ಐಪಿಎಲ್​ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ವಿದಾಯ ಘೋಷಿಸಿದ ಡೇಲ್ ಸ್ಟೇನ್

ಐಪಿಎಲ್​ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ವಿದಾಯ ಘೋಷಿಸಿದ ಡೇಲ್ ಸ್ಟೇನ್

ಸೌತ್​ ಆಫ್ರಿಕಾದ ಸ್ಟಾರ್​ ವೇಗಿ ಡೇಲ್ ​​ಸ್ಟೇನ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್​ ಬದುಕಿಗೆ ಗುಡ್​ ಬೈ ಹೇಳಿರುವ 38 ವರ್ಷದ ವೇಗಿ ತಮ್ಮ ನಿವೃತ್ತಿ ಕುರಿತು ಟ್ವಿಟರ್​ನಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

2004ರ ಡಿಸೆಂಬರ್​ 17ರಂದು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​​ ಪಂದ್ಯಕ್ಕೆ ಕಾಲಿಟ್ಟಿದ್ದ ಸ್ಟೇಯ್​​, 17 ವರ್ಷಗಳ ಕ್ರಿಕೆಟ್​​ನಲ್ಲಿ ಸೇವೆ ಸಲ್ಲಿಸಿದ್ದಾರೆ. ತನ್ನ ವೇಗದ ಬೌಲಿಂಗ್​ ಮೂಲಕವೇ ಎದುರಾಳಿ ಬ್ಯಾಟ್ಸ್​​ಮನ್​ಗಳಿಗೆ ನಡುಕ ಹುಟ್ಟಿಸುತ್ತಿದ್ದ ಡೇಲ್​ ಸ್ಟೇನ್​, ಇತ್ತೀಚಿನ ವರ್ಷಗಳಲ್ಲಿ ಇಂಜುರಿ ಸಮಸ್ಯೆಯಿಂದ ಕ್ರಿಕೆಟ್​​ನಿಂದ ಹೊರಗುಳಿದಿದ್ದರು. ಈ ಇಂಜುರಿ ಸ್ಟೇಯ್​​ ಕರಿಯರ್​​ ಅನ್ನೇ ನುಂಗಿ ಹಾಕಿತ್ತು.

93 ಟೆಸ್ಟ್​​ ಪಂದ್ಯ, ಹಾಗೆಯೇ 125 ಏಕದಿನ ಮತ್ತು 47 ಟಿ20 ಪಂದ್ಯಗಳನ್ನ ಆಡಿದ್ದಾರೆ. ಟೆಸ್ಟ್​​ ಕ್ರಿಕೆಟ್​​​ನಲ್ಲಿ 439 ವಿಕೆಟ್​ ಕಬಳಿಸಿದರೆ, ಏಕದಿನದಲ್ಲಿ 196, ಟಿ20 ಪಂದ್ಯದಲ್ಲಿ 64 ವಿಕೆಟ್​ ಪಡೆದಿರುವ ಸಾಧನೆ ಮಾಡಿದ್ದಾರೆ. ಸುಮಾರು 20 ವರ್ಷಗಳ ತರಬೇತಿ, ಪಂದ್ಯಗಳು, ಪ್ರಯಾಣ, ಸೋಲು-ಗೆಲುವು, ಸಿಹಿ-ಕಹಿ. ಆಟಗಾರರ ಸಹೋದರತ್ವ. ಹೀಗೆ ಹಲವು ನೆನಪುಗಳಿವೆ. ಹೀಗಾಗಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಇಂದು ನಾನು ಅಧಿಕೃತವಾಗಿ ಕ್ರಿಕೆಟ್​​ನಿಂದ ನಿವೃತ್ತಿ ಹೊಂದಿದ್ದೇನೆ ಎಂದು ತನ್ನ ನಿವೃತ್ತಿ ಪತ್ರದಲ್ಲಿ ಬರೆದಿದ್ದಾರೆ. ಇನ್ನು ಐಪಿಎಲ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಡೇಲ್​ಸ್ಟೇಯ್​ ಆಡಿದ್ದರು.

Source: newsfirstlive.com Source link