ಡ್ರಗ್ಸ್ ಕೇಸ್​​; ಇ.ಡಿ ಎದುರು ವಿಚಾರಣೆಗೆ ಹಾಜರಾದ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್

ಡ್ರಗ್ಸ್ ಕೇಸ್​​; ಇ.ಡಿ ಎದುರು ವಿಚಾರಣೆಗೆ ಹಾಜರಾದ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್

ಸ್ಯಾಂಡಲ್​​ವುಡ್​ನಲ್ಲಿ ಮಾತ್ರವಲ್ಲದೇ ಟಾಲಿವುಡ್​ ಇಂಡಸ್ಟ್ರಿಯಲ್ಲೂ ಡ್ರಗ್ಸ್​ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ತಣಗಾಗಿದ್ದ ಪ್ರಕರಣದ ವಿಚಾರಣೆಗೆ ಸದ್ಯ ವೇಗ ಪಡೆದುಕೊಂಡಿದೆ. ಟಾಲಿವುಡ್​​ನ ಸ್ಟಾರ್ ನಟ, ನಟಿಯರು ಹಾಗೂ ನಿರ್ದೇಶಕರಿಗೆ ಇ.ಡಿ.ಅಧಿಕಾರಿಗಳು ನೋಟಿಸ್​ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇದರಂತೆ ಇಂದು ನಿರ್ದೇಶಕ ಪೂರಿ ಜಗನ್ನಾಥ್ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಆಗಸ್ಟ್​ 31 ರಿಂದ ಸೆ.22ರ ವರೆಗೂ ಸಾಲು ಸಾಲಾಗಿ ಇ.ಡಿ ಅಧಿಕಾರಿಗಳು ಹಲವರ ವಿಚಾರಣೆ ನಡೆಸಲಿದ್ದು, ಇಂದು ಬೆಳಗ್ಗೆ ಪೂರಿ ಜಗನ್ನಾಥ್ ವಿಚಾರಣೆಗೆ ಹಾಜರಾಗಿದ್ದರು. ಹೈದರಾಬಾದ್​​ನ ಬಷೀರ್​ ಬಾಗ್​​ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ನಡೆದಿದ್ದು, ಸುಮಾರು 8 ಅಧಿಕಾರಿಗಳು ಪೂರಿ ಜಗನ್ನಾಥ್ ಅವರನ್ನು ಪ್ರಶ್ನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪೂರಿ ಜಗನ್ನಾಥ್ ಅವರೊಂದಿಗೆ ಅವರ ಪುತ್ರ ಚಾರ್ಟೆಡ್​ ಅಕೌಂಟೆಂಟ್​​ ಕೂಡ ಇ.ಡಿ ಕಚೇರಿಗೆ ಆಗಮಿಸಿದ್ದರು.

ಇನ್ನು ಡ್ರಗ್ಸ್ ವ್ಯವಹಾರದಲ್ಲಿ ಭಾರೀ ಪ್ರಮಾಣ ಹಣವನ್ನು ವಿದೇಶಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಈ ಪ್ರಕರಣದ ಸಂಬಂಧ ಇ.ಡಿ ಬರೋಬ್ಬರಿ 12 ಮಂದಿ ಸ್ಟಾರ್​ ಗಳಿಗೆ ನೋಟಿಸ್ ಜಾರಿ ಮಾಡಿದೆ. ಇದರಲ್ಲಿ ರಾಕುಲ್​ ಪ್ರೀತ್​ ಸಿಂಗ್​​, ರಾಣಾ ದಗ್ಗುಬಾಟಿ, ರವಿ ತೇಜ, ಚಾರ್ಮಿ ಕೌರ್, ನವದೀಪ್, ಮುಮೈತ್​ ಖಾನ್ ಸೇರಿದಂತೆ ಪ್ರಮುಖ ಸ್ಟಾರ್​​ಗಳಿಗೆ ನೋಟಿಸ್​ ನೀಡಲಾಗಿದೆ.

Source: newsfirstlive.com Source link