ಹ್ಯಾಪಿ ಬರ್ತ್​​ಡೇ ಜಾವಗಲ್ ಶ್ರೀನಾಥ್- ಮಾಜಿ ವೇಗಿಗೆ 52ರ ಹುಟ್ಟು ಹಬ್ಬದ ಸಂಭ್ರಮ

ಹ್ಯಾಪಿ ಬರ್ತ್​​ಡೇ ಜಾವಗಲ್ ಶ್ರೀನಾಥ್- ಮಾಜಿ ವೇಗಿಗೆ 52ರ ಹುಟ್ಟು ಹಬ್ಬದ ಸಂಭ್ರಮ

ಮೈಸೂರ್ ಎಕ್ಸ್‌ಪ್ರೆಸ್ ಎಂದು ಖ್ಯಾತಿ ಪಡೆದಿರುವ ಟೀಮ್​ ಇಂಡಿಯಾ ಮಾಜಿ ವೇಗಿ ಜಾವಗಲ್​ ಶ್ರೀನಾಥ್,​ ಇಂದು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಿಸಿಸಿಐ, ಐಸಿಸಿ, ಐಪಿಎಲ್​ ಫ್ರಾಂಚೈಸಿಗಳು ಮತ್ತು ಮಾಜಿ, ಹಾಲಿ ಕ್ರಿಕೆಟಿಗರು, ಶ್ರೀನಾಥ್​ ಜನ್ಮದಿನಕ್ಕೆ ಶುಭ ಕೋರಿದ್ದಾರೆ. ಪ್ರಸ್ತುತ ಮ್ಯಾಚ್​ ರೆಫ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಾಥ್​, ಭಾರತ ಕಂಡ ಅತ್ಯಂತ ಪ್ರತಿಭಾನ್ವಿತ ವೇಗಿಗಳಲ್ಲಿ ಅಗ್ರಗಣ್ಯರಾಗಿದ್ರು. ಜಾವಗಲ್​ ಶ್ರೀನಾಥ್​ ತಂಡಕ್ಕೆ ಕಾಲಿಡುವುದಕ್ಕೂ ಮುನ್ನ ಟೀಮ್​ ಇಂಡಿಯಾ, ಸ್ಪಿನ್‌ ಬೌಲರ್‌ಗಳನ್ನೇ ನೆಚ್ಚಿಕೊಂಡಿತ್ತು.

ಆ ಬಳಿಕ ಟೀಮ್​ ಇಂಡಿಯಾಕ್ಕೆ ವೇಗದ ಬೌಲಿಂಗ್‌ ಮೂಲಕ ದೊಡ್ಡ ಅಸ್ತ್ರವಾಗಿ ಪರಿಣಮಿಸಿದ್ರು, ಈ ಕನ್ನಡಿಗ. 1991ರ ಅಕ್ಟೋಬರ್​ 18ರಂದು ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಶ್ರೀನಾಥ್​, 1 ವಿಕೆಟ್​ ಕಬಳಿಸಿ ಮಿಂಚಿದ್ರು. ಇದಾದ ಒಂದು ತಿಂಗಳ ಅಂತರದಲ್ಲೇ ಅಂದರೆ 1991 ನವೆಂಬರ್ 29ರಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​​ಗೆ ಕಾಲಿಟ್ರು. ಒಟ್ಟು 67 ಟೆಸ್ಟ್​ ಪಂದ್ಯಗಳನ್ನಾಡಿರುವ ಶ್ರೀನಾಥ್​, 236 ವಿಕೆಟ್​, 229 ಏಕದಿನ ಪಂದ್ಯಗಳಲ್ಲಿ 315 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.

 

Source: newsfirstlive.com Source link