ಅಮೆರಿಕ ಸೇನೆಗೆ ಸಹಾಯ ಮಾಡಿದ್ದಕ್ಕೆ ತಾಲಿಬಾನಿಗಳಿಂದ ಕ್ರೂರ ಶಿಕ್ಷೆ.. ಆಗಸದಲ್ಲೇ ನೇಣಿಗೇರಿಸಿದ ಪಾಪಿಗಳು

ಅಮೆರಿಕ ಸೇನೆಗೆ ಸಹಾಯ ಮಾಡಿದ್ದಕ್ಕೆ ತಾಲಿಬಾನಿಗಳಿಂದ ಕ್ರೂರ ಶಿಕ್ಷೆ.. ಆಗಸದಲ್ಲೇ ನೇಣಿಗೇರಿಸಿದ ಪಾಪಿಗಳು

ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ತಮ್ಮ ಅಟ್ಟಹಾಸ ಮೆರೆಯಲು ಪ್ರಾರಂಭಿಸಿದ್ದಾರೆ. ತಾವು ಬದಲಾಗಿದ್ದೇವೆ.. ಮೊದಲಿನಂತಿಲ್ಲ.. ಜನರ ಹಕ್ಕುಗಳಿಗೆ ಬೆಲೆ ಕೊಡುತ್ತೇವೆ ಎನ್ನುವ ತಾಲಿಬಾನಿಗಳು ನಡೆಸ್ತಿರೋದು ಮಾತ್ರ ಪೈಶಾಚಿಕ ಕೃತ್ಯ.

ಒಂದೆಡೆ ಅಮೆರಿಕಾ ಸೇನೆ ಅಫ್ಘಾನಿಸ್ತಾನದಿಂದ ತನ್ನ ದೇಶಕ್ಕೆ ವಾಪಸ್ಸಾಗಿದ್ರೆ ಇತ್ತ ತಾಲಿಬಾನಿಗಳು ತಮ್ಮ ಕ್ರೌರ್ಯ ಮೆರೆಯಲು ಪ್ರಾರಂಭಿಸಿದ್ದಾರೆ. ಅಮೆರಿಕನ್ ಸೇನೆ ಅಫ್ಘಾನಿಸ್ತಾನದಲ್ಲಿ ನೆರೆಯೂರಿದ್ದಾಗ ಉಗ್ರರನ್ನು ಮಟ್ಟಹಾಕಲು ಸೇನೆಗೆ ಸಹಾಯ ಮಾಡಿದವರನ್ನೆಲ್ಲ ಹುಡುಕಿ ಹುಡುಕಿ ತಾಲಿಬಾನಿಗಳು ಕ್ರೂರವಾಗಿ ಕೊಲೆಗೈಯ್ಯುತ್ತಿದ್ದಾರೆ.

ಇಂದು ಬೆಳಕಿಗೆ ಬಂದಿರುವ ಘಟನೆಯೊಂದರಲ್ಲಿ ತಾಲಿಬಾನಿಗಳು ಆರ್ಮಿಗೆ ಸಹಾಯ ಮಾಡಿದ್ದ ಆಫ್ಘನ್ ಪ್ರಜೆಯೋರ್ವನನ್ನ ಅಮೆರಿಕಾದ ಸೇನೆಗೆ ಸೇರಿದ ಹೆಲಿಕಾಪ್ಟರ್​ಗೆ ಆಗಸದಲ್ಲೇ ನೇಣು ಹಾಕಿ ಊರಿಗೆಲ್ಲ ಮೆರವಣಿಗೆ ಮಾಡಿದ್ದಾರೆ.

ಹೀಗೆ ಅಮಾನವೀಯವಾಗಿ ಹತ್ಯೆಯಾದವನು ಅಮೆರಿಕಾಕ್ಕೆ ಭಾಷಾಂತರಿಯಾಗಿದ್ದ ವ್ಯಕ್ತಿ ಎನ್ನಲಾಗಿದೆ. ಅಮೆರಿಕಾ ಸೇನೆಗೆ ಸಹಾಯ ಮಾಡಿದ ಎಲ್ಲರನ್ನೂ ಹೀಗೆ ಹತ್ಯೆ ಮಾಡುತ್ತಾರಾ ತಾಲಿಬಾನಿಗಳು ಎಂಬ ಆತಂಕ ಇದೀಗ ಸಾವಿರಾರು ಜನರಲ್ಲಿ ಎದುರಾಗಿದೆ. ಇತ್ತ ಅಮೆರಿಕಾ ಸೇನೆ ದೇಶ ತೊರೆಯುವ ಮುನ್ನ ತನಗೆ ಸಹಾಯ ಮಾಡಿದವರ ಪಟ್ಟಿಯನ್ನ ತಾಲಿಬಾನ್​ಗೆ ಕೊಟ್ಟುಹೋಗಿದೆ ಎನ್ನಲಾಗಿದೆ.

Source: newsfirstlive.com Source link