ಫೋನ್ ಕದ್ದಾಲಿಕೆ ಕೇಸ್​; ಸಿಬಿಐ ಬಿ ರಿಪೋರ್ಟ್​ಗೆ ಭಾಸ್ಕರ್​​ ರಾವ್ ಅಸಮಾಧಾನ

ಫೋನ್ ಕದ್ದಾಲಿಕೆ ಕೇಸ್​; ಸಿಬಿಐ ಬಿ ರಿಪೋರ್ಟ್​ಗೆ ಭಾಸ್ಕರ್​​ ರಾವ್ ಅಸಮಾಧಾನ

ಬೆಂಗಳೂರು: ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಟೆಲಿಫೋನ್ ಕದ್ದಾಲಿಕೆ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಸಿಟಿ ಸಿವಿಲ್ ಕೋರ್ಟ್​ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿತ್ತು. ಇದಕ್ಕೆ ಎಡಿಜಿಪಿ ಭಾಸ್ಕರ್ ರಾವ್ ತೀವ್ರ ಅಸಮಧಾನ ವ್ಯಕ್ತಪಡಿಸಿ, ತಕರಾರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ’90 ಕೆ.ಜಿ. ಇದ್ದ ತೂಕ ಈಗ 87 ಕ್ಕೆ ಇಳಿದಿದೆ’-ಪ್ರಕೃತಿ ಚಿಕಿತ್ಸೆ ಮುಗಿಸಿ ಬಂದ ಸಿದ್ದರಾಮಯ್ಯ

ಕೋರ್ಟ್​ಗೆ ಪ್ರೊಟೆಸ್ಟ್ ಪಿಟಿಷನ್ ಸಲ್ಲಿಕೆ ಮಾಡಿರುವ ಭಾಸ್ಕರ್ ರಾವ್ ಮರು ತನಿಖೆಗೆ ಆದೇಶ ನೀಡುವಂತೆ ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದಾರೆ. ಈ ಕೇಸ್​ ಅನ್ನ ಸಿಬಿಐ ಮತ್ತೊಮ್ಮೆ ತನಿಖೆ ನಡೆಸಬೇಕು ಅಥವಾ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು. ಇಬ್ಬರ ವಿರುದ್ಧ ಸಾಕ್ಷಿಗಳು ಇವೆ, ಆದರೂ ಕೇಸ್ ಮುಚ್ಚಿ ಹಾಕುವ ಯತ್ನ ಆಗುತ್ತಿದೆ ಎಂದು ಭಾಸ್ಕರ್ ರಾವ್ ಕಿಡಿಕಾರಿದ್ದಾರೆ.

ಮಾತ್ರವಲ್ಲ ಭಾಸ್ಕರ್ ರಾವ್ ವಕೀಲರು ಕೂಡ ತಮ್ಮ ಫೋನ್ ಕದ್ದಾಲಿಕೆ ಆಗಿದೆ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ಮರು ತನಿಖೆ ಆಗಬೇಕು ಎಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಇಬ್ಬರು ಐಪಿಎಸ್​ ಅಧಿಕಾರಿಗಳು ಫೈಟ್ ಭಾರೀ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಅಮೆರಿಕ ಸೇನೆಗೆ ಸಹಾಯ ಮಾಡಿದ್ದಕ್ಕೆ ತಾಲಿಬಾನಿಗಳಿಂದ ಕ್ರೂರ ಶಿಕ್ಷೆ.. ಆಗಸದಲ್ಲೇ ನೇಣಿಗೇರಿಸಿದ ಪಾಪಿಗಳು

Source: newsfirstlive.com Source link