ಪಂಜ್​​ಶೀರ್​​ ಮೇಲೆ ದಾಳಿ; 9-10 ತಾಲಿಬಾನ್​​ ಉಗ್ರರನ್ನು ಹತ್ಯೆಗೈದ ವಿರೋಧಿ ಪಡೆ

ಪಂಜ್​​ಶೀರ್​​ ಮೇಲೆ ದಾಳಿ; 9-10 ತಾಲಿಬಾನ್​​ ಉಗ್ರರನ್ನು ಹತ್ಯೆಗೈದ ವಿರೋಧಿ ಪಡೆ

ಕಾಬೂಲ್​​: ಅಮೆರಿಕಾ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನ ತೊರೆದ ಬೆನ್ನಲ್ಲೇ ತಾಲಿಬಾನ್​​​​ ಉಗ್ರರು ಪಂಜ್​​ಶೀರ್​​ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ದಾಳಿಯಲ್ಲಿ ತಾಲಿಬಾನ್​ ವಿರೋಧಿ ಪಡೆ 9-10 ತಾಲಿಬಾನ್​​​ ಉಗ್ರರನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದೆ. ಈ ಕುರಿತು ಖುದ್ದು ಅಫ್ಘಾನ್ ಸೇನೆಯ​​ ಮಾಜಿ ಕಮಾಂಡರ್ ಹಾಗೂ ತಾಲಿಬಾನ್ ವಿರೋಧಿ ಪಡೆಯನ್ನು ಮುನ್ನಡೆಸುತ್ತಿರುವ ಅಹಮದ್​​​​ ಮಸೂದ್​​​​​​ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ರಾತ್ರಿ ತಾಲಿಬಾನ್ ಉಗ್ರರು ಪಂಜ್​ಶೀರ್ ಕಣಿವೆ ಮೇಲೆ ದಾಳಿ ನಡೆಸಿದ್ದರು. ಆದರೆ, ನಾವು ತಾಲಿಬಾನಿಗಳನ್ನು ಒಳಗೆ ಪ್ರವೇಶಿಸದಂತೆ ತಡೆಯುವಲ್ಲಿ ಸಫಲರಾಗಿದ್ದೇವೆ. ನಮ್ಮ ನಿಗ್ರಹ ಪಡೆ ಇದಕ್ಕೆ ಯಾವುದೇ ಅವಕಾಶ ನೀಡಿಲ್ಲ. ತಾಲಿಬಾನ್​​ ಉಗ್ರರು ಹಲವು ಸುತ್ತು ಗುಂಡು ಹಾರಿಸಿದರು. ನಮ್ಮ ಕಡೆಯವರು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ, ತಾಲಿಬಾನ್​​​ ಕಡೆಯ ಕನಿಷ್ಠ ಹತ್ತು ಮಂದಿ ಹತ್ಯೆಗೀಡಾಗಿದ್ದಾರೆ ಎಂದು ಮಸೂದ್​​ ಹೇಳಿದ್ದಾರೆ.

ಬಹುತೇಕ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿರುವ ತಾಲಿಬಾನ್​​ ಪಂಜ್​ಶೀರ್ ಕಣಿವೆ ಸೇರಿದಂತೆ ಇನ್ನೂ ಕೆಲವು ಪ್ರದೇಶಗಳನ್ನು ತನ್ನ ತೆಕ್ಕೆಗೆ ಪಡೆಯಲು ಭಾರೀ ಸರ್ಕಸ್​​ ಮಾಡುತ್ತಿದೆ. ಸೋಮವಾರ ರಾತ್ರಿ ಅಮೆರಿಕಾ ಸೇನೆ ಅಫ್ಘಾನಿಸ್ತಾನ ತೊರೆದದ್ದೇ ತಡ ಪಂಜ್​​ಶೀರ್​​​ ಮೇಲೆ ದಾಳಿ ನಡೆಸಿತು. ಈ ವೇಳೆ ಪಂಜ್​ಶೀರ್​​ ಹುತಾತ್ಮ ಹೋರಾಟಗಾರನ ಮಗ ಅಹಮದ್​​​​ ಮಸೂದ್ ನೇತೃತ್ವದ ತಾಲಿಬಾನ್​​ ವಿರೋಧಿ ಪಡೆ 9-10 ಉಗ್ರರನ್ನು ಹತ್ಯೆಗೈದಿದೆ.

ಇದನ್ನೂ ಓದಿ: ಅಮೆರಿಕ ಸೇನೆಗೆ ಸಹಾಯ ಮಾಡಿದ್ದಕ್ಕೆ ತಾಲಿಬಾನಿಗಳಿಂದ ಕ್ರೂರ ಶಿಕ್ಷೆ.. ಆಗಸದಲ್ಲೇ ನೇಣಿಗೇರಿಸಿದ ಪಾಪಿಗಳು

ಪಂಜ್​ಶೀರ್​​​​ ಕಣಿವೆ ಪ್ರದೇಶವನ್ನು ವಶಕ್ಕೆ ಪಡೆಯಲು ತಾಲಿಬಾನ್​​​​​ ಭಾರೀ ಪ್ರಯತ್ನ ಮಾಡುತ್ತಿದೆ. ತಾಲಿಬಾನ್​​ ಉಗ್ರರಿಂದ ಪಂಜ್​ಶೀರ್​​ ಕಣಿವೆಯನ್ನು ಕಾಪಾಡಲು ಅನೇಕ ಅಫ್ಘಾನ್​​ ಹೋರಾಟಗಾರರು ಅಹಮದ್​​​ ಮಸೂರ್​​ ಜತೆಗೆ ಕೈಜೋಡಿಸಿದ್ದಾರೆ.

Source: newsfirstlive.com Source link