ಕತಾರ್​​​ನಲ್ಲಿ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್ ಭೇಟಿಯಾದ ತಾಲಿಬಾನ್​​​ ನಾಯಕ ಸ್ಟಾನಿಕ್‌ಜೈ

ಕತಾರ್​​​ನಲ್ಲಿ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್ ಭೇಟಿಯಾದ ತಾಲಿಬಾನ್​​​ ನಾಯಕ ಸ್ಟಾನಿಕ್‌ಜೈ

ಕತಾರ್​: ಮಹತ್ವದ ಬೆಳವಣಿಗೆಗಳ ನಡುವೆ ತಾಲಿಬಾನ್ ನಾಯಕ ಶೇರ್ ಮೊಹಮ್ಮದ್ ಸ್ಟಾನಿಕ್‌ಜೈ, ಕತಾರ್‌ನಲ್ಲಿರುವ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್ ಅವರನ್ನು ಭೇಟಿಯಾಗಿದ್ದಾರೆ. ಭಾರತದ ರಾಯಭಾರಿ ಡಾ. ದೀಪಕ್​​ ಮಿತ್ತಲ್​​ರನ್ನು ಮೊದಲ ಬಾರಿಗೆ ಭೇಟಿಯಾಗಿರುವ ಸ್ವಾನಿಕ್​​ಜೈ, ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ಭದ್ರತೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಭಾರತೀಯರು ಯಾವಾಗ ಬೇಕಾದರೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ಹೋಗಬಹುದು. ಅಫ್ಘಾನಿಸ್ತಾನದಲ್ಲಿರುವ ಭಾರತೀಯರಿಗೆ ಭದ್ರತೆ ಒದಗಿಸುವ ಜವಾಬ್ದಾರಿ ನಮ್ಮದು ಎಂದು ತಾಲಿಬಾನ್​​​ ನಾಯಕ ಶೇರ್​​​ ಮೊಹಮ್ಮದ್​​ ಸ್ಟಾನಿಕ್​​​ಜೈ, ದೀಪಕ್​​ ಮಿತ್ತಲ್​​ಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪಂಜ್​​ಶೀರ್​​ ಮೇಲೆ ದಾಳಿ; 9-10 ತಾಲಿಬಾನ್​​ ಉಗ್ರರನ್ನು ಹತ್ಯೆಗೈದ ವಿರೋಧಿ ಪಡೆ

Source: newsfirstlive.com Source link