ಇಂಗ್ಲೆಂಡ್​​ ಸರಣಿಯಲ್ಲಿ ಭಾರತದ ಬ್ಯಾಟಿಂಗ್​ ವೈಫಲ್ಯ -ಮದ್ದಾಗ್ತಾರಾ ಹನುಮ ವಿಹಾರಿ?

ಇಂಗ್ಲೆಂಡ್​​ ಸರಣಿಯಲ್ಲಿ ಭಾರತದ ಬ್ಯಾಟಿಂಗ್​ ವೈಫಲ್ಯ -ಮದ್ದಾಗ್ತಾರಾ ಹನುಮ ವಿಹಾರಿ?

ಲೀಡ್ಸ್​​ನಲ್ಲಿ ನಡೆದ 3ನೇ ಟೆಸ್ಟ್​ ಪಂದ್ಯದ ಸೋಲಿಗೆ, ತಂಡದ ದಿಢೀರ್​​ ಕುಸಿತ ಕಾರಣ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆದ್ರೆ ಈ ಒಬ್ಬ ಆಟಗಾರರ ಇದ್ದಿದ್ರೆ, ಟೀಮ್​ ಇಂಡಿಯಾ ಅಷ್ಟು ಹೀನಾಯ ಮೊತ್ತಕ್ಕೆ ಆಲೌಟ್​ ಆಗ್ತಿರಲಿಲ್ಲ. ಈ ಹಿಂದೆಯೂ ಆ ಆಟಗಾರ ಅದನ್ನ ಸಾಬೀತು ಪಡಿಸಿದ್ದಾನೆ ಕೂಡ. ಯಾರು ಆ ದಿಢೀರ್​ ಕುಸಿತಕ್ಕಿರೋ ಮದ್ದು..? ಈ ಸ್ಟೋರಿ ಓದಿ..

ಇಂಗ್ಲೆಂಡ್​​ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಹೀನಾಯ ಸೋಲುಂಡು, 3 ದಿನಗಳೇ ಉರುಳಿವೆ. ಟೀಮ್​ ಇಂಡಿಯಾ ಆಟಗಾರರು ಮುಂದಿನ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಆದ್ರೆ ಸೋಲಿನ ಬಗೆಗಿನ ಚರ್ಚೆಗಳು ಮಾತ್ರ ನಿಂತಿಲ್ಲ. ಹೀನಾಯ ಮುಖಭಂಗದ ಬಗೆಗಿನ ವಿಮರ್ಶೆ ನಡೆಯುತ್ತಲೇ ಇದೆ. ದಿಢೀರ್​ ಕುಸಿತವೇ ಇದಕ್ಕೆ ಕಾರಣ ಅನ್ನೋದು, ಎಲ್ಲೆಡೆ ಕೇಳಿ ಬರ್ತಿರೋ ಮಾತಾಗಿದೆ.

blank

ಅದು ಸತ್ಯ ಕೂಡ. 2ನೇ ಇನ್ನಿಂಗ್ಸ್​ನಲ್ಲಿ ಕೆಲ ಕಾಲ ಹೋರಾಡಿದ ಟೀಮ್​ ಇಂಡಿಯಾ, ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 78 ರನ್​ಗಳಿಗೆ ಆಲೌಟ್​ ಆಗಿತ್ತು. ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್​ ಸೇರ್ತಾ ಇದ್ರೂ, ಯಾವೊಬ್ಬ ಆಟಗಾರ ಕೂಡ ತಾಳ್ಮೆಯ, ಎಚ್ಚರಿಕೆಯ ಆಟಕ್ಕೆ ಮುಂದಾಗಲೇ ಇಲ್ಲ. 2ನೇ ಇನ್ನಿಂಗ್ಸ್​​ನ 4ನೇ ದಿನದಾಟದಲ್ಲಿ ಒಂದೇ ಸೆಷನ್​ನಲ್ಲಿ 8 ವಿಕೆಟ್​​ಗಳ ಪತನವಾಗಿದ್ವು ಇದಕ್ಕೆ ಉದಾಹರಣೆಯಾಯೇ.

ಭಾರತದ ದಿಢೀರ್​ ಕುಸಿತಕ್ಕೆ ಹನುಮ ವಿಹಾರಿ ಮದ್ದು!
ನಿಮಗೆ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್​​ ಪಂದ್ಯ ನೆನಪಿರಬಹದು. ಪಂದ್ಯದ 2ನೇ ಇನ್ನಿಂಗ್ಸ್​​ನಲ್ಲಿ ಬರೋಬ್ಬರಿ 407 ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಭಾರತ, 272 ರನ್​ಗಳಿಗೆ ಪ್ರಮುಖ 5 ವಿಕೆಟ್​​ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದ್ರೆ ಆಗ ಕಣಕ್ಕಿಳಿದ ಹನುಮ ವಿಹಾರಿ, ಟೀಮ್​ ಇಂಡಿಯಾವನ್ನ ಸೋಲಿನ ದವಡೆಯಿಂದ ಪಾರು ಮಾಡಿದ್ರು. ಅಸಾಧ್ಯ ನೋವಿನೊಂದಿಗೆ ತಾಳ್ಮೆಯ ಬ್ಯಾಟಿಂಗ್​ ನಡೆಸಿದ್ದ ವಿಹಾರಿ, ಬರೋಬ್ಬರಿ 161 ಎಸೆತಗಳನ್ನೆದುರಿಸಿ ವಿರೋಚಿತ ಡ್ರಾಗೆ ಕಾರಣವಾಗಿದ್ರು. ಹೀಗಾಗಿಯೇ ಲೀಡ್ಸ್​​ ಟೆಸ್ಟ್​ನಲ್ಲೂ ವಿಹಾರಿ ಇದ್ದಿದ್ರೆ, ಭಾರತ ಹೀನಾಯ ಸೋಲಿಗೆ ಗುರಿಯಾಗ್ತಿರಲಿಲ್ಲ ಅನ್ನೋ ಮಾತು ಕೇಳಿ ಬರ್ತಿರೋದು.

blank

ಇಂಗ್ಲೆಂಡ್​​ ಸರಣಿಯ 3ನೇ ಪಂದ್ಯ ಮಾತ್ರವಲ್ಲ, ಮೊದಲ ಹಾಗೂ 2ನೇ ಟೆಸ್ಟ್​ ಪಂದ್ಯದಲ್ಲೂ ಭಾರತದ ದಿಢೀರ್​ ಕುಸಿತದ ಸಮಸ್ಯೆ ಎದುರಿಸಿದೆ. ಅದರಲ್ಲೂ ಲೋವರ್​​ ಡೌನ್ ದಿ ಆರ್ಡರ್​ ವಿಭಾಗವಂತೂ, ಕಳಪೆ ಪ್ರದರ್ಶನ ನೀಡಿದೆ. ಇದೀಗ 4ನೇ ಟೆಸ್ಟ್​ ಮುನ್ನ ಟೀಮ್​ ಇಂಡಿಯಾ ಪ್ಲೇಯಿಂಗ್ ಇಲೆವೆನ್​​ನಲ್ಲಿ ಬದಲಾವಣೆಯಾಗೋ ಸಾಧ್ಯತೆ ದಟ್ಟವಾಗಿದೆ. ಈಗಾಲಾದ್ರೂ ಹನುಮ ವಿಹಾರಿಗೆ ಅವಕಾಶ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

Source: newsfirstlive.com Source link