ಸಮನ್ಸ್​ ನೀಡಲು ಹೋದಾಗ ಹೃದಯಾಘಾತ; ಕರ್ತವ್ಯ ನಿರತ ಪೊಲೀಸ್​ ಕಾನ್ಸ್​ಟೇಬಲ್​ ಸಾವು

ಸಮನ್ಸ್​ ನೀಡಲು ಹೋದಾಗ ಹೃದಯಾಘಾತ; ಕರ್ತವ್ಯ ನಿರತ ಪೊಲೀಸ್​ ಕಾನ್ಸ್​ಟೇಬಲ್​ ಸಾವು

ಬಾಗಲಕೋಟೆ: ಕರ್ತವ್ಯನಿರತ ಪೊಲೀಸ್ ಕಾನ್ಸ್​​ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿರೋ ಘಟನೆ, ಜಿಲ್ಲೆಯ ಬದಾಮಿ ತಾಲ್ಲೂಕಿನ ಜಲಗೇರಿ ಗ್ರಾಮದಲ್ಲಿ ನಡೆದಿದೆ.

ಬಸವರಾಜ ತಾರಿವಾಳ ಮೃತ ಕಾನ್ಸ್​ಟೇಬಲ್. ಕೆರೂರು ಪೊಲೀಸ್ ಠಾಣೆ ಕಾನ್ಸ್​ಟೇಬಲ್ ಆಗಿದ್ದ ಇವ್ರು, ಸಮನ್ಸ್ ಜಾರಿ ಮಾಡೋದಕ್ಕೆ ಜಲಗೇರಿ ಗ್ರಾಮಕ್ಕೆ ಹೋಗಿದ್ರು. ಈ ವೇಳೆ, ಹೃದಯಾಘಾತ ಸಂಭವಿಸಿದೆ. ಚಿಕಿತ್ಸೆಗೆಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಕಾನ್ಸ್​ಟೇಬಲ್​ ಮೃತಪಟ್ಟಿದ್ದಾರೆ.

Source: newsfirstlive.com Source link