‘ತಂದೆ ತಾಯಿ ಇಲ್ಲದ ರೋಹಿತ್​​ನ ಸಾಕಿದ್ದು ನಾವೇ’ -ಅಪಘಾತದಲ್ಲಿ ಮೃತಪಟ್ಟ ರೋಹಿತ್​​ ಸಂಬಂಧಿಕರ ಕಣ್ಣೀರು

‘ತಂದೆ ತಾಯಿ ಇಲ್ಲದ ರೋಹಿತ್​​ನ ಸಾಕಿದ್ದು ನಾವೇ’ -ಅಪಘಾತದಲ್ಲಿ ಮೃತಪಟ್ಟ ರೋಹಿತ್​​ ಸಂಬಂಧಿಕರ ಕಣ್ಣೀರು

ಹುಬ್ಬಳ್ಳಿ: ಬೆಂಗಳೂರಿನ ಕೋರಂಮಗಲದ ಭೀಕರ ಕಾರು ಅಪಘಾತ ಪ್ರಕರಣದಲ್ಲಿ ರೋಹಿತ್ ಎಂಬುವವರು ಸಾವನ್ನಪ್ಪಿದ್ದಾರೆ. ಈಗ ಮೃತ ರೋಹಿತ್​​​ನನ್ನು ನೆನೆದು ಕುಟುಂಬಸ್ಥರು ಕಣೀರಿಟ್ಟಿದ್ದಾರೆ.

ರೋಹಿತ್ ನನ್ನ ಕಸೀನ್, ಅವ್ರ ತಂದೆ ತಾಯಿ ಸಾವನ್ನಪ್ಪಿದ್ದಾರೆ. ಹತ್ತು ವರ್ಷದ ಹಿಂದೆಯೇ ಅವರ ತಂದೆ ತಾಯಿ ತೀರಿಹೋದ್ರು. ನಾನು ನಮ್ಮ ಅಪ್ಪ, ರೋಹಿತ್ ಅನ್ನು ನೋಡಿಕೊಳ್ಳುತ್ತಿದ್ವಿ. ಕಳೆದ ಒಂದೂವರೆ ವರ್ಷದ ಹಿಂದೆ ಬೆಂಗಳೂರಿಗೆ ಹೋಗಿದ್ದ ಎಂದು ಮೃತ ರೋಹಿತ್ ಸಂಬಂಧಿ ಭರತ್ ಅಮೃತ್ ಭಾವುಕರಾದರು.

ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದ ರೋಹಿತ್​​​ ಸಾವನ್ನಪ್ಪಿದ ವಿಷಯ ತಿಳಿದು ಬಹಳ ನೋವಾಗಿದೆ. ಬೆಳಿಗ್ಗೆ ನಮಗೆ ವಿಷಯ ಗೊತ್ತಾಗಿ ಅಘಾತ ಅಗಿದೆ. ರೋಹಿತ್​​ಗೆ ಇಬ್ಬರು ಸಹೋದರರು. ಈ ಪೈಕಿ ಒಬ್ಬರು ಅನಾರೋಗ್ಯದಿಂದ ತೀರಿಕೊಂಡಿದ್ದಾರೆ. ರೋಹಿತ್ ಅಣ್ಣ ಮಾತ್ರ ಬದುಕಿರೋದು ಎಂದು ಹೇಳಿದರು.

ಇದನ್ನೂ ಓದಿ: ಮಧ್ಯರಾತ್ರಿ ಬೆಂಗಳೂರಲ್ಲಿ ಭೀಕರ ಆ್ಯಕ್ಸಿಡೆಂಟ್.. 7 ಮಂದಿ ಸಾವು

Source: newsfirstlive.com Source link