ಕಳೆದ ಬಾರಿ ಮೈತ್ರಿಗೆ ಮುಹೂರ್ತ; ಈಗ ಭ್ರಷ್ಟಾಧ್ಯಕ್ಷರಿಗೆ ಖೆಡ್ಡಾನಾ?- ಸಿದ್ದರಾಮಯ್ಯ ಬಗ್ಗೆ ಬಿಜೆಪಿ ವ್ಯಂಗ್ಯ

ಕಳೆದ ಬಾರಿ ಮೈತ್ರಿಗೆ ಮುಹೂರ್ತ; ಈಗ ಭ್ರಷ್ಟಾಧ್ಯಕ್ಷರಿಗೆ ಖೆಡ್ಡಾನಾ?- ಸಿದ್ದರಾಮಯ್ಯ ಬಗ್ಗೆ ಬಿಜೆಪಿ ವ್ಯಂಗ್ಯ

ಬೆಂಗಳೂರು: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಜಿಂದಾಲ್​ ಪ್ರಕೃತಿ ಚಿಕಿತ್ಸಾಲಯದಲ್ಲಿ 10 ದಿನಗಳ ಕಾಲ ಚಿಕಿತ್ಸೆ ಪಡೆದು ಇಂದು ಬೆಂಗಳೂರಿಗೆ ಮರಳಿದ್ದಾರೆ. ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ಸಾಗುತ್ತಲೇ ಬಿಜೆಪಿ ಸಿದ್ದರಾಮಯ್ಯ ಅವರ ಕಾಲೆಳೆಯುವ ಪ್ರಯತ್ನ ಮಾಡಿದೆ.

ಬಿಜೆಪಿ ಕರ್ನಾಟಕ ಟ್ವಿಟರ್ ಅಕೌಂಟ್ ಮೂಲಕ ಟ್ವೀಟ್ ಮಾಡಿರುವ ಬಿಜೆಪಿ ಭ್ರಷ್ಟಾಧ್ಯಕ್ಷರಿಗೆ ಖೆಡ್ಡಾ ತಯಾರಾಗಿದೆಯೇ ಎಂದು ಕೇಳಿದೆ. ಮಾನ್ಯ ಸಿದ್ದರಾಮಯ್ಯನವರೇ.. ಕಳೆದ ಬಾರಿ ನೀವು ಪ್ರಕೃತಿ ಚಿಕಿತ್ಸೆಗೆ ಹೋದಾಗ ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತ ಇಟ್ಟಿದ್ದಿರಿ. ಆದರೆ ಈ ಬಾರಿ ನೀವು ಸದ್ದೇ ಮಾಡದೆ ರಹಸ್ಯ ಕಾರ್ಯಾಚರಣೆ ರೂಪಿಸಿರುವ ಹಾಗಿದೆ. ಭ್ರಷ್ಟಾಧ್ಯಕ್ಷರಿಗೆ ಖೆಡ್ಡಾ ತಯಾರಾಗಿದೆಯೇ ಎಂದು ಕೇಳಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದರು. ಈ ವೇಳೆ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದಲೇ ಮೈತ್ರಿ ಕೆಡವಲು ಮುಂದಾಗಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು.

Source: newsfirstlive.com Source link