ಅಫ್ಘಾನ್ ಚಾಲೆಂಜ್​ ಎದುರಿಸಲು ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಟೀಂ; ಇದ್ರಲ್ಲಿ ಯಾರಿದ್ದಾರೆ ಗೊತ್ತಾ?

ಅಫ್ಘಾನ್ ಚಾಲೆಂಜ್​ ಎದುರಿಸಲು ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಟೀಂ; ಇದ್ರಲ್ಲಿ ಯಾರಿದ್ದಾರೆ ಗೊತ್ತಾ?

ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ತನ್ನ ದೇಶಕ್ಕೆ ವಾಪಸ್ಸಾದ ಬೆನ್ನಲ್ಲೇ ಇದೀಗ ಕಾಬೂಲ್ ಏರ್​ಪೋರ್ಟ್​ ತಾಲಿಬಾನಿಗಳ ವಶವಾಗಿದೆ. ಇದೀಗ ಕಾಬೂಲ್​ನಿಂದ ತಮ್ಮ ದೇಶದವರನ್ನು ವಾಪಸ್ ಕರೆಸಿಕೊಳ್ಳುವುದು ಇತರೆ ದೇಶಗಳಿಗೆ ಮತ್ತಷ್ಟು ಸವಾಲಾಗಿದೆ. ಕಾಬೂಲ್​ನಲ್ಲಿ ತಾಯ್ನೆಲಕ್ಕೆ ವಾಪಸ್ಸಾಗಬೇಕಾದ ಇನ್ನೂ ಸಾಕಷ್ಟು ಭಾರತೀಯರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಭಾರತಕ್ಕೂ ಸಹ ಭಾರತೀಯರನ್ನು ವಾಪಸ್ ಕರೆತರುವುದು ಈಗ ಚಾಲೆಂಜಿಂಗ್ ವಿಚಾರ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು ವಿದೇಶಾಂಗ ಸಚಿವಾಲಯ, ರಾಷ್ಟ್ರೀಯ ಭದ್ರತಾ ಏಜೆನ್ಸಿ ಮತ್ತು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಟೀಂ ಒಂದನ್ನು ರಚಿಸಲು ನಿರ್ದೇಶಿಸಿದ್ದಾರೆ.

ಅಫ್ಘನ್ ಟೀಂ ಕಾರ್ಯವೇನು?

  • ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬೆನ್ನಲ್ಲೇ ಮಹತ್ವದ ಹೆಜ್ಜೆ
  • ಅಫ್ಘಾನ ಚಾಲೆಂಜ್ ಎದುರಿಸಲು ಪ್ರಧಾನಿ ಮೋದಿ ಟೀಂ ರೆಡಿ
  • ವಿದೇಶಾಂಗ ಸಚಿವ ಜೈಶಂಕರ್, ಎನ್​ಎಸ್ಎ ಅಜಿತ್ ದೋವಲ್
  • ಅತ್ಯುನ್ನತ ಅಧಿಕಾರಿಗಳನ್ನೊಳಗೊಂಡ ಮಹತ್ವದ ಕಮಿಟಿ
  • ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ ಭೇಟಿ ಆಗ್ತಿರೋ ನೂತನ ಕಮಿಟಿ
  • ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ,
  • ಅಲ್ಲಿನ ಅಲ್ಪ ಸಂಖ್ಯಾತರ ರಕ್ಷಣೆ ಮತ್ತು ಭಾರತಕ್ಕೆ ಕರೆತರುವುದು
  • ಅಫ್ಘನ್ ನೆಲ ಭಾರತ ವಿರೋಧಿ ಚಟುವಟಿಕೆಗೆ ಬಳಕೆಯಾಗುತ್ತಾ?
  • ಬಳಕೆಯಾಗದಂತೆ ತಡೆಯೋದರ ನಿಟ್ಟಿನಲ್ಲೂ ಕಮಿಟಿ ಚರ್ಚೆ
  • ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೋ ಆರ್ಡಿನೇಷನ್

ಹೌದು.. ಈ ಟೀಂ ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸುರಕ್ಷಿವಾಗಿ ಕರೆತರುವುದರತ್ತ ಗಮನ ಹರಿಸಲಿದೆ. ಕಳೆದ ಕೆಲವು ದಿನಗಳಿಂದಲೂ ಈ ಟೀಂ ಪರಸ್ಪರ ಭೇಟಿಯಾಗುತ್ತಿದ್ದು ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಸುರಕ್ಷಿತವಾಗಿ ಅಲ್ಪ ಸಂಖ್ಯಾತರನ್ನು ಕರೆತರುವುದು.. ಮತ್ತು ಆಫ್ಘನ್ ಗಡಿ ಪ್ರದೇಶವನ್ನು ಭಾರತದ ವಿರುದ್ಧ ಭಯೋತ್ಪಾದಕತೆಗೆ ಬಳಸದಂತೆ ಎಚ್ಚರವಹಿಸುತ್ತಿದೆ. ಅಲ್ಲದೇ ಈ ಟೀಂ ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಯನ್ನು, ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಪ್ರತಿಕ್ರಿಯೆ ಹಾಗೂ ಇಂದು ಬೆಳಗ್ಗೆ ಯುಎನ್​ ಸೆಕ್ಯುರಿಟಿ ಕೌನ್ಸಿಲ್ ತೆಗೆದುಕೊಂಡಿರುವ ಪ್ರತಿಜ್ಞೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸುತ್ತಿದೆ.

Source: newsfirstlive.com Source link