’90 ಕೆ.ಜಿ. ಇದ್ದ ತೂಕ ಈಗ 87 ಕ್ಕೆ ಇಳಿದಿದೆ’-ಪ್ರಕೃತಿ ಚಿಕಿತ್ಸೆ ಮುಗಿಸಿ ಬಂದ ಸಿದ್ದರಾಮಯ್ಯ

’90 ಕೆ.ಜಿ. ಇದ್ದ ತೂಕ ಈಗ 87 ಕ್ಕೆ ಇಳಿದಿದೆ’-ಪ್ರಕೃತಿ ಚಿಕಿತ್ಸೆ ಮುಗಿಸಿ ಬಂದ ಸಿದ್ದರಾಮಯ್ಯ

ಬೆಂಗಳೂರು: ನನಗೆ ಕೋವಿಡ್ ಬಂದ ನಂತರ ನನ್ನ ಶುಗರ್ ಲೆವೆಲ್ ಜಾಸ್ತಿ ಆಗಿತ್ತು, ದೇಹದ ತೂಕವೂ ಹೆಚ್ಚಳವಾಗಿತ್ತು ಹೀಗಾಗಿ  ಜಿಂದಾಲ್ ಪ್ರಕೃತಿ ಚಿಕಿತ್ಸೆಯ ಕೇಂದ್ರಕ್ಕೆ ಸೇರಿದ್ದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜಿಂದಾಲ್​ನಲ್ಲಿ ಕಳೆದ 10 ದಿನಗಳಿಂದ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ ಒಳಗಾಗಿದ್ದರು.

ಪ್ರಕೃತಿ ಚಿಕಿತ್ಸೆ ಮುಗಿಸಿ ಜಿಂದಾಲ್​ನಿಂದ ವಾಪಸ್ ಮನೆಗೆ ಹಿಂತಿರುಗಿದ ಸಿದ್ದರಾಮಯ್ಯ ಈಗ ಶುಗರ್ ಲೆವೆಲ್ ನಾರ್ಮಲ್ ಆಗಿದೆ,
ದೇಹದ ತೂಕ 3 ಕೆಜಿ ಕಡಿಮೆ ಆಗಿದೆ. 90 ಕೆಜಿ ಇದ್ದ ದೇಹದ ತೂಕ ಈಗ 87ಕ್ಕೆ ಇಳಿದಿದೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ, ಜಿ.ಟಿ.ಡಿಯವರಿಗೆ ಹಾಗೂ ಅವರ ಪುತ್ರನಿಗೆ ಟಿಕೆಟ್​ ನೀಡುವ ಬಗ್ಗೆ ಮಾತನಾಡಿದ ಅವ್ರು, ಜಿಟಿಡಿ ಈ ಬಗ್ಗೆ ನನ್ನ ಹತ್ತಿರ ಮಾತಾಡಿರುವುದು ಸತ್ಯ. ಅವರಿಗೆ ಅವರ ಮಗನಿಗೆ ಇಬ್ಬರಿಗೂ ಟಿಕೆಟ್ ಕೇಳಿದ್ದಾರೆ. ಆದರೆ ಯಾವ ಕ್ಷೇತ್ರ ಅಂತ ಹೇಳಿಲ್ಲ
ನಾನು ಸುರ್ಜೆವಾಲ ಹತ್ತಿರ ಮಾತನಾಡುತ್ತೇನೆ. ಈ ಬಗ್ಗೆ ಅವರಿಗೆ ಹೇಳಿದ್ದೇ‌ನೆ.. ನನಗೆ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.

Source: newsfirstlive.com Source link