ಸೌದಿ ಅರೇಬಿಯಾ ಏರ್​​ಪೋರ್ಟ್​ ಮೇಲೆ ಡ್ರೋನ್​​ ದಾಳಿ; ಎಂಟು ಮಂದಿಗೆ ತೀವ್ರ ಗಾಯ

ಸೌದಿ ಅರೇಬಿಯಾ ಏರ್​​ಪೋರ್ಟ್​ ಮೇಲೆ ಡ್ರೋನ್​​ ದಾಳಿ; ಎಂಟು ಮಂದಿಗೆ ತೀವ್ರ ಗಾಯ

ಸೌದಿ ಅರೇಬಿಯಾ ಏರ್​​ಪೋರ್ಟ್​ ಮೇಲೆ ಡ್ರೋನ್​​​ ದಾಳಿ ನಡೆಸಲಾಗಿದೆ. ಈ ಡ್ರೋನ್​​ ದಾಳಿಯಿಂದ ಎಂಟು ಜನ ಸಾರ್ವಜನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಹಿಂದೆಯೇ ಸೌದಿ ಅರೇಬಿಯಾದ ಅಭಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋನ್​ ದಾಳಿ ನಡೆಸಲಾಗಿತ್ತು. ಈಗ ಎರಡನೇ ಬಾರಿಗೆ ಈ ಏರ್​​​ಪೋರ್ಟ್​ ಗುರಿಯಾಗಿಸಿ ಡ್ರೋನ್​​ ದಾಳಿ ಮಾಡಲಾಗಿದೆ. ಈ ಡ್ರೋನ್​ ದಾಳಿಯಲ್ಲಿ 8 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅದೃಷ್ಟವಶಾತ್​​​ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 2ನೇ ಅಲೆಗಿಂತ 3ನೇ ಅಲೆ ಬಹಳ ಡೇಂಜರ್​​​; ಸರ್ಕಾರಕ್ಕೆ PHANA ಸಲ್ಲಿಸಿದ ವರದಿಯಲ್ಲಿ ಏನಿದೆ?

ಇನ್ನು, ಡ್ರೋನ್​​ ದಾಳಿ ಬಗ್ಗೆ ಸೌದಿ ಅರೇಬಿಯಾ ಏರ್​​ಪೋರ್ಟ್​ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಯಾರು ಡ್ರೋನ್​ ದಾಳಿ ನಡೆಸಿದ್ದಾರೆ ಎಂದು ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Source: newsfirstlive.com Source link