ವ್ಯಾಕ್ಸಿನೇಷನ್​​ನಲ್ಲಿ ಮತ್ತೊಂದು ದಾಖಲೆ; ಒಂದೇ ದಿನ ಮತ್ತೆ ಒಂದು ಕೋಟಿ ಡೋಸ್ ಲಸಿಕೆ ವಿತರಣೆ

ವ್ಯಾಕ್ಸಿನೇಷನ್​​ನಲ್ಲಿ ಮತ್ತೊಂದು ದಾಖಲೆ; ಒಂದೇ ದಿನ ಮತ್ತೆ ಒಂದು ಕೋಟಿ ಡೋಸ್ ಲಸಿಕೆ ವಿತರಣೆ

ನವದೆಹಲಿ: ಕೊರೊನಾ ವ್ಯಾಕ್ಸಿನೇಷನ್​​ನಲ್ಲಿ ಭಾರತ ಇಂದು ಒಂದೇ ದಿನ ಒಂದು ಕೋಟಿ ಮಂದಿಗೆ ಲಸಿಕೆಯನ್ನ ನೀಡಿ ದಾಖಲೆ ಬರೆದಿದೆ.

2021 ಜನವರಿಯಿಂದ ಭಾರತ ಸರ್ಕಾರ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಿತ್ತು. ಮಧ್ಯಾಹ್ನ 3 ಮೂರು ಗಂಟೆ ಸುಮಾರಿ 72 ಲಕ್ಷ ಮಂದಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗಿತ್ತು. ಇದೀಗ ಕೋಟಿಗೂ ಅಧಿಕ ಮಂದಿಗೆ ಲಸಿಕೆಯನ್ನ ನೀಡಲಾಗಿದೆ.

ಇನ್ನು ಕಳೆದ ಶುಕ್ರವಾರ ಕೂಡ ಒಂದು ಕೋಟಿ ಮಂದಿಗೆ ವ್ಯಾಕ್ಸಿನ್ ನೀಡಲಾಗಿತ್ತು. ಆದರೆ ಅದು ರಾತ್ರಿ ವೇಳೆಗೆ ಒಂದು ಕೋಟಿ ತಲುಪಿತ್ತು. ಕಳೆದ ಶುಕ್ರವಾರ ಒಟ್ಟು 1,00,64,032 ಡೋಸ್ ವ್ಯಾಕ್ಸಿನ್ ನೀಡಲಾಗಿತ್ತು. ವಿಶೇಷ ಅಂದ್ರೆ ಉತ್ತರ ಪ್ರದೇಶ ಒಂದರಲ್ಲೇ 29 ಲಕ್ಷ ಮಂದಿ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಇನ್ನು ಆಗಸ್ಟ್​ 21-27 ರ ಮಧ್ಯೆ ಅತೀ ಹೆಚ್ಚು ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆದಿದೆ. ಅಂದರೆ ವಾರದಲ್ಲಿ ಒಟ್ಟು 4.5 ಕೋಟಿ ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ.

Source: newsfirstlive.com Source link