಲಿ ಭಾರತಕ್ಕೆ ಕಂಚಿನ ಪದಕ

ಟೋಕಿಯೋ ಪ್ಯಾರಾಲಿಂಪಿಕ್ಸ್​- 10 ಮೀಟರ್ ಏರ್ ಪಿಸ್ತೂಲ್​​ನಲ್ಲಿ ಭಾರತಕ್ಕೆ ಕಂಚಿನ ಪದಕ

ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಎರಡು ಚಿನ್ನ ಸೇರಿ ಒಟ್ಟು 7 ಪದಕಗಳನ್ನ ಮುಡಿಗೇರಿಸಿಕೊಂಡಿದ್ದ ಭಾರತಕ್ಕೆ, ಇದೀಗ ಮತ್ತೊಂದು ಪದಕ ಸೇರಿದೆ. ಪುರುಷರ 10 ಮೀಟರ್ ಏರ್ ಪಿಸ್ತೂಲ್‌ ಎಸ್​ಹೆಚ್ -​1 ಸ್ಪರ್ಧೆಯಲ್ಲಿ ಸಿಂಗ್​ರಾಜ್​ ಅದಾನ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇಂದು ನಡೆದ ಫೈನಲ್​ ಪಂದ್ಯದಲ್ಲಿ ಸ್ಫರ್ಧಿಗಳೊಂದಿಗೆ ನೇರಾ ನೇರಾ ಪೈಪೋಟಿ ನಡೆಯಿತು. ಆದರೆ ಅಂತಿಮವಾಗಿ 216.8 ಅಂಕ ಗಳಿಸಿದ ಸಿಂಗ್​ರಾಜ್​​ 3ನೇ ಸ್ಥಾನ ಪಡೆದುಕೊಂಡಿದ್ದಲ್ಲದೆ, ಕಂಚಿನ ಪದಕ ಗೆದ್ದರು.

ಚೀನಾದ ಸಿ ಯಾಂಗ್​, ಎಕ್ಸ್​ ಹೌನಾಗ್​ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು. ಇನ್ನು ಭಾರತವನ್ನ ಪ್ರತಿನಿಧಿಸಿದ್ದ ಮತ್ತೋರ್ವ ಆಟಗಾರ ಎಂ.ಮನೀಶ್, 135.8 ಅಂಕ ಸಂಪಾದಿಸಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಕ್ವಾಲಿಫೈಯರ್​​ ರೌಂಡ್​​ನಲ್ಲಿ ಸಿಂಗ್​ರಾಜ್​​ 6ನೇ ಸ್ಥಾನ ಪಡೆದಿದ್ರು. ಆದರೆ ಫೈನಲ್​​ನಲ್ಲಿ ಮೊದಲ ಸುತ್ತಿನಲ್ಲೇ ಉತ್ತಮ ಪ್ರದರ್ಶನ ತೋರುವ ಮೂಲಕ, ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದ್ರು. ಆದರೆ ಆ ಬಳಿಕ ಮೂರನೇ ಸ್ಥಾನಕ್ಕೆ ಆಟ ಅಂತ್ಯವಾಯ್ತು. ಈ ಪದಕದ ಮೂಲಕ ಭಾರತಕ್ಕೆ 8ನೇ ಪದಕ ದಕ್ಕಿದಂತಾಗಿದೆ.

Source: newsfirstlive.com Source link