40 ಅಂತಸ್ತಿನ ಸೂಪರ್‌ಟೆಕ್ ಟ್ವಿನ್​​​​ ಟವರ್​​ ಕೆಡವಲು ಸುಪ್ರೀಂ ಕೋರ್ಟ್​​ ಆದೇಶ

40 ಅಂತಸ್ತಿನ ಸೂಪರ್‌ಟೆಕ್ ಟ್ವಿನ್​​​​ ಟವರ್​​ ಕೆಡವಲು ಸುಪ್ರೀಂ ಕೋರ್ಟ್​​ ಆದೇಶ

ನವದೆಹಲಿ: ಉತ್ತರ ಪ್ರದೇಶ ನೋಯ್ಡಾದಲ್ಲಿರುವ 40 ಅಂತಸ್ತಿನ ಅವಳಿ ಕಟ್ಟಡಗಳನ್ನು ಕೊಡಲು 2014ರಲ್ಲಿ ಅಲಹಾಬಾದ್​​ ಕೋರ್ಟ್​​ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್​​ ಎತ್ತಿ ಹಿಡಿದಿದ್ದು, ಕಟ್ಟಡವನ್ನು ನೆಲಸಮ ಮಾಡಲು ಕೋರ್ಟ್​​ ಆದೇಶ ನೀಡಿದೆ.

ಸೂಪರ್‌ಟೆಕ್ ಹೆಸರಿನ ಕಟ್ಟಡ ನಿರ್ಮಾಣ ಸಂಸ್ಥೆ ನೋಯ್ಡಾ ಬಳಿ ಅವಳಿ ಕಟ್ಟಡವನ್ನು ಗೋಪುರಗಳನ್ನು ನಿರ್ಮಾಣ ಮಾಡಲಾಗಿತ್ತು. ಎರಡು ಕಟ್ಟಡದಲ್ಲಿ 900 ಫ್ಲಾಟ್​ ಇದೆ. ಕಟ್ಟಡ ನಿರ್ಮಾಣದ ವೇಳೆ ಸೂಪರ್ ಟೆಕ್​ ಸಂಸ್ಥೆ ನಿಯಮಗಳನ್ನು ಮೀರಿ ನಿರ್ಮಾಣ ಮಾಡಲಾಗಿದೆ ಎಂದು ಕೋರ್ಟ್​​ ಅಭಿಪ್ರಾಯಪಟ್ಟಿದೆ.

blank

ಸುಪ್ರೀಂ ಕೋರ್ಟ್​​ನ ನ್ಯಾ.ಡಿವೈ ಚಂದ್ರಚೂಡ್​​, ನ್ಯಾ.ಎಂಆರ್​​ ಶಾ ಅವರ ದ್ವಿಸದಸ್ಯ ಪೀಠ ಪ್ರಕರಣ ವಿಚಾರಣೆಯನ್ನು ನಡೆಸಿ ಮಹತ್ವದ ತೀರ್ಪನ್ನು ನೀಡಿದೆ. ಅಲ್ಲದೇ ಕಟ್ಟಡದಲ್ಲಿ ನಿವಾಸಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ ಸಂಸ್ಥೆ 2 ತಿಂಗಳಿನಲ್ಲಿ ಹಣ ವಾಪಸ್​ ನೀಡಲು ಆದೇಶದಲ್ಲಿ ಸೂಚನೆ ನೀಡಿದ್ದು, ಕಟ್ಟಡ ಧ್ವಂಸ ಉರುಳಿಸಿರುವ ವೆಚ್ಚವನ್ನು ಸೂಪರ್​​ಟೆಕ್​ ಸಂಸ್ಥೆಯೇ ಭರಿಸಬೇಕು ಎಂದು ತಿಳಿಸಿದೆ.

ಎರಡು ಕಟ್ಟಡಗಳಲ್ಲಿ 915 ಅಪಾರ್ಟ್​ಮೆಂಟ್​​​ಗಳು ಹಾಗೂ 21 ಅಂಗಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಇವುಗಳಲ್ಲಿ ಆರಂಭದಲ್ಲಿ 633 ಫ್ಲಾಟ್​ಗಳನ್ನು ಗ್ರಾಹಕರು ಖರೀದಿ ಮಾಡಿದ್ರು. ಇನ್ನು ಇದೇ ವೇಳೆ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಲು ಬಿಲ್ಡರ್​ಗಳೊಂದಿಗೆ ಶಾಮೀಲಾಗಿದ್ದ ನೋಯ್ಡಾ ಪ್ರಾಧಿಕಾರವನ್ನು ಸುಪ್ರೀಂ ಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ.

Source: newsfirstlive.com Source link