ನಾಪತ್ತೆಯಾಗಿದ್ದ ರಾಯಚೂರು FDC ಬೆಂಗಳೂರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ರಾಯಚೂರು FDC ಬೆಂಗಳೂರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ರಾಯಚೂರು: ನಿಗೂಢವಾಗಿ ನಾಪತ್ತೆಯಾಗಿದ್ದ ರಾಯಚೂರು ಎಸಿ ಕಚೇರಿಯ FDC ಪ್ರಕಾಶ್ ಬಾಬು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬೆಂಗಳೂರಿನ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯ ಹಿಂದುಸ್ಥಾನ್ ಹೋಟೆಲ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಗಸ್ಟ್ 23 ರಂದು ಕಚೇರಿಯಿಂದ ಪ್ರಕಾಶ್ ಬಾಬು ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನೆಲೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕಾಶ್ ಬಾಬು ಹುಡುಕಾಟಕ್ಕೆ ಎರಡು ತಂಡಗಳನ್ನ ರಾಯಚೂರು ಎಸ್ಪಿ ರಚಿಸಿದ್ದರು. ಪ್ರಾರಂಭದಲ್ಲಿ ಗೋವಾದಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಆದರೆ ನಾಪತ್ತೆಯಾಗಿ 8 ದಿನಗಳ ಬಳಿಕ ಬೆಂಗಳೂರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಂತೆ ಕಾಣ್ತಿದೆ ಎನ್ನಲಾಗಿದೆ. ಆಡಿಟ್ ಟೀಮ್ ಜಿಲ್ಲೆಗೆ ಬರುತ್ತೆ ಅನ್ನೋ ಮಾಹಿತಿ ಗೊತ್ತಾದ್ಮೇಲೆ ಪ್ರಕಾಶ್ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರಕಾಶ್ ಬಾಬು ಆತ್ಮಹತ್ಯೆ ಸುತ್ತ ಅನುಮಾನಗಳು ಶುರುವಾಗಿವೆ.

ಇದನ್ನೂ ಓದಿ: ರಾಯಚೂರು ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿ ನಿಗೂಢ ನಾಪತ್ತೆ

Source: newsfirstlive.com Source link