ಗೋವಿಂದಪುರ ಡ್ರಗ್​​ ಪ್ರಕರಣ; ಬಂಧಿತ ಆರೋಪಿಗಳು 5 ದಿನ ಪೊಲೀಸ್​ ಕಸ್ಟಡಿಗೆ

ಗೋವಿಂದಪುರ ಡ್ರಗ್​​ ಪ್ರಕರಣ; ಬಂಧಿತ ಆರೋಪಿಗಳು 5 ದಿನ ಪೊಲೀಸ್​ ಕಸ್ಟಡಿಗೆ

ಬೆಂಗಳೂರು: ಗೋವಿಂದಪುರ ಡ್ರಗ್ ಪ್ರಕರಣದ ಸಂಬಂಧ ಪೊಲೀಸರು ವಶಕ್ಕೆ ಪಡೆದಿರುವ ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಸಿಟಿ ಸಿವೀಲ್​ ಕೋರ್ಟ್​​ ಆದೇಶ ನೀಡಿದೆ.

ಬಂಧಿತ ಆರೋಪಿಗಳನ್ನು ಇಂದು ಜಸ್ಮಭವನ್ ರಸ್ತೆಯ ಗುರುನಾನಕ್ ಭವನದಲ್ಲಿ ನ್ಯಾಯಾಧೀಶರ ಎದುರು ಪೊಲೀಸರು ಹಾಜರಿ ಪಡಿಸಿದರು. ಪ್ರಕರಣದಲ್ಲಿ ಉದ್ಯಮಿ ಸೋನಿಯಾ ಅಗರ್​​ವಾಲ್​ ಸೇರಿದಂತೆ ದಿಲೀಪ್, ವಚನ್ ಚಿನ್ನಪ್ಪ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.

ಡ್ರಗ್ಸ್​ ಮಾರಾಟ ಜಾಲ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಮೂವರ ನಿವಾಸಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ಈ ಹಿಂದೆ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ನೈಜಿರೀಯಾ ಪ್ರಜೆಗಳನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದರು. ಈ ವೇಳೆ ಡ್ರಗ್ಸ್ ಪ್ಲೆಡರ್​ಗಳ ಮೊಬೈಲ್​ ಕರೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಲಭ್ಯವಾದ ಮಾಹಿತಿ ಅನ್ವಯ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.

Source: newsfirstlive.com Source link